Breaking News
Home / Breaking News / ಮಂತ್ರಿಗಳು ಎಲ್ಲಿದೀರಿ ಹುಡುಕಿಕೊಡಿ’ ಅಭಿಯಾನ- ಸತೀಶ್ ಜಾರಕಿಹೊಳಿ

ಮಂತ್ರಿಗಳು ಎಲ್ಲಿದೀರಿ ಹುಡುಕಿಕೊಡಿ’ ಅಭಿಯಾನ- ಸತೀಶ್ ಜಾರಕಿಹೊಳಿ

ಬೆಳಗಾವಿ- ಬೆಳಗಾವಿಯಲ್ಲಿ ದಿನೇದಿನೇ ಕೊರೊನಾ ಸೋಂಕಿತರ ಹೆಚ್ಚಳವಾಗುತ್ತಿದೆ. ಬೆಳಗಾವಿಗೆ ಎಷ್ಟು ಪ್ರಾಮುಖ್ಯತೆ ನೀಡಬೇಕಿತ್ತೋ ಅಷ್ಟು ಸರ್ಕಾರ ಕೊಟ್ಟಿಲ್ಲ,ಮಂತ್ರಿಗಳು ಎಲ್ಲಿದೀರಿ ಹುಡುಕಿಕೊಡಿ’ ಅಭಿಯಾನ ಆರಂಭಿಸಬೇಕು,ಎಂದು ಸರ್ಕಾರದ ವಿರುದ್ಧ ಸತೀಶ್ ಜಾರಕಿಹೊಳಿ‌ ಆಕ್ರೋಶ ವ್ಯೆಕ್ತಪಡಿಸಿದ್ದಾರೆ.

ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆಗ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌, ಮಂತ್ರಿಗಳು ಎಷ್ಟು ಸಭೆ ನಡೆಸಬೇಕಾಗಿತ್ತೋ ಅಷ್ಟು ಮಾಡಿಲ್ಲ, ಜನರಿಗೆ ಸ್ಪಂದಿಸಿಲ್ಲ, ಬಹಳಷ್ಟು ಮಂತ್ರಿಗಳು ಇನ್ನೂ ಬೆಂಗಳೂರಿನಲ್ಲಿಯೇ ಇದ್ದಾರೆ, ತಮ್ಮ ಕ್ಷೇತ್ರಕ್ಕೂ ಬಂದಿಲ್ಲ, ತಮ್ಮ ಜಿಲ್ಲೆಗೂ ಬಂದಿಲ್ಲ, ಇದೆಲ್ಲಾ ಜನರಿಗೂ ಗೊತ್ತು, ಜನ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸತೀಶ್ ಜಾರಕಿಹೊಳಿ‌ ಜಿಲ್ಲೆಯ ಮಂತ್ರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರತಿ ವಾರಕ್ಕೊಮ್ಮೆ ಸಭೆಯಾಗಬೇಕು ಆದರೆ ಮಂತ್ರಿಗಳೇ ಇಲ್ಲ,ವಿರೋಧ ಪಕ್ಷದವರು, ಎನ್‌ಜಿಓಗಳು, ಜನರ ಸಲಹೆ ಪಡೆಯಬೇಕು, ಮಂತ್ರಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಆದ್ರೆ ಅವರು ಮಾಡ್ತಿಲ್ಲ.ಮಂತ್ರಿಗಳೇ ಇಲ್ಲ ಎಂದರೆ ಯಾರಿಗೆ ಹೇಳಬೇಕು,ನಮಗೆ ತಿಳಿದಿದ್ದನ್ನು ಡಿಸಿಗೆ ಹೇಳಿದ್ದೇವೆ ಅವರು ಜಾರಿ ಮಾಡಿದ್ದಾರೆ, ಇದಕ್ಕಾಗಿ ‘ಮಂತ್ರಿಗಳು ಎಲ್ಲಿದಾರೆ ಹುಡುಕಿ ಕೊಡಿ’ ಅಭಿಯಾನ ಆರಂಭಿಸಬೇಕು ಎಂದು ಸತೀಶ್ ಅಸಮಾಧಾನ ವ್ಯೆಕ್ತ ಪಡಿಸಿದರು.

ಕೊರೊನಾ ನಿರ್ವಹಣೆ ಬಗ್ಗೆ ಲೆಕ್ಕ ಕೊಡುವ ವಿಚಾರದಲ್ಲಿ ಸರ್ಕಾರ ಮರೆ ಮಾಚುತ್ತಿದೆ ಈ ಬಗ್ಗೆ ಅಧಿವೇಶನದಲ್ಲಿ ಪ್ರಶ್ನಿಸುತ್ತೇವೆ.ಕೋವಿಡ್ ನಿರ್ವಹಣೆಗೆ ಒಂದೆಡೆ 4 ಸಾವಿರ ಕೋಟಿ ಖರ್ಚಾಗಿದೆ ಅಂತಾರೆ,ಲೆಕ್ಕ ಕಡಿಮೆ ಕೊಡ್ತಾರೆ, ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುತ್ತೇವೆ,ಕೋವಿಡ್ ರೋಗಿಗಳಿಗೆ ಕೆಲವು ಜಿಲ್ಲೆಗಳಿಗೆ ಬೆಡ್ ಕೊರತೆ ಇದೆ, ಕಾಂಗ್ರೆಸ್ ಪಕ್ಷ ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡುತ್ತಿದೆ.ನಮ್ಮ ಮನವಿಗೆ ಸರ್ಕಾರ ಸ್ಪಂದಿಸಿದೆ, ಇನ್ನೂ ಮಾಡಬೇಕಾಗಿದೆ,

ಖಾಸಗಿ ಆಸ್ಪತ್ರೆಗಳ ಮೇಲೆ ನಾವು ಡಿಪೆಂಡ್ ಆಗೋದೇ ಬೇಡ,ನಮ್ಮಲ್ಲಿ ಸಾಕಷ್ಟು ಹಾಸ್ಟೆಲ್‌ಗಳಿವೆ ಇದನ್ನ ಬಳಸಬೇಕು, ಈಗಾಗಲೇ ಕೆಲವೆಡೆ ಹೋಬಳಿ ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಿದ್ದಾರೆ. ಈಗ ಬೆಳಗಾವಿಯಲ್ಲಿ ಸ್ವಲ್ಪ ರಶ್ ಕಡಿಮೆ ಆಗಿದೆ,ಬೆಳಗಾವಿ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಜಾಸ್ತಿಯಾಗುತ್ತಿದೆ, ಕೋವಿಡ್ ನಿಂದಲೇ ಮೃತಪಡುತ್ತಿದ್ದಾರೆ ಎಂದು ಹೇಳಕ್ಕಾಗಲ್ಲ,ಕೋವಿಡ್ ಡೆತ್ ರೆಷಿಯೋ ಕಡಿಮೆಯೇ ಇದೆ, ಹೃದಯ ಸಂಬಂಧಿ ಸೇರಿ ಇತರೆ ರೋಗಗಳಿಂದಲೂ ಸಾವನ್ನಪ್ಪುತ್ತಿದ್ದಾರೆ,ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಹೇಳಿದರು.

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *