Breaking News

ಬೆಳಗಾವಿಯಲ್ಲಿ ಸರ್ ಎಂ .ವಿಶ್ವೇಶ್ವರಯ್ಯ ಕಟ್ಟಿದ ಡ್ಯಾಂ ಭರ್ತಿ……!!

ಬೆಳಗಾವಿ-ಬೆಳಗಾವಿ ಮಹಾನಗರದ ಕುಡಿಯುವ ನೀರಿನ ಮುಖ್ಯ ಮೂಲವಾಗಿರುವ,ಶುದ್ಧ ನೈಸರ್ಗಿಕ ನೀರಿನ ಮೂಲ ಹೊಂದಿರುವ ಬೆಳಗಾವಿಯ ರಾಕಸಕೊಪ್ಪ ಡ್ಯಾಂ ಭರ್ತಿಯಾಗಿದೆ.

1964 ರಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ನವರು ಪೂನೆಯ ಸುಪ್ರಿಡೆಂಟ್ ಇಂಜಿನಿಯರ್ ಆಗಿದ್ದ ಸಂಧರ್ಭದಲ್ಲಿ ಬೆಳಗಾವಿಯ ರಾಕಸಕೊಪ್ಪನಲ್ಲಿ ಜಲಾಶಯ ನಿರ್ಮಿಸುವ ಯೋಜನೆ ರೂಪಿಸಿದ್ದರು.ಹೀಗಾಗಿ ಈ ಜಲಾಶಯದ ಅನೇಕ ವಿಶೇಷತೆಗಳಿವೆ.

ರಾಕಸಕೊಪ್ಪ ಜಲಾಶಯದ ಸಾಮರ್ಥ್ಯ ಕೇವಲ ಅರ್ದ ಟಿಎಂಸಿ ಇದೆ. ಈ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಲು 2475 ಫೀಟ್ ( R.L ರೇಡಿಸ್ ಲೇವಲ್) ನೀರು ಬೇಕಾಗುತ್ತದೆ. ಆದ್ರೆ ಇವತ್ತಿನವರೆಗೆ ಈ ಡ್ಯಾಂ ನಲ್ಲಿ 2473 R L ಫೀಟ್ ನೀರು ಭರ್ತಿಯಾಗಿದ್ದು, ರಾಕಸಕೊಪ್ಪ ಜಲಾಶಯದ ಆರು ಗೇಟ್ ಗಳಲ್ಲಿ,ಎರಡು ಗೇಟ್ ಗಳನ್ನು ಮೂರು ಇಂಚ್ ತೆರವು ಮಾಡಿ ನೀರು ಬಿಡುಗಡೆ ಮಾಡಲಾಗಿದೆ.

ರಾಕಸಕೊಪ್ಪ ಜಲಾಶಯದ ನೀರು ಹಿಂಡಲಗಾ ಗ್ರಾಮದವರೆಗೆ ಅಂದ್ರೆ ಬರೊಬ್ಬರಿ 22 ಕ.ಮೀ ಪಂಪಿಂಗ್ ಇಲ್ಲದೇ ಸಹಜವಾಗಿ ಹರಿದು ಬರುತ್ತದೆ. ಹಿಂಡಲಗಾ ಗ್ರಾಮದಿಂದ ಲಕ್ಷ್ಮೀ ಟೇಕರಿ ವರೆಗೆ ನೀರು ಪಂಪ್ ಮಾಡಿ,ಇಲ್ಲಿಂದ ಇಡೀ ಬೆಳಗಾವಿ ನಗರಕ್ಕೆ ಸರಬರಾಜು ಮಾಡಲಾಗುತ್ತದೆ.

ಬೆಳಗಾವಿ ಮಹಾನಗರಕ್ಕೆ ಹಿಂಡಲಗಾ ಡ್ಯಾಂ ನಿಂದಲೂ ನೀರು ಸರಬರಾಜು ಮಾಡಲಾಗುತ್ತದೆ.ಇಲ್ಲಿಂದ ಬೆಳಗಾವಿ ನಗರಕ್ಕೆ ನೀರು ಪಂಪ್ ಮಾಡಲು, ಪ್ರತಿ ತಿಂಗಳು ಒಂದು ಕೋಟಿ ರೂ ವಿದ್ಯುತ್ ಬಿಲ್ ಬರುತ್ತದೆ. ಆದ್ರೆ ರಾಕಸಕೊಪ್ಪ ಜಲಾಶಯದಿಂದ ನೀರು ಪಂಪ್ ಮಾಡಲು ತಗಲುವ ವಿದ್ಯುತ್ ವೆಚ್ಚ  ಪ್ರತಿ ತಿಂಗಳು  15 ಲಕ್ಷ ರೂ ಮಾತ್ರ.

ಕಳೆದ ವರ್ಷ ಜುಲೈ 22 ರಂದು ಬೆಳಗಾವಿಯ ರಾಕಸಕೊಪ್ಪ ಜಲಾಶಯ ಓವರ್ ಫ್ಲೋ ಆಗಿತ್ತು,ಈ ವರ್ಷವೂ ನಿರಂತರವಾಗಿ ಮಳೆ ಸುರಿಯುತ್ತಿದ್ದು ಈ ವರ್ಷವೂ ಜಲಾಶಯ ಬಹುಬೇಗ ಭರ್ತಿಯಾಗಿದ್ದು ಸಂತಸದ ಸಂಗತಿಯಾಗಿದೆ.

ಬೆಳಗಾವಿಯ ರಾಕಸಕೊಪ್ಪ ಜಲಾಶಯವನ್ನು ಬೆಳಗಾವಿ ಮಹಾನಗರ ಪಾಲಿಕೆ ನಿರ್ಮಿಸಿದ್ದು, ಈ ಜಲಾಶಯದ ನಿರ್ಮಾಣಕ್ಕೆ ಸರ್ಕಾರದಿಂದ ಒಂದು ಪೈಸೆಯನ್ನೂ ಪಡೆದಿಲ್ಲ.ಈ ಜಲಾಶಯ ನಿರ್ಮಾಣದ ವೆಚ್ಚವನ್ನು ಸಂಪೂರ್ಣವಾಗಿ ಬೆಳಗಾವಿ ಮಹಾನಗರ ಪಾಲಿಕೆಯೇ ಭರಿಸಿರುವದು,ಈ ಜಲಾಶಯದ ಮತ್ತೊಂದ ವಿಶೇಷತೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *