ಬೆಳಗಾವಿ- ಕಳಸಾ ಬಂಡೂರಿಯ ವಿಚಾರವಾಗಿ ಮಾತನಾಡುವಂತೆ ರೈತರು ಕೂಗಿದರೂ ಸ್ಪಂದಿಸಿದ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಬೆಳಗಾವಿಯಲ್ಲಿ ಭಾಷಣ ಆರಂಭಿಸಿದ ಪ್ರಸಂಗ ಎದುರಾಯಿತು
ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ರೈತರ ಒತ್ತಾಯಕ್ಕೆ ಮನ್ನಣೆ ನೀಡದೇ ಕೆಎಲ್ಇ ಡಾ. ಜೀರಿಗೆ ಸಭಾಂಗಣದ ಭಾರತೀಯ ಕೃಷಿಕ ಸಮಾಜ ನವದೆಹಲಿ ಕರ್ನಾಟಕ ರಾಜ್ಯ ರಾಷ್ಟ್ರೀಯ ರೈತ ಸಂಘಟನೆಯ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಪರಿಷತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಮತ್ತೊಂದು ಹಸಿರು ಕ್ರಾಂತಿಯಾದರೂ ರೈತರು ಕೃಷಿಯಲ್ಲಿ ಸದೃಢವಾಗಲು ಸಾಧ್ಯವಿಲ್ಲ ರೈತರ ಕೃಷಿ ಸಲುವಾಗಿ ಒಂದು ಯೋಜನೆ ರೂಪಿಸುವ ಅಗತ್ಯವಿದೆ ಎಂದು ರಾಜನಾಥ್ ಸಿಂಗ್ ಹೇಳಿದರು
ಕೃಷಿ ಚಟುವಟಿಕೆ ನಡೆಯುವ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಹೊಂದಿರಬೇಕು ಕೃಷಿಯಲ್ಲಿ ಜನರು ದೇಶದಲ್ಲಿ ಹತಾಶರಾಗುತ್ತಿದ್ದಾರೆ. ಇದರಲ್ಲಿ ಯಾವುದೇ ಲಾಭವಿಲ್ಲ ಎಂದು ತಿಳಿದುಕೊಂಡಿದ್ದಾರೆ 2021ರಲ್ಲಿ ದೇಶದ ಕೃಷಿಯನ್ನು ಸನ್ ರೈಸ್ ಸೆಕ್ಟರ್ ಆಗಲಿದೆ ಎನ್ನುವ ಆಶಯವನ್ನು ರಾಜನಾಥ್ ಸಿಂಗ್ ವ್ಯೆಕ್ತಪಡಿಸಿದರು
ನನ್ನ ತಂದೆ – ತಾಯಿ ಕೃಷಿಕರು ನಾನು ಕೃಷಿ ಮಾಡಿಯೇ ಕೃಷಿ ಸಚಿವನಾಗಿ, ಕೇಂದ್ರದ ಗೃಹ ಸಚಿವನ್ನಾಗಿದ್ದೇನೆ ಕರ್ನಾಟಕದಲ್ಲಿ ಜೆಡಿಎಸ್, ಬಿಜೆಪಿ ಸಮಿಶ್ರ ಸರಕಾರವಿದ್ದ ಸಂದರ್ಭದಲ್ಲಿ ಹಣಕಾಸು ಮಂತ್ರಿ ಯಡಿಯೂರಪ್ಪ ಇದ್ದಾಗ ಇಲ್ಲಿನ ರೈತರ ಕೃಷಿ ಸಾಲದ ಬಡ್ಡಿಯನ್ನು ಕಡಿಮೆ ಮಾಡುವಂತೆ ಸೂಚನೆ ನೀಡಿದ ಮೇಲೆ ಕರ್ನಾಟದ ರೈತರ ಕೃಷಿ ಮೇಲಿನ ಸಾಲದ ಬಡ್ಡಿಯನ್ನು ಸಂಪೂರ್ಣ ಕಡಿಮೆ ಮಾಡಿದರು ಎಂದರು.
ಸಂಸದ ಸುರೇಶ ಅಂಗಡಿ ಮಾತನಾಡಿ, ಸಣ್ಣ ಸಣ್ಣ ಅಂಗಡಿ ವ್ಯಾಪಾರಸ್ಥರು ಶ್ರೀಮಂತರಾಗುತ್ತಿದ್ದಾರೆ. ಆದರೆ ದೇಶದ ಜನತೆಗೆ ಅನ್ನ ನೀಡುವ ರೈತ ಮಾತ್ರ ಶ್ರೀಮಂತನಾಗಿಲ್ಲ. ಕೈಗಾರಿಕಾ ಕಂಪನಿಗಳು ಹಾಗೂ ದೊಡ್ಡ ದೊಡ್ಡ ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡರೆ ಸರಕಾರಗಳು ಕೂಡಲೇ ಪರಿಹಾರ ನೀಡುತ್ತವೆ. ರೈತರ ಪರಿಸ್ಥಿತಿ ದೇಶದಲ್ಲಿ ಗಂಭೀರವಾಗಿದೆ ಸಾಲದ ಸುಳಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಅವರಿಗೆ ಮಾತ್ರ ಪರಿಹಾರ ನೀಡುತ್ತಿಲ್ಲ ಎಂದು ಕಳವಳವ್ಯಕ್ತ ಪಡಿಸಿದರು.