ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇ ಬಾಗೇವಾಡಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಎಲ್ಲ ಗ್ರಾಮಗಳ ಒಳ ರಸ್ತೆಗಳಗಳ ಸುಧಾರಣೆಗೆ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆ ಮಾಡಿಸುವಲ್ಲಿ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳಕರ ಯಶಸ್ವಿಯಾಗಿದ್ದಾಳೆ
ಬಿಡುಗಡೆಯಾದ ವಿಶೇಷ ಅನುದಾನದ ಮೊತ್ತ 4 ಕೋಟಿ 39 ಲಕ್ಷ ಈ ಅನುದಾನದಲ್ಲಿ ಹಿರೇಬಾಗೇವಾಡಿ ಗ್ರಾಮದ ಒಳ ರಸ್ತೆಗಳ ಸುಧಾರಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಏಶ ಜಾರಕಿಹೊಳಿ ಮಂಗಳವಾರ ಬೆಳಿಗ್ಗೆ ಕಾಮಗಾರಿಗೆ ಚಾಲನೆ ನೀಡಿದರು
ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ರಮೇಶ ಜಾರಕಿಹೊಳಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಎಲ್ಲ ಗ್ರಾಮಗಳ ರಸ್ತೆಗಳು ಹದಗೆಟ್ಟು ಹೋಗಿವೆ ಇದಕ್ಕೆ ಸರ್ಕಾರದಿಂದ ವಿಶೇಷ ಅನುದಾನ ಬೇಕು ಅದಕ್ಕೆ ನಿಮ್ಮ ಶಿಫಾರಸ್ಸು ಪತ್ರ ಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ ಹಾಗು ಈ ಭಾಗದ ಕಾಂಗ್ರೆಸ್ ಮುಖಂಡರು ಮನವಿ ಮಾಡಿಕೊಂಡಿದ್ದರು ಅದಕ್ಕೆ ನಾನು ಶಿಫಾರಸ್ಸು ಪತ್ರ ಕೊಟ್ಟಿದ್ದೆ ಲಕ್ಷ್ಮೀ ಹೆಬ್ಬಾಳಕರ ಅವರ ವಿಶೇಷ ಕಾಳಜಿ ಮತ್ತು ಪ್ರಯತ್ನದಿಂದಾಗಿ ವಿಶೇಷ ಅನುದಾನ ಬಿಡುಗಡೆಯಾಗಿದೆ ಎಂದು ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ತಿಳಿಸಿದರು
ಈ ಅನುದಾನದ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಶಿಷ್ಟಾಚಾರದ ಉಲ್ಲಂಘನೆ ಆಗಬಾರದು ಎಂದು ನಾನು ಸ್ವತಹ ದೂರವಾಣಿ ಮೂಲಕ ಶಾಸಕ ಸಂಜಯ ಪಾಟೀಲರನ್ನು ಸಂಪರ್ಕಿಸಿ ಆಮಂತ್ರಣ ನೀಡಿದ್ದೆ ಆದರೆ ಅವರು ಈಗ ಅಧಿವೇಶನ ನಡೆಯುತ್ತಿದೆ ಈಗಲೇ ಕಾಮಗಾರಿಗಳಿಗೆ ಚಾಲನೆ ನೀಡುವದು ಬೇಡ ಎಂದು ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡುವ ದಿನಾಂಕ ಫೆಬ್ರವರಿ 27 ರಂದು ನಿಗದಿ ಆಗಿತ್ತು ಆದರೆ ಶಾಸಕ ಸಂಜಯ ಪಾಟೀಲ 26 ರಂದೇ ಯಾರಿಗೂ ಹೇಳದೇ ಕೇಳದೇ ಕಾಮಗಾರಿಗೆ ಚಾಲನೆ ನೀಡಿರುವದು ತಪ್ಪು ಪ್ರಜಾಪ್ರಭುತ್ವ ವ್ಯೆವಸ್ಥೆಯಲ್ಲಿ ಶಿಷ್ಟಾಚಾರದ ಉಲ್ಲಂಘನೆ ಆಗಬಾರದು ಎಂದು ನಾನು ಶಾಸಕ ಸಂಜಯ ಪಾಟೀಲರನ್ನು ಅಹ್ವಾನಿಸಿದ್ದರೆ ಅವರು ನನ್ನ ಗಮನಕ್ಕೆ ತರದೇ ಕಾಮಗಾರಿಗಳಿಗೆ ಚಾಲನೆ ನೀಡಿ ಶಿಷ್ಟಾಚಾರದ ಉಲ್ಲಂಘನೆ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಗಂಭೀರ ಆರೋಪ ಮಾಡಿದರು
ಬೆಳಗಾವಿ ತಾಲ್ಲೂಕು ಪಂಚಾಯ್ತಿಯ ಅಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿ ಕಳೆದ ಹತ್ತು ವರ್ಷಗಳಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ ಮಾಡದ ಶಾಸಕ ಸಂಜಯ ಪಾಟೀಲ ಲಕ್ಷ್ಮೀ ಹೆಬ್ಬಾಳಕರ ಬಿಡುಗಡೆ ಮಾಡಿಸಿದ ಅನುದಾನದ ಕಾಮಗಾರಿಗಳನ್ನು ಯಾರ ಗಮನಕ್ಕೆ ತರದೇ ಕಳ್ಳನಂತೆ ಬಂದು ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ್ದಾರೆ ಹತ್ತು ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗೆ ಪ್ರಯತ್ನ ಮಾಡದ ಶಾಸಕ ಸಂಜಯ ಪಾಟೀಲ ಯಾರದೋ ದುಡ್ಡಿನಲ್ಲಿ ಯಲ್ಲಮ್ಮನ ಜಾತ್ರೆ ಮಾಡಿದ ಹಾಗೆ ಪೌರುಷ ತೋರಿದ್ದಾರೆ ಎಂದು ಶಂಕರಗೌಡ ಪಾಟೀಲ ವಾಗ್ದಾಳಿ ಮಾಡಿದರು
ಕಾಂಗ್ರೆಸ್ ಮುಖಂಡರಾದ ಸಿಸಿ ಪಾಟೀಲ ಅಡಿವೇಶ ಇಟಗಿ ಚನ್ನರಾಜ ಹಟ್ಟಿಹೊಳಿ ಮೃನಾಲ ಹೆಬ್ಬಾಳಕರ ಸೇರಿದಂತೆ ಹಿರೇಬಾಗೇವಾಡಿ ತಾಲ್ಲೂಕು ಪಂಚಾಯತ ಸದಸ್ಯರು ಸೇರಿದಂತೆ ಗ್ರಾಮದ ಹಿರಿಯರು ಉಪಸ್ಥಿತರಿದ್ದರು