Breaking News

ರಾಜು ಸೇಠ ಅವರ ಕಾರ್ಯ ನಿಜವಾಗಿಯೂ ಗ್ರೇಟ್….!

ಬೆಳಗಾವಿ- ಕೊರೋನಾಗೆ ಬೆಳಗಾವಿ ನಗರ ತತ್ತರಿಸಿ ಹೋಗಿದೆ,ಜನ ಚಿಕಿತ್ಸೆಗಾಗಿ ಅಲೆದಾಡುತ್ತಿದ್ದಾರೆ,ಬಿಪಿ,ಶುಗರ್ ಕಾಯಿಲೆಯಿಂದ ಬಳಲುತ್ತಿರುವವರ ಆರೋಗ್ಯ ಏರುಪೇರು ಆದಾಗ ಅಂತಹ ರೋಗಿಗಳಿಗೆ ತುರ್ತಾಗಿ ಚಿಕಿತ್ಸೆ ಸಿಗುತ್ತಿಲ್ಲ,ವಿಶೇಷವಾಗಿ ಉಸಿರಾಟದ ತೊಂದರೆಯಿಂದ ಬಹಳಷ್ಟು ಜನ ಮೃತಪಟ್ಟಿದ್ದನ್ನು ತೀರಾ ಹತ್ತಿರದಿಂದ ಗಮನಿಸಿರುವ ರಾಜು ಸೇಠ ವಿಶೇಷವಾದ ಸೌಲಭ್ಯವನ್ನು ಒದಗಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಬೆಳಗಾವಿಯ ಅಂಜುಮನ್ ಹಾಲ್ ನಲ್ಲಿ 110 ಆಕ್ಸಿಜನ್ ಸಿಲಿಂಡರ್ ಗಳ ವ್ಯೆವಸ್ಥೆ ಮಾಡಿರುವ ಅವರು ವೈದ್ಯಕೀಯ ತಂಡದೊಂದಿಗೆ ಜನರ ಮನೆ ಬಾಗಿಲಿಗೆ ಸೇವೆ ಒದಗಿಸಲು ಮುಂದಾಗಿದ್ದಾರೆ ಬೆಳಗಾವಿಯ ಕಾಂಗ್ರೆಸ್ ಅದ್ಯಕ್ಷ ರಾಜು ಸೇಠ.

ಯುವಕರ ತಂಡವೊಂದನ್ನು ರಚಿಸಿ,ಅವರಿಗೆ ವೈದ್ಯರಿಂದ ಟ್ರೇನಿಂಗ್ ಕೊಟ್ಟು ಆಕ್ಸಿಜನ್ ಸಿಲಿಂಡರ್ ನ್ನು ರೋಗಿಗೆ ಯಾವ ರೀತಿ ಅಳವಡಿಸಬೇಕು ಎನ್ನುವ ಎಲ್ಲ ರೀತಿಯ ತರಬೇತಿ ನೀಡಿ ಯುವಕರ ಪಡೆಯನ್ನು ನಿಯೋಜಿಸಿದ್ದಾರೆ.

ಉಸಿರಾಟದ ತೊಂದರೆ ಇದ್ದವರು ಬೆಳಗಾವಿಯ ಅಂಜುಮನ್ ಸಂಸ್ಥೆಯನ್ನು ಸಂಪರ್ಕ ಮಾಡಿದ್ರೆ ಸಾಕು ಮನೆ ಬಾಗಿಲಿಗೆ ಆಕ್ಸಿಜನ್ ಬರುತ್ತದೆ.

ಈ ಕುರಿತು ಬೆಳಗಾವಿ ಸುದ್ಧಿಯ ಜೊತೆ ಮಾತನಾಡಿದ ರಾಜು ಸೇಠ,ಕೊರೋನಾ ದೊಡ್ಡ ರೋಗ ಅಲ್ಲ,ಜನ ಹೆದರುವ ಅಗತ್ಯವಿಲ್ಲ ಆದರೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇತೆ,ಉಸಿರಾಟದ ತೊಂದರೆಯಿಂದ ಬಹಳಷ್ಟು ಜನ ಮೃತ ಪಟ್ಟಿದ್ದಾರೆ,ಆಕ್ಸಿಜನ್ ಕೊರತೆ ಇದೆ,ಉಸಿರಾಟದ ತೊಂದರೆ ಇದ್ದವರಿಗೆ ಆಕ್ಸಿಜನ್ ಅವಶ್ಯಕತೆ ರುವದನ್ನು ಮನಗೊಂಡು ಪ್ರಾಥಮಿಕ ಹಂತದಲ್ಲಿ 110 ಆಕ್ಸಿಜನ್ ಸಿಲೆಂಡರ್ ಗಳ ವ್ಯೆವಸ್ಥೆ ಮಾಡಿದ್ದೇವೆ.ಅದಲ್ಕಾಗಿಯೇ ವೈದ್ಯರ ತಂಡವೊಂದು ಮಾರ್ಗದರ್ಶನ ಮಾಡುತ್ತದೆ.ಡಾಕ್ಟರ್ ಗಳು ಗೈಡ್ ಮಾಡಿದಂತೆ ಟ್ರೇನಿಂಗ್ ಪಡೆದ ಯುವಕರ ತಂಡ ಮನೆಗೆ ಬಂದು ರೋಗಿಗೆ ಆಕ್ಸಿಜನ್ ವ್ಯೆವಸ್ಥೆ ಮಾಡುತ್ತಾರೆ.ಯಾವುದೇ ಜಾತಿ ಮತ ಪಂತದ ಬೇಧವಿಲ್ಲದೇ ಎಲ್ಲರಿಗೂ ಸೇವೆ ಒದಗಿಸುತ್ತೇವೆ ಎಂದು ರಾಜು ಸೇಠ ಹೇಳಿದರು.

ಬೆಳಗಾವಿಯ ಜನ ಆತಂಕ ಪಡುವ ಅಗತ್ಯವಿಲ್ಲ ನಾವು ಎಲ್ಲ ರೀತಿಯ ಸಹಾಯಕ್ಕೆ ಸಿದ್ಧರಾಗಿದ್ದೇವೆ.ಜನ ಅಂಜದೇ ಧೈರ್ಯವಾಗಿರಬೇಕು.ಅನಗತ್ಯವಾಗಿ ಸುತ್ತಾಡದೇ ಸಾದ್ಯವಾದಷ್ಟು ಮನೆಯಲ್ಲೇ ಇರಬೇಕು ಎಂದು ರಾಜು ಸೇಠ ಬೆಳಗಾವಿಯ ನಿವಾಸಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *