Breaking News

ಮಂತ್ರಿಗಿರಿ ರೇಸ್ ನಲ್ಲಿ ಬೆಳಗಾವಿಯ ಜಾತ್ಯಾತೀತ ಕುಟುಂಬದ, ಶಾಸಕ!

ಬೆಳಗಾವಿ ಯಾರಿಗೆ ಸೇರಿದ್ದು ಎಂದು ವಿಚಾರಣೆ ಮಾಡಲು ಕೇಂದ್ರ ಸರ್ಕಾರಗಳು ರಚಿಸಿದ ಫಜಲ್ ಅಲಿ,ಆಯೋಗ,ಮಹಾಜನ್ ಆಯೋಗ ಬೆಳಗಾವಿಗೆ ಬಂದಾಗ ಎಲ್ಲ ಮುಸ್ಲಿಂ ಸಮಾಜವನ್ನು ಸಂಘಟಿಸಿ ಆಯೋಗಗಳ ಎದುರು ಎಲ್ಲ ಮುಸ್ಲೀಂರನ್ನು ಹಾಜರುಪಡಿಸಿ, ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದು ಪ್ರತಿಪಾದಿಸಿ ಕನ್ನಡದ ಹಿತವನ್ನು ಕಾಪಾಡಿದ ಬೆಳಗಾವಿಯ ನೂರುದ್ದೀನ್ ಸೇಠ ಅವರನ್ನು ಬೆಳಗಾವಿಯ ಕನ್ನಡಿಗರು,ರಾಜ್ಯದ ಜನ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ, ನೂರುದ್ದೀನ್ ಸೇಠ ಅವರ ಸುಪುತ್ರರಾದ ಫಿರೋಜ್ ಸೇಠ ಅವರ ನಂತರ ಈಗ ಅಸೀಫ್ ರಾಜು ಸೇಠ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾಗಿದ್ದು ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ರಚನೆ ಆದಲ್ಲಿ ಸೇಠ ಕುಟುಂಬಕ್ಕೆ ,ರಾಜು ಸೇಠ ಅವರಿಗೆ ಮಂತ್ರಿಸ್ಥಾನ ಕೊಡಬೇಕು ಎನ್ನುವ ಧ್ವನಿ ಎತ್ತಿದೆ. ನೆಕ,ಜಲ,ಕನ್ನಡ ಭಾಷೆಯ ಹಿತ ಕಾಪಾಡಿ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದು ಆಯೋಗಗಳ ಎದುರು ಪ್ರತಿಪಾದಿಸಿದ ಸೇಠ ಕುಟುಂಬಕ್ಕೆ ಈ ಬಾರಿ ಮಂತ್ರಿಸ್ಥಾನ ಕೊಡಬೇಕು ಎನ್ನುವ ಧ್ವನಿ ಕೇಳಿಸುತ್ತಿದೆ.

ಬೆಂಗಳೂರು ಹೊರತಪಡಿಸಿ ಅತಿ ಹೆಚ್ಚು ವಿಧಾನಸಭೆ ಕ್ಷೇತ್ರ ಹೊಂದಿರೋ ಬೆಳಗಾವಿಯಲ್ಲಿ ಮುಸ್ಲಿಂ ಶಾಸಕರೊಬ್ಬರು ಈಗ ಮಂತ್ರಿಗಿರಿಯ ರೇಸ್ ನಲ್ಲಿ ಇದ್ದಾರೆ. ಸಂಪುಟ ವಿಸ್ತರಣೆ ಆದರೆ ನನಗು ಅವಕಾಶ ಕೊಡಿ ಎಂದು ಕೇಳುತ್ತಿದ್ದಾರೆ. ಇದೇ ಮೊದಲ ಸಲ ವಿಧಾನಸಭೆ ಪ್ರವೇಶ ಮಾಡಿದ್ರು ಈ ಹಿಂದಿನ ಸಹೋದರ ಪಕ್ಷದ ಕೆಲಸ ಹಾಗೂ ಉತ್ತರ ಕರ್ನಾಟಕ ದೃಷ್ಟಿಯಲ್ಲಿ ಇಟ್ಟುಕೊಂಡು ಸಚಿವ ಸ್ಥಾನ ಕೇಳುತ್ತಿದ್ದಾರೆ

ಬೆಳಗಾವಿ ಜಿಲ್ಲೆಯ 18 ವಿಧಾನಸಭೆ ಕ್ಷೇತ್ರಗಳ ಪೈಕಿ 11ರಲ್ಲಿ ಕಾಂಗ್ರೆಸ್ ಶಾಸಕರು ಗೆದ್ದಿದ್ದಾರೆ. ಈ ಪೈಕಿ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಈಗಾಗಲೇ ಸಚಿವರಾಗಿದ್ದಾರೆ. ಈಗ ಬೆಳಗಾವಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆಸೀಫ್ ಸೇಠ್ ಸಹ ನನಗೂ ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ಉತ್ತರ ಕರ್ನಾಟಕ ಭಾಗದ ಹಲವು ಕ್ಷೇತ್ರಗಳಲ್ಲಿ ಮುಸ್ಲಿಂ ಮತದಾರರೇ ನಿರ್ಣಾಯಕರಾಗಿದ್ದಾರೆ. ಆದರೇ ಈ ಭಾಗಕ್ಕೆ ಯಾವೊಬ್ಬ ಶಾಸಕನಿಗೂ ಮಂತ್ರಿಗಿರಿ ಸಿಕ್ಕಿಲ್ಲ.

ಈ ಹಿಂದೆ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಆಸೀಫ್ ಸೇಠ್ ಸಹೋದರ ಫಿರೋಜ್ ಸೇಠ್ ಸಹ ಎರಡು ಸಲ ಶಾಸಕರಾಗಿ ಆಯ್ಕೆಯಾಗಿದ್ದರು. ಕ್ಷೇತ್ರದ ಹಲವು ಕ್ಷೇತ್ರಗಳಲ್ಲಿ ನಿರ್ಣಾಯಕರಾಗಿರೋ ಮುಸ್ಲಿಂ ಮತವನ್ನು ಕಾಂಗ್ರೆಸ್ ಸೆಳೆಯುವಲ್ಲಿ ಸೇಠ್ ಬ್ರದರ್ಸ್ ಮಹತ್ವದ ಪಾತ್ರ ವಹಿಸಿದ್ದಾರೆ. ಹಿಂಡಸಗೇರಿ, ಜಬ್ಬಾರ್ ಖಾನ್ ಹೊನ್ನಳ್ಳಿ ಉತ್ತರ ಕರ್ನಾಟಕದ ಭಾಗದಿಂದ ಸಚಿವರಾಗಿದ್ದರು. ಬಳಿಕ ಯಾವೊಬ್ಬ ಮುಸ್ಲಿಂ ಶಾಸಕನಿಗೂ ಸಚಿವಗಿರಿ ಒಲಿದಿಲ್ಲ. ಉತ್ತರ ಕರ್ನಾಟಕದಲ್ಲಿ ಆಸೀಫ್ ಸೇಠ್ ಹಾಗೂ ಇತ್ತೀಚಿಗೆ ಶಿಗ್ಗಾವಿಂದ ಯಾಸಿರ್ ಖಾನ್ ಪಠಾಣ ಆಯ್ಕೆಯಾಗಿದ್ದಾರೆ. ಸೇಠ್ ಗೆ ಸಚಿವ ಸ್ಥಾನ ನೀಡುವ ಮೂಲಕ ಪಕ್ಷ ಸಂಘಟನೆಗೆ ಮತ್ತಷ್ಟು ಬಲ ನೀಡಿ ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.

ಬೆಳಗಾವಿ ಜಿಲ್ಲೆಯಿಂದ ಯಾರೊಬ್ಬ ಮುಸ್ಲೀಂ ಶಾಸಕ ಮಂತ್ರಿಯಾಗಿಲ್ಲ ಎಲ್ಲ ಸಮಾಜದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾತ್ಯಾತೀತವಾಗಿ ಸೇವೆ ಮಾಡುತ್ತ ಬಂದಿರುವ ಬೆಳಗಾವಿಯ ಸೇಠ ಕುಟುಂಬಕ್ಕೆ ಮಂತ್ರಿಸ್ಥಾನ ಕೊಡಬೇಕು ಎನ್ನುವ ಚರ್ಚೆ ಮತ್ತು ಬೇಡಿಕೆ ಇದೆ.ಅದರಲ್ಲೂ ಕೋವೀಡ್ ಸಂಧರ್ಭದಲ್ಲಿ ಶಾಸಕ ರಾಜು ಸೇಠ ಶಾಸಕರಾಗಿರಲಿಲ್ಲ ಅಧಿಕಾರ ಇಲ್ಲದಿದ್ದರೂ ಕೋವೀಡ್ ಸಂಧರ್ಭದಲ್ಲಿ ಅವರು ಮಾಡಿರುವ ಜಾತ್ಯಾತೀತ ಸೇವೆ ಮಾಡಿರುವ ರಾಜು ಸೇಠ ಮಂತ್ರಿ ಆಗಬೇಕು ಎನ್ನುವ ಒತ್ತಾಯ ಕೇಳಿ ಬರುತ್ತಿದೆ.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *