Breaking News

ರೈತರ ಹತ್ಯೆ ಖಂಡಿಸಿ ಘರ್ಜಿಸಿದ ಯುವ ಪಡೆ

ಬೆಳಗಾವಿ:

ಮದ್ಯ ಪ್ರದೇಶದಲ್ಲಿ ರೈತರ ಮೇಲೆ ಗೋಲಿಬಾರ್  ಹಾಗೂ ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡದಿರುವುದನ್ನು ಖಂಡಿಸಿ ಬೆಳಗಾವಿ ಯುಥ್ ಕಾಂಗ್ರೆಸ್ ಕಾರ್ಯಕರ್ತರು ರೈಲು ತಡೆದು ಪ್ರತಿಭಟನೆ ನಡೆಸಲು ಹೊರಟಾಗ ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದ ಘಟನೆ ರವಿವಾರ ನಡೆಯಿತು.

ಮದ್ಯಪ್ರದೇಶದಲ್ಲಿ ಬಿಜೆಪಿ ಸರಕಾರ ರೈತರ ಮೆಲೆ ಸಾಲ ಮನ್ನಾ ಮಾಡುವ ಹೋರಾಟ ನಡೆಸುತ್ತಿರುವಾಗ ಅಲ್ಲಿನ ಸರಕಾರ ರೈತರ ಮೇಲೆ ಗೋಲಿ ಬಾರ್ ನಡೆಸಿ ಹತ್ಯೆ ಮಾಡಿಲ್ಲ. ಈ ಸ್ಥಳಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂದಿ ಅವರು ರೈತರನ್ನು ಭೇಟಿ ಮಾಡಲು ಬಿಡದೇ ಅವರನ್ನೂ ಬಂಧಿಸಿದ್ದು ಖಂಡನೀಯ.

ದೇಶದ ರೈತರು ಸಂಕಷ್ಟದಲ್ಲಿದ್ದಾರೆ. ಕೆಂದ್ರ ಸರಕಾರ  ರೈತರ ಸಮಸ್ಯೆಗಳಿಗೆ ಸ್ಪಂಧಿಸದೇ ಕೆಲ ಉದ್ಯಮಿಗಳ ಹಿತ ಕಾಪಾಡಲು ಸೀಮಿತವಾಗಿದ್ದು, ರೈತರ ಹಾಗೂ ಬಡವರ ಸಂಕಷ್ಟಗಳನ್ನು ಅರ್ಥ ಮಡಿಕೊಳ್ಳದೇ ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೆ ಮತ್ತು ಪ್ರಚಾರಕ್ಕೆ ಮಾತ್ರ ಸೀಮಿತವಾಗಿದ್ದಾರೆ. ರೈತರ ಬೆನ್ನೆಲುಬಾಗಿದ್ದ  ರೈತರನ್ನು ಗುಂಡಿಕಿ ಹತ್ಯೆ ಮಾಡಿದ ಮಧ್ಯಪ್ರದೇಶದ ಬಿಜೆಪಿ ಸರಕಾರ  ರೈತರ ಸಾಲ ಮನ್ನಾ ಮಾಡದೇ ರೈತರನ್ನು ಗುಮಡಿಕ್ಕಿ ಐದು ಜನರನ್ನು ಹತ್ಯೆ ಮಾಡಿರುವುದು ಖಂಡನೀಯ ಪ್ರತಿಭಟನಾ ಕಾರರು ಆಕ್ರೋಶವ್ಯಕ್ತಪಡಿಸಿದರು.

ಮಿೃನಾಲ ಹೆಬ್ಬಾಳಕರ, ಕಾರ್ತಿಕ್ ಪಾಟೀಲ, ಮೆಹಬೂಬ್ ರಾಮದುರ್ಗ, ತೌಷಿಪ್ ಫನಿಬಂದ್, ಅತೀಪ್ ಬೇಪಾರಿ, ವಿಶಾಲ ದೇಸಾಯಿ, ಸಾಧಿಕ್ ಅಂಕಲಗಿ, ಅಶೋಕ ಮಾಳಗಿ, ಪ್ರಶಾಂತ ಪಟ್ಟಶೆಟ್ಟಿ, ಇರ್ಪಾನ್ ಜಮಾದಾರ, ಜಾನ್ ರೋಡೆ, ಪಿ.ಕೆ.ನೀಲಕಟ್ಟಿ, ಇರ್ಪಾನ ತಾಳಿಕೋಟಿ ಸೇರಿದಂತೆ ಯುತ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಬಟನೆಯಲ್ಲಿ ಭಾಗವಹಿಸಿದ್ದರು.

Check Also

ರಿವರ್ ಕ್ರಾಸ್ಸೀಂಗ್ ತರಬೇತಿಗೆ ಹೋಗಿದ್ದ ಬೆಳಗಾವಿಯ ಇಬ್ಬರು ಕಮಾಂಡೋಗಳ ಸಾವು

ಬೆಳಗಾವಿ -ರಿವರ್ ಕ್ರಾಸೀಂಗ್ ತರಬೇತಿಗೆ ಹೋಗಿದ್ದ ಬೆಳಗಾವಿ ಕಮಾಂಡೋ ಸೆಂಟರ್ ನ ಇಬ್ಬರು ಕಮಾಂಡೋಗಳು ಬೋಟ್ ಮುಳುಗಿದ ಪರಿಣಾಮ ಮೃತಪಟ್ಟ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.