Breaking News
Home / Breaking News / ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಲಿಂಗಾಯತ ಮತಗಳನ್ನು ವಿಭಜಿಸಲು ಗೋಕಾಕ ಮಾಸ್ಟರ್ ಮೈಂಡ್ ಸ್ಕೇಚ್…!!!!!

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಲಿಂಗಾಯತ ಮತಗಳನ್ನು ವಿಭಜಿಸಲು ಗೋಕಾಕ ಮಾಸ್ಟರ್ ಮೈಂಡ್ ಸ್ಕೇಚ್…!!!!!

ಮಹಿಳೆಯನ್ನು ಸೋಲಿಸಲು ತಂತ್ರ ರೂಪಿಸಲು ಮುಂದಾದರೆ ಮಾಸ್ಟರ್ ಮೈಂಡ್ …!!

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರ ಸೇವೆ ಮಾಡಿ ಈ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅಧಿಕಾರ ಇಲ್ಲದಿದ್ದರೂ ಏನು ಬೇಕಾದ್ರೂ ಮಾಡಬಲ್ಲೆ ಎಂದು ಸಾಭೀತು ಮಾಡಿ ತೋರಿಸಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗೆ ಹಲವಾರು ಕೊಡುಗೆ ನೀಡಿದ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಸೋಲಿಸಲು ಬೆಳಗಾವಿಯ ಮಾಸ್ಟರ್ ಮೈಂಡ್ ಲಿಂಗಾಯತ ಸಮಾಜದಲ್ಲೇ ಒಡಕು ಮೂಡಿಸಿ ತಮ್ಮ ಸಮಾಜದ ಪ್ರಾಬಲ್ಯ ಮೆರೆಯಲು ಲಕ್ಷ್ಮೀ ಹೆಬ್ಬಾಳಕರ ಅವರನ್ನು ಸೋಲಿಸಲು ತಂತ್ರ ರೂಪಿಸಿರುವ ವಿಷಯ ಈಗ ಗುಟ್ಟಾಗಿ ಉಳಿದಿಲ್ಲ

ಲಕ್ಷ್ಮೀ ಹೆಬ್ಬಾಳಕರ ಜನಪ್ರಿಯತೆ ಹೆಚ್ಚಾಗುತ್ತಿರುವದನ್ನು ನೋಡಲು ಮತ್ತು ಸಹಿಸಲು ಈ ಮಾಸ್ಟರ್ ಮೈಂಡ್ ಗೆ ಆಗುತ್ತಿಲ್ಲ ಜೆಡಿಎಸ್ ನಿಂದ ಶಿವನಗೌಡ ಪಾಟೀಲ ಎಂಬ ಲಿಂಗಾಯತ ಅಭ್ಯರ್ಥಿಯನ್ನು ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ದಿಂದ ನಿಲ್ಲಿಸಿ ಲಿಂಗಾಯತ ಮತಗಳನ್ನು ವಿಭಜಿಸಿ ಲಿಂಗಾಯತರ ಶಕ್ತಿಯನ್ನು ಕುಗ್ಗಿಸಿ ಮತ್ತೇ ತಮ್ಮ ಸಮಾಜದ ಪ್ರಾಬಲ್ಯವನ್ನು ಮೆರೆಸುವದು ಈ ಮಾಸ್ಟರ್ ಮೈಂಡ್ ಸ್ಕೇಚ್ ಹಾಕಿ ಲಿಂಗಾಯತ ಮತಗಳನ್ನೇ ಛಿದ್ರ..ಛಿದ್ರ ಮಾಡಲು ಹೊರಟಿದ್ದಾರೆ

ಲಕ್ಷ್ಮೀ ಹೆಬ್ಬಾಳಕರ ಗೆದ್ದರೆ ಗೋಕಾಕ ಕೋಟೆಯ ಸಾಮ್ರಾಜ್ಯ ಹಾಳಾಗಬಹುದು.ಲಕ್ಷ್ಮೀ ಜಿಲ್ಲಾ ಮಂತ್ರಿಯೂ ಆಗಬಹುದು ಜಿಲ್ಲೆಯಲ್ಲಿ ಲಿಂಗಾಯತ ನಾಯಕರು ಬೆಳೆಯೋದು ಬೇಡ ನಮ್ಮ ಮನೆತನದವನೇ ಜಿಲ್ಲಾ ಮಂತ್ರಿ ಆಗಬೇಕು ಅದಕ್ಕೆ ಎಷ್ಟು ಕೋಟಿ ಖರ್ಚಾದರೂ ಪರವಾಗಿಲ್ಲ ಲಕ್ಷ್ಮೀ ಹೆಬ್ಬಾಳಕರ ಈ ಬಾರಿಯೂ ಸೀಲ ಬೇಕೆನ್ನುವ ಕನಸು ಗೋಕಾಕ ಸಾಮ್ರಾಜ್ಯದಲ್ಲಿ ಪ್ರತಿ ದಿನ ರಾತ್ರಿ ಬೀಳುತ್ತಿದೆ

ಆದ್ರೆ ಇದಕ್ಕೆಲ್ಲ ತೆಲಿ ಕೆಡುಸಿಕೊಳ್ಳದ ಲಕ್ಷ್ಮೀ ಹೆಬ್ಬಾಳಕರ ಗೋಕಾಕಿನವರ ಜೊತೆ ಜೊತೆ ದೋಸ್ತಿ ಮಾಡಿ ಸತ್ತ ಹೆಣ ದುಬ್ಬಕ್ಕೆ ಕಟ್ಟುಕೊಂಡ ಆಯ್ತಲ್ಲ ಇವರಿಂದ ನನಗೆ ಯಾವ ರೀತಿಯ ಲಾಭ ಆಗದಿದ್ದರೂ ಇವರೇ ನನಗೆ ಶತ್ರುವಾದರಲ್ಲ ಅಂತ ತಿಳಿದು ಲಕ್ಷ್ಮೀ ಹೆಬ್ಬಾಳಕರ ಗೋಕಾಕಿನವರ ಸಹವಾಸವನ್ನೇ ಬಿಟ್ಟಿದ್ದಾರೆ ಎನ್ನುವ ಸುದ್ಧಿ ಈಗ ಚರ್ಚೆಗೆ ಗ್ರಾಸವಾಗಿದೆ

ಒಟ್ಟಾರೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಲಕ್ಷ..ಲಕ್ಷ..ಲಕ್ಷ್ಮೀ ಖರ್ಚು ಮಾಡಿ ಲಕ್ಷ್ಮೀಯ ರಾಜಕೀಯ ಮುಗಿಸುವ ಹುನ್ನಾರ ಮಾಸ್ಟರ್ ಮೈಂಡ್ ಮಾಡಿದ್ದು ಇದಕ್ಕೆ ಲಕ್ಷ್ಮೀ ಹೆಬ್ಬಾಳಕರ ತೆಲೆ ಕೆಡಿಸಿಕೊಳ್ಳದೇ ಗ್ರಾಮೀಣ ಕ್ಷೇತ್ರದಲ್ಲಿ ಒಂದರ ಮೇಲೊಂದು ಅಭಿವೃದ್ಧಿ ಕಾರ್ಯ ಮಾಡಿ ಕೆರೆಗಳನ್ನು ತುಂಬಿಸಿ ಈ ಭಾಗದಲ್ಲಿ ಪಾಪುಲರ್ ಆಗುತ್ತಿರುವ ವಿಷಯ ಮಾಸ್ಟರ್ ಮೈಂಡ್ ನಿದ್ದೆಗೆಡಿಸಿರುವದು ನಿಜ

About BGAdmin

Check Also

ವಿಟಿಯು ಅವ್ಯೆವಹಾರ..ಪ್ರೋಫೆಸರ್ ಯೋಗಾನಂದ ಅರೆಸ್ಟ್

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದಲ್ಲಿ (ವಿಟಿಯು)ಲ್ಯಾಬ್ ಸಾಧನ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿವಿ ಉಪನ್ಯಾಸಕ …

Leave a Reply

Your email address will not be published. Required fields are marked *