ರಾಕಸಕೊಪ್ಪ ಜಲಾಶಯ ಭರಪೂರ…….. ಬೆಳಗಾವಿ ನಿವಾಸಿಗಳ ಕುಡಿಯುವ ನೀರಿನ ಚಿಂತೆ ದೂರ…!

ಬೆಳಗಾವಿ: ಸಹ್ಯಾದ್ರೀಯ ಮಡಿಲು ಮಳೆಯನ್ನೆ ಹೊತ್ತಿಕೊಂಡಿದೆ. ಹೀಗಾಗಿ ಸಹ್ಯಾದ್ರೀ ಸೆರಗಿನಲ್ಲಿರುವ ನದಿ ಹಳ್ಳಕೊಳ್ಳಗಳು ತುಂಬಿ ಹರಿದು ಈ ಪ್ರದೇಶದ ಜಲಾಶಯಗಳು ತುಂಬಿ ತುಳುಕುತ್ತಿವೆ.
ಬೆಳಗಾವಿ ಮಹಾನಗರದ ಮುಖ್ಯ ಜಲದ ಮೂಲವಾಗಿರುವ ರಾಕಸಕ್ಕೊಪ್ಪ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದ್ದು, ರವಿವಾರ ಬೆಳಗಿನ ಜಾವದಿಂದಲೇ ಜಲಾಶಯದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಜೊತೆಗೆ ಹಿಡಕಲ್ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬೆಳಗಾವಿ ನಗರದ ನೀರಿನ ಸಮಸ್ಯೆ ದೂರವಾಗಿದೆ.
ರವಿವಾರ ಬೆಳಗ್ಗೆ ಜಲಾಶಯದ ಗೇಟನ್ನು ಅರ್ಧ ಅಡಿ ತೆರೆಯಲಾಗಿದ್ದು, ಜಲಾಶಯದ ತೀರದಲ್ಲಿರುವ ಸಾರ್ವಜನಿಕರು ಮುನ್ನೇಚ್ಚರಿಕೆ ವಹಿಸುವಂತೆ ಬೆಳಗಾವಿ ಜಲ ಮಂಡಳಿ ಮುನ್ಸೂಚನೆ ನೀಡಿದೆ. ಪ್ರಸಕ್ತ ವರ್ಷ ಬೇಸಿಗೆ ಸಮಯದಲ್ಲಿ ಬೆಳಗಾವಿ ನಗರ ನಿವಾಸಿಗಳು ಕುಡಿಯುವ ನೀರಿಗಾಗಿ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಿದ್ದರು. ಜೊತೆಗೆ ನಗರದ ನೀರು ಸರಬರಾಜು ಮಂಡಳಿ ನೀರು ಸರಬರಾಜು ಮಾಡಲು ಪರದಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು.
ಬೆಳಗಾವಿ ನಗರದ ಇನ್ನೊಂದು ಪ್ರಮುಖ ಜಲದ ಮೂಲವಾಗಿರುವ ಹಿಡಕಲ್ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈ ಜಲಾಶಯವು ಅತೀ ಶೀಘ್ರದಲ್ಲಿಯೇ ಭರ್ತಿಯಾಗಲಿದೆ. ಎನ್ನುವುದಕ್ಕೆ ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯೇ ಸಾಕ್ಷಿಯಾಗಿದೆ.

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *