Breaking News

ಗೋಕಾಕ್ ಫಾಲ್ಸ್ ಎದುರು ನಿರ್ಮಾಣವಾಗಲಿದೆ ಗಾಜಿನ ಸೇತುವೆ…!!!

ಬೆಳಗಾವಿ-ರಾಜ್ಯರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ ಸಾಹುಕಾರ್ ರಮೇಶ್ ಜಾರಕಿಹೊಳಿ ಅವರು ಈಗ ಸ್ವಕ್ಷೇತ್ರ ಗೋಕಾಕಿನಲ್ಲೂ ಅಭಿವೃದ್ಧಿಯ ಮಹಾಪೂರ ಹರಿಸಲು ಸನ್ನಧ್ಧರಾಗಿದ್ದಾರೆ.

ಜಾರಕಿಹೊಳಿ ಕುಟುಂಬದವರು ಗೋಕಾಕಿಗೆ ಏನು ಮಾಡಿದ್ದಾರೆ..? ಎನ್ನುವ ಪ್ರಶ್ನೆ ಇವತ್ತು ನಿನ್ನೆಯದಲ್ಲ,ಗೋಕಾಕಿನಲ್ಲಿ ಜಾರಕಿಹೊಳಿ ಸಾಮ್ರಾಜ್ಯ ಸ್ಥಾಪನೆಯಾದ ಬಳಿಕ ಉದ್ಭವಿಸಿದ ಈ ಪ್ರಶ್ನೆ ಇವತ್ತಿನವರೆಗೂ ಜೀವಂತವಾಗಿದೆ.ಆದ್ರೆ ಈ ಪ್ರಶ್ನೆಗೆ ದಿಟ್ಟ ಉತ್ತರ ಕೊಡಲು ಸಾಹುಕಾರ್ ರಮೇಶ್ ಜಾರಕಿಹೊಳಿ ಅವರು ಸಂಕಲ್ಪ ಮಾಡಿದ್ದಾರೆ.

ಹಿಡಕಲ್ ಡ್ಯಾಂ….ಗೋಕಾಕ್ ಫಾಲ್ಸ್…ಗೊಡಚಿನಮಲ್ಕಿ ಫಾಲ್ಸ್ ಈ ಮೂರು ಪ್ರವಾಸಿ ಕೇಂದ್ರಗಳು ಒಂದೇ ಮಾರ್ಗದಲ್ಲಿದ್ದು,ಕೇವಲ ಮೂವತ್ತು ಕಿ.ಮೀ ಅಂತರದಲ್ಲಿವೆ,ಈ ಮೂರು ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಸಚಿವ ರಮೇಶ್ ಜಾರಕಿಹೊಳಿ ಅವರು ಯೋಜನೆ ರೂಪಿಸಿದ್ದಾರೆ.

ಗೋಕಾಕ್ ಫಾಲ್ಸ್ ಎದುರು ಕೇವಲ 20 ಮೀಟರ್ ಅಂತರದಲ್ಲಿ ಅಮೇರಿಕಾ ಮಾದರಿಯಲ್ಲಿ ಗಾಜಿನ ಸೇತುವೆ ನಿರ್ಮಿಸಲು,350 ಕೋಟಿ ರೂ ವೆಚ್ಚದಲ್ಲಿ ಜಲಸಂಪನ್ಮೂಲ ಇಲಾಖೆ ಯಿಂದಲೇ ಯೋಜನೆ ರೂಪಿಸಿದ್ದು.ಶೀಘ್ರದಲ್ಲೇ ಗಾಜಿನ ಸೇತುವೆ ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.

ಗೋಕಾಕ್ ನಗರದಲ್ಲಿ ರಸ್ತೆ ಅಗಲೀಕರಣ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಕರದಂಟು ನಗರಿ ಗೋಕಾಕಿಗೆ ಹೊಸ ಲುಕ್ ಕೊಟ್ಟಿರುವ ಸಾಹುಕಾರ,ಗೋಕಾಕ್ ಫಾಲ್ಸ್ ಸುತ್ತಲೂ ಹಲವಾರು ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಮುಂದಾಗಿದ್ದಾರೆ…

ಗೋಕಾಕ್ ಫಾಲ್ಸ್ ಎದುರು ಗಾಜಿನ ಸೇತುವೆ,ವಾಟರ್ ಸ್ಪೋರ್ಟ್ಸ್ ಬೋಟಿಂಗ್ ,ಮತ್ತು ದೊಡ್ಡ ಪ್ರಮಾಣದಲ್ಲಿ ನೀರು ನಿಲ್ಲಿಸಿ,ಹರಿದ್ವಾರ ಮಾದರಿಯ ಗಂಗಾ ಪೂಜೆ ವ್ಯೆವಸ್ಥೆ,ಮಾಡುವದು ಪ್ರವಾಸಿಗರು ಎರಡು ದಿನಗಳ ಕಾಲ ಗೋಕಾಕಿನಲ್ಲಿ ಉಳಿದು ಹಿಡಕಲ್ ಡ್ಯಾಂ..ಗೋಕಾಕ್ ಫಾಲ್ಸ್ ಮತ್ತು ಗೊಡಚಿನ ಮಲ್ಕಿ ಫಾಲ್ಸ್ ನ ನಿಸರ್ಗ ಸೌಂದರ್ಯ ನೋಡಲು ಅನಕೂಲವಾಗುವಂತೆ ಗೋಕಾಕಿನಲ್ಲಿ ದೊಡ್ಡ ಪ್ರವಾಸಿ ನಿವಾಸಿ ಕೇಂದ್ರ ನಿರ್ಮಿಸುವದು ಸೇರಿದಂತೆ ಇಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಮಾಡಲು ಸಚಿವ ರಮೇಶ್ ಜಾರಕಿಹೊಳಿ ಬಂಪರ್ ಯೋಜನೆ ರೂಪಿಸಿದ್ದು ಈ ಎಲ್ಲ ಯೋಜನೆಗಳು ಅನುಷ್ಠಾನಗೊಂಡರೆ ಗೋಕಾಕ್ ಕ್ಷೇತ್ರದ ಸ್ವರೂಪವೇ ಬದಲಾಗುವದರಲ್ಲಿ ಎರಡು ಮಾತಿಲ್ಲ….

ಸಾಹುಕಾರ್ ರಮೇಶ್ ಜಾರಕಿಹೊಳಿ ಛಲವಾದಿ..ಹಠವಾದಿ,ಅವರ ಛಲ ಮತ್ತು ಹಠ ಗೋಕಾಕ್ ಕ್ಷೇತ್ರದ ಜನರಿಗೆ ವರದಾನ ಆಗೋದರಲ್ಲಿ ಸಂಶಯವೇ ಇಲ್ಲ…

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *