ಬೆಳಗಾವಿ – ಬೆಳಗಾವಿ ನಗರದ ಮುಖ್ಯ ಜಲದ ಮೂಲವಾಗಿರುವ ರಕ್ಕಸಕೊಪ್ಪ ಜಲಾಶಯದಲ್ಲಿ ನೀರಿನ ಮಟ್ಟ ನೆಲ ಹಿಡಿದಿದ್ದು ಜಲಾಶಯ ಸಂಪೂರ್ಣವಾಗಿ ಖಾಲಿ ಆಗುವ ಹಂತ ತಲುಪಿದೆ
ರಕ್ಕಸಕೊಪ್ಪ ಜಲಾಶಯದಿಂದ ಬೆಳಗಾವಿಯ ಹಿಂಡಲಗಾ ಪಂಪ್ ಹೌಸ್ ಗೆ ದಿನನಿತ್ಯ ಹನ್ನೆರಡು MGD ನೀರಿನ ಬದಲು ಕೇವಲ ಆರು MGD ನೀರು ಪಂಪ್ ಮಾಡಲಾಗುತ್ತಿದ್ದು ಬೆಳಗಾವಿ ನಗರದ 24×7 ನೀರು ಪೂರೈಕೆಯ ಪ್ರದೇಶಗಳಲ್ಲಿ ಸೇರಿದಂತೆ ನಗರದ ಕೆಲವು ಪ್ರದೇಶಗಳಲ್ಲಿ ಕಳೆದ ಐದು ದಿನಗಳಿಂದ ನೀರು ಪೂರೈಕೆ ಆಗುತ್ತಿಲ್ಲ
ಹಿಡಕಲ್ ಜಲಾಶಯದಿಂದ ನೀರು ಪಂಪ್ ಮಾಡುವ ವಿಷಯದಲ್ಲಿಯೂ ಎಡವಟ್ಟಾಗಿದೆ ಇಲ್ಲಿ ಪದೇ ಪದೇ ವಿದ್ಯುತ್ತ ಕೈ ಕೊಡುತ್ತಿರುದರಂದ ಹಿಡಕಲ್ ನೀರು ಪೂರೈಕೆಯಲ್ಲೂ ತೊಂದರೆ ಆಗುತ್ತಿದೆ
ಬೆಳಗಾವಿ ನಗರದ ಶಾಹು ನಗರ ಸೇರಿದಂತೆ ನಗರದ ಕೆಲವು ಪ್ರದೇಶಗಳ ನಲ್ಲಿಗಳಲ್ಲಿ ಕಳೆದ ಐದು ದಿನಗಳಿಂದ ನೀರು ಹರಿದಿಲ್ಲ
ಈ ಕುರಿತು ನಗರ ನೀರು ಸರಬರಾಜು ಮಂಡಳಿಯ ಪ್ರಸನ್ನಮೂರ್ತಿಯವರನ್ನು ವಿಚಾರಿಸಿದಾಗ ರಕ್ಕಸಕೊಪ್ಪ ಜಲಾಶಯದ ಪ್ರದೇಶದಲ್ಲಿ ಮಳೆ ಆಗಿಲ್ಲ ಹೀಗಾಗಿ ಜಲಾಶಯದಲ್ಲಿ ಒಳಹರಿವು ಇನ್ನು ಆರಂಭವಾಗಿಲ್ಲ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿರುವದರಿಂದ ನಮಗೆ ಬೇಕಾದಷ್ಟು ನೀರನ್ನು ಪಂಪ್ ಮಾಡಲು ಸಾಧ್ಯವಾಗುತ್ತಿಲ್ಲ ಈ ಜಲಾಶಯದಿಂದ ದಿನನಿತ್ಯ ಕೇವ ಐದು MGD ಯಿಂದ ಆರು MGD ನೀರುಮಾತ್ರ ಪಂಪ್ ಮಾಡಲು ಸಾಧ್ಯವಾಗುತ್ತಿದೆ ನೀರು ಪೂರೈಕೆಯಲ್ಲಿ ಆಗುತ್ತಿರುವ ತೊಂದರೆಯನ್ನು ಶೀಘ್ರದಲ್ಲಿಯೇ ನಿವಾರಿಸುತ್ತೇವೆ ಹಿಡಕಲ್ ಜಲಾಶಯದಿಂದ ಹೆಚ್ಚು ನೀರನ್ನು ಪಂಪ್ ಮಾಡಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಪ್ರಸನ್ನಮೂರ್ತಿ ತಿಳಿಸಿದ್ದಾರೆ