Breaking News

ಬೆಳಗಾವಿ ಮಹಾನಗರ ಪಾಲಿಕೆಯ ಮೇಲೆ ಹಾರಾಡಿದ ಕನ್ನಡದ ಧ್ವಜ

ಬೆಳಗಾವಿ- ಎಂಈಎಸ್ ಹಿಡಿತದಲ್ಲಿರುವ ಬೆಳಗಾವಿ ಮಹಾನಗರ ಪಾಲಿಕೆಯ ಮೇಲೆ ಕನ್ನಡದ ಸೇನಾನಿಗಳು ಕನ್ನಡದ ಬಾವುಟ ಹಾರಿಸುವ ಮೂಲಕ ಗಡಿನಾಡ ಕನ್ನಡಿಗರ ಹಲವಾರು ದಶಕಗಳ ಕನಸನ್ನು ನನಸು ಮಾಡಿದ್ದಾರೆ

ಪ್ರತಿ ವರ್ಷಕನ್ನಡ ರಾಜೋತ್ಸವ ಸಂದರ್ಭದಲ್ಲಿ ಇಡೀ ಬೆಳಗಾವಿ ನಗರದಲ್ಲಿನ ಕಚೇರಿ ಮುಂದೆ ಕನ್ನಡ ದ್ವಜ ಹಾರಾಡುತ್ತಿದ್ದರೆ, ಎಂಇಎಸ್ ಆಡಳಿತ ನಡೆಸಿಕೊಂಡು ಬಂದಿರುವ ಬೆಳಗಾವಿ‌ ಮಹಾನಗರ ಪಾಲಿಕೆ ಎದುರು ಒಮ್ಮೆಯೂ ಕನ್ನಡ ದ್ವಜ ಹಾರಾಡಿರಲಿಲ್ಲ.ಅಷ್ಟೇ ಅಲ್ಲ ಪಾಲಿಕೆಯನ್ನ ನಾಡವಿರೋಧಿ ಚಟುವಟಿಕೆ ತಾಣವಾಗಿಸಿಕೊಂಡಿತ್ತು. ಇಂತಹ ಪಾಲಿಕೆ ಮೇಲೆ ಪ್ರಥಮ ಬಾರಿಗೆ ಇವತ್ತು ಕನ್ನಡ ರಾಜೋತ್ಸವದ ಅಂಗವಾಗಿ ನಸುಕಿನ ಜಾವ ೩.೩೦ರ ಸುಮಾರಿಗೆ ಪಾಲಿಕೆ ಆವರಣ ಪ್ರವೇಶಿಸಿದ ಕರುನಾಡ ಕ್ರಾಂತಿ‌ಪಡೆ ಕಾರ್ಯಕರ್ತರು ಪ್ರಥಮ ಬಾರಿಗೆ ಕನ್ನಡ ದ್ಚಜ ಹಾರಿಸಿ ಭುವನೇಶ್ವರಿ ದೇವಿ ಪೋಟೋ ಇಟ್ಟು ಪೂಜೆ ಸಲ್ಲಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ

ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಮಾರ್ಕೇಟ್ ಠಾಣೆ ಪೋಲಿಸರು,ಕಾರ್ಯಕರ್ತರ ಮನವೂಲಿಕೆ ಯತ್ನ ಮಾಡಿದರು.ಹಾರಿಸಿರುವ ಕನ್ನಡ ದ್ವಜ ತೆಗೆಯುವಂತೆ ಪೋಲಿಸರನವೊಲಿಕೆ ಯತ್ನ ಮಾಡಿದರು.ಇದಕ್ಕೆ ಒಪ್ಪದ ಕಾರ್ಯಕರ್ತರು,ಪ್ರಾಣಬಿಡುತ್ತೇವೆ ಹೊರತು ಯಾವುದೇ ಕಾರಣಕ್ಕೂ ಹಾರಿಸಿದ ದ್ವಜ ತೆಗೆಯುವುದಿಲ್ಲ ಅಂತಾ ಕಾರ್ಯಕರ್ತರ ಪಟ್ಟು ಹಿಡಿದರು.ದ್ವಜ ತೆಗೆದರೆ ಗೇಟ್ ಕಂಬಕ್ಕೆ ನೇಣುಹಾಕಿಕೊಳ್ಳುವುದಾಗಿ ಬೆದರಿಕೆ ಹಾಕಿದರು.ಕರ್ನಾಟಕದಲ್ಲಿ ಕನ್ನಡ ದ್ವಜ ಹಾರಿಸಿದ್ದೇವೆ, ಮಹಾರಾಷ್ಟ್ರ ದಲ್ಲಿ ಅಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದರು.ಮನವೋಲಿಕೆಗೆ ಒಪ್ಪದ ಹಲವು ಕಾರ್ಯಕರ್ತರನ್ನ ಪೋಲಿಸರು ಬಂಧಿಸಿ ಕರೆದುಕೊಂಡು‌ಹೋದ್ರು.ಬಂಧನ ನಂತರ ಪಾಲಿಕೆ ಮುಂದೆ ಹಾಕಿದ್ದ ನಂತರ ಕನ್ನಡ ದ್ವಜ ತೆರವುಗೊಳಿಸಿದ್ರು.ಪೋಲಿಸರು ಪಾಲಿಕೆ ಸೆಕ್ಯುರಟಿಗಳಿಂದ ದ್ವಜ ತೆರವುಗೊಳಿಸಿದರು.ಘಟನೆ ಹಿನ್ನೆಲೆಯಲ್ಲಿ ಪಾಲಿಕೆ ಎದುರು ಬಾರಿ‌ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ.ನಿನ್ನೆ ಎಂಇಎಸ್ ಕರಾಳ ದಿನಾಚರಣೆಗೆ ಅನುಮತಿ ನೀಡಿದ್ದ ಪೋಲಿಸರು, ಪಾಲಿಕೆ ಎದುರು ಕನ್ನಡ ದ್ವಜ ಹಾರಿಸಲು ಅವಕಾಶ ನೀಡದಿರುವುದು ಕನ್ನಡ ಹೋರಾಟಗಾರರನ್ನ ಕೆರಳಿಸುವಂತೆ ಮಾಡಿದೆ.
ಪಾಲಿಕೆಯ ಮೇಲೆ ಕನ್ನಡ ಬಾವುಟ ಹಾರಿಸಿದ ಕಾರ್ಯಕರ್ತರನ್ನು ಪೋಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ

Check Also

ಕರ್ನಾಟಕ ರಾಜ್ಯೋತ್ಸವ: ನಾಳೆ ಮಂಗಳವಾರ ಪೂರ್ವಭಾವಿ ಸಭೆ

ಬೆಳಗಾವಿ, -ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯನ್ನು ನವಂಬರ್ 1, 2024 ರಂದು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ (ಅಕ್ಟೋಬರ್ 8) ಜಿಲ್ಲಾ ಪಂಚಾಯತ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.