ಬೆಳಗಾವಿ- ಎಂಈಎಸ್ ಕರಾಳ ದಿನಾಚರಣೆಯ ರ್ಯಾಲಿ ಯಲ್ಲಿ ಮೇಯರ್ ಸಂಜೋತಾ ಬಾಂಧೇಕರ ಸೇರಿದಂತೆ ಮೂವರು ಎಂಈಎಸ್ ನಗರ ಸೇವಕರು ಪಾಲ್ಗೊಂಡಿದ್ದು ಸಾಧಕ ಬಾಧಕಗಳನ್ನು ಪರಶೀಲಿಸಿ ಅವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲಾಗುವದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಭರವಸೆ ನೀಡಿದ್ದಾರೆ
ರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು ಎಂಈಎಸ್ ಕರಾಳ ದಿನಾಚರಣೆಗೆ ಮಹತ್ವ ಕೊಡಬೇಕಾಗಿಲ್ಲ ಚುನಾವಣೆ ಬಂದಾಗ ಅವರು ಈ ರೀತಿಯ ಪುಂಡಾಟಿಕೆ ಮಾಡುತ್ತಾರೆ ಕರಾಳ ದಿನಾಚರಣೆ ಯಲ್ಲಿ ಭಾಗವಹಿಸಿದ ಮಾತ್ರಕ್ಕೆ ಕ್ರಮ ಕೈಗೊಳ್ಳಲು ಅವಕಾಶ ಇಲ್ಲ ಮೇಯರ್ ನಾಡವಿರೋಧಿ ಘೋಷಣೆ ಕೂಗಿದ್ದಲ್ಲಿ ರಾಜ್ಯದ ವಿರುದ್ಧ ಭಾಷಣ ಮಾಡಿದ್ದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ರಮೇಶ ಜಾರಕಿಹೊಳಿ ಹೇಳಿದರು
ಪಾಲಿಕೆಯನ್ನು ಸೂಪರ್ ಸೀಡ್ ಮಾಡಿದ ಸಂಧರ್ಭದಲ್ಲಿ ಎಂಈಎಸ್ ಸ್ಟ್ರಾಂಗ್ ಆಗಿದೆ ಅದಕ್ಕಾಗಿ ಸಾಧಕ ಬಾಧಕಗಳನ್ನು ಪರಶೀಲಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕನ್ನಡ ಧ್ವಜಕ್ಕೆ ಮಾನ್ಯತೆ ನೀಡುವ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಿಸಿದ್ದಾರೆ ಸರ್ಕಾರ ಶೀಘ್ರದಲ್ಲಿಯೇ ಕನ್ನಡ ಧ್ವಜಕ್ಕೆ ಮಾನ್ಯತೆ ಕೊಡುತ್ತದೆ ಎಂದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ