Breaking News

ಶಾಸಕ ರಾಜು ಸೇಠ ಅವರಿಂದ ಬೆಳಗಾವಿ ಸಿಟಿ ರೌಂಡ್ಸ್…!!!

ಬೆಳಗಾವಿ- ಅಧಿವೇಶನದ ಬಿಡುವಿನ ಸಮಯದಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅಸೀಪ್ ( ರಾಜು) ಸೇಠ ಅವರು ಬೆಳಗಾವಿ ನಗರದ ಉತ್ತರ ಮತಕ್ಷೇತ್ರದ ಹಲವಾರು ಪ್ರದೇಶಗಳಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಕೇಳಿದ್ರು…

ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತ ಅಶೋಕ ದುಡಗುಂಟಿ ಅವರ ಜೊತೆ ಜಿಟಿ,ಜಿಟಿ ಮಳೆಯಲ್ಲೂ ಕೈಯಲ್ಲಿ ಛತ್ರಿ ಹಿಡಿದು ನಗರದ ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ್ರು.ಮಳೆ ವಿಪರೀತವಾದಾಗ ಯಾವ ಯಾವ ಪ್ರದೇಶಗಳಲ್ಲಿ ಜನ ಯಾವ ರೀತಿಯ ತೊಂದರೆ ಅನುಭವಿಸುತ್ತಾರೆ.ಅವುಗಳ ನಿವಾರಣೆಗೆ ಏನೆಲ್ಲಾ ಮಾಡಬೇಕಾಗಿದೆ ಎಂದು ಆಯಾ ಪ್ರದೇಶದ ಜನರನ್ನು ಮಾತನಾಡಿಸಿ ಶಾಸಕ ರಾಜು ಸೇಠ ಅವರು ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡರು.

ಬೆಳಗಾವಿಯ ಕೋನವಾಳ ಗಲ್ಲಿ,ಶನಿ ಮಂದಿರ, ಹಾಗೂ ಅಮನ್ ನಗರ ಸೇರಿದಂತೆ ಬೆಳಗಾವಿ ಉತ್ತರ ಮತಕ್ಷೇತ್ರದ ಹಲವಾರು ಪ್ರದೇಶಗಳ ರೌಂಡ್ಸ್ ಹಾಕಿದ ರಾಜು ಸೇಠ, ಶನಿ ಮಂದಿರದ ಎದುರಿನಲ್ಲಿ ಇರುವ ರೇಲ್ವೆ ಓವರ್ ಬ್ರಿಡ್ಜ್ ಹತ್ತಿರ ದಿನನಿತ್ಯ ಟ್ರಾಫಿಕ್ ಜಾಮ್ ಆಗುತ್ತಿದ್ದು ಈ ಪ್ರದೇಶದಲ್ಲಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ಇದೆ, ಇಲ್ಲಿರುವ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಮಾಡಬೇಕಾಗಿರುವ ಪರ್ಯಾಯ ವ್ಯವಸ್ಥೆಯ ಬಗ್ಗೆ ಸ್ಥಳೀಯರನ್ನು ಮಾತನಾಡಿಸಿ ಮಾಹಿತಿ ಪಡೆದ ಶಾಸಕರು ನಂತರ ಪೋಲೀಸ್ ಅಧಿಕಾರಿಗಳ ಜೊತೆ ಮಾತನಾಡಿ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಎಲ್ಲ ರೀತಿಯ ಕ್ರಮ ಜರುಗಿಸುವಂತೆ ಸೂಚಿಸಿದ ಅವರು,ಬೆಳಗಾವಿಯ ಶನಿ ಮಂದಿರದ ಹತ್ತಿರ ಸಂಚಾರ ದಟ್ಟನೆಯನ್ನು ನಿಯಂತ್ರಿಸಲು ಹೆಚ್ವಿನ ಟ್ರಾಫಿಕ್ ಪೋಲೀಸರನ್ನು ನಿಯೀಜಿಸಲು ಸೂಚನೆ ನೀಡಿದ್ರು‌

ನಿರೀಕ್ಷೆಗೂ ಮೀರಿ ಮಳೆಯಾದಾಗ ಬೆಳಗಾವಿಯ ಕೆಲವು ಬಡಾವಣೆಗಳಿಗೆ ನೀರು ನುಗ್ಗುವ ಸಮಸ್ಯೆ ಮಳೆಗಾಲದಲ್ಲಿ ಎದುರಾಗುತ್ತದೆ.ಈ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಿ, ಸಮಗ್ರವಾದ ಯೋಜನೆ ರೂಪಿಸುವಂತೆ ಶಾಸಕ ರಾಜು ಸೇಠ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡುವದರ ಜೊತೆಗೆ ಚರಂಡಿ,ರಸ್ತೆ ಸೇರಿದಂತೆ ಇನ್ನುಳಿದ ಮೂಲಭೂತ ಸೌಕರ್ಯಗಳನ್ನು ಅವಶ್ಯಕತೆ ಇದ್ದಲ್ಲಿ ಒದಗಿಸಲು ಮಾಹಿತಿ ಪಡೆದು ಪ್ರತ್ಯೇಕವಾದ ಯೋಜನೆ ರೂಪಿಸುವಂತೆ ಶಾಸಕ ರಾಜು ಸೇಠ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ರು.

ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ರಾಜು ಸೇಠ,ನಿಗದಿತ ಅವಧಿಯಲ್ಲಿ ಮಳೆಯಾಗದ ಕಾರಣ,ಬೆಳಗಾವಿ ನಗರದಲ್ಲಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಮುಂಜಾಗ್ರತವಾಗಿ ನಗರದ ಹಲವಾರು ಬಡಾವಣೆಗಳಲ್ಲಿ ಹೊಸ ಬೋರ್ ವೆಲ್ ಹಾಕುವಂತೆ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಲಾಗಿತ್ತು, ಇದಕ್ಕೆ ಜಿಲ್ಲಾಧುಕಾರಿಗಳು ತ್ವರಿತವಾಗಿ ಸ್ಪಂದಿಸಿದ ಕಾರಣ ನಗರದ ಹಲವಾರು ಬಡಾವಣೆಗಳಲ್ಲಿ ಹೊಸ ಬೋರವೆಲ್ ಹಾಕುವ ಕೆಲಸ ನಡೆದಿದೆ.ಬೆಳಗಾವಿ ಉತ್ತರ ಮತಕ್ಷೇತ್ರದ ಜನರ ಅನಕೂಲಕ್ಕಾಗಿ ಏನೆಲ್ಲಾ ಮಾಡಬೇಕಾಗಿದೆ ಅನ್ನೋದನ್ನು ಕ್ಷೇತ್ರದಲ್ಲಿ ಖುದ್ದಾಗಿ ಸುತ್ತಾಡಿ ಮಾಹಿತಿ ಸಂಗ್ರಹಿಸುತ್ತಿದ್ದೇನೆ ಎಂದು ಶಾಸಕ ಸೇಠ ಹೇಳಿದ್ರು.

ಈ ಸಂಧರ್ಭದಲ್ಲಿ ಮಹಾನಗರ ಪಾಲಿಕೆ ಮತ್ತು ನಗರ ನೀರು ಸರಬರಾಜು ಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *