Breaking News

ಮೇಯರ ಕುರ್ಚಿಗಾಗಿ ಕನ್ನಡ ಗುಂಪಿನಲ್ಲಿ ಜಂಗೀ ಕುಸ್ತಿ….!!

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡಿಗರಿಗೆ ಈ ಬಾರಿ ಮೇಯರ್ ಸ್ಥಾನ ಖಚಿತವಾಗಿದ್ದರೂ ಮೇಯರ್ ಖುರ್ಚಿಗಾಗಿ ಕನ್ನಡ ಗುಂಪಿನಲ್ಲಿ ಜಂಗೀ ಕುಸ್ತಿ ನಡೆಯುತ್ತಿದೆ

ಮೇಯರ್ ಸ್ಥಾನ ಪರಶಿಷ್ಟ ಪಂಗಡಕ್ಕೆ ಮೀಸಲಾಗಿದೆ ಎಂಈಎಸ್ ಗುಂಪಿನಲ್ಲಿ ಈ ವರ್ಗಕ್ಕೆ ಸೇರಿದ ನಗರಸೇಕರಿಲ್ಲ ಹೀಗಾಗಿ ಮೇಯರ್ ಸ್ಥಾನ ಕನ್ನಡಿಗರ ಪಾಲಾಗುವದು ಖಚಿತವಾದರೂ ಮೇಯರ್ ಸ್ಥಾನದ ಪ್ರಬಲ ಆಕಾಂಕ್ಷಿ ಸತೀಶ ಜಾರಕಿಹೊಳಿ ಬೆಂಬಲಿಗ ಬಸಪ್ಪ ಚಿಕ್ಕಲದಿನ್ನಿ ಹದಿಮೂರು ಜನ ನಗರಸೇವಕರನ್ನು ಕರೆದುಕೊಂಡು ಅಂಬೋಲಿ ರಿಸಾರ್ಟ್ ಗೆ ತೆರಳಿದ್ದಾರೆ ಎಂದು ತುಳಿದು ಬಂದಿದೆ

ಕನ್ನಡ ಗುಂಪಿನ ನಾಯಕ ದೀಪಕ ಜಮಖಂಡಿ ಇತ್ತೀಚಿಗೆ ಕನ್ನಡ ನಗರ ಸೇವಕರ ಸಭೆ ಕರೆದು ಒಮ್ಮತ ಮೂಡಿಸಲು ಮಾಡಿದ ಪ್ರಯತ್ನ ವಿಫಲವಾಗಿ ಬಸಪ್ಪ ಚಿಕ್ಕಲದಿನ್ನಿ ಸುಮಾರು ಹದಿಮೂರು ಜನ ನಗರಸೇವಕರನ್ನು ತಮ್ಮ ತೆಕ್ಕೆಗೆ ಸೆಳೆದಿದ್ದಾರೆ

ಕನ್ನಡ ಗುಂಪಿನ ಪರಶಿಷ್ಟ ಪಂಗಡಕ್ಕೆ ಸೇರಿದ ಕಣಬರ್ಗಿ ಯ ಸುಚೇತಾ ಗಂಡಗುದರಿ ಮೇಯರ್ ಸ್ಥಾನಕ್ಕೆ ಲಾಭಿ ನಡೆಸಿದ್ದು ಬಸಪ್ಪ ಚಿಕ್ಕಲದಿನ್ನಿ ಮತ್ತು ಗಂಡಗುದರಿಯ ನಡೆವೆ ಮೇಯರ್ ಸ್ಥಾನಕ್ಕೆ ಗುದ್ದಾಟ ಶುರುವಾಗಿದೆ

ಪಾಲಿಕೆಯಲ್ಲಿ ಬಹುಮತ ಹೊಂದಿರುವ ಎಂಈಎಸ್ ಉಪಮೇಯರ್ ಸ್ಥಾನಕ್ಕೆ ತೃಪ್ತಿಪಡಬೇಕಾದ ಪರಿಸ್ಥಿತಿ ಎದರುಗಾಗಿದ್ದು ಈ ಸ್ಥಾನಕ್ಕಾಗಿ ಮಧುಶ್ರೀ ಪೂಜಾರಿ ಮತ್ತು ಮೀನಾಕ್ಷಿ ಚಿಗರೆ ಪೈಪೋಟಿ ನಡೆಸಿದ್ದಾರೆ

ಬಸಪ್ಪ ಚಿಕ್ಕಲದಿನ್ನಿ ಅವರಿಗೆ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರ ಬೆಂಬಲ ಇದೆ ಎಂದು ಹೇಳಲಾಗಿದ್ದು ಶಾಸಕ ಸೇಠ ಸುಚೇತಾ ಗಂಡಗುದರಿ ಅವರಿಗೆ ಬೆಂಬಲ ಸೂಚಿಸಿದ್ದಾರೆ ಎಂಬ ಸುದ್ಧಿ ಸಾಕಷ್ಟು ಪ್ರಚಾರ ಪಡೆದಿದೆ

ಸುರಳಿತವಾಗಿ ಈಬಾರಿ ಕನ್ನಡಿಗರಿಗೆ ಮೇಯರ್ ಸ್ಥಾನ ದಕ್ಕಿದರೂ ಕನ್ನಡ ಗುಂಪಿನಲ್ಲೇ ಕಿತ್ತಾಟ ನಡೆದಿರುವದು ದೊಡ್ಡ ದುರಂತ

Check Also

ಎಸ್ ಎಂ ಕೃಷ್ಣ ನಿಧನ, ನಾಳೆ ಸರ್ಕಾರಿ ರಜೆ ಘೋಷಣೆ,

ಎಸ್​ಎಂ ಕೃಷ್ಣ ನಿಧನ: ರಾಜ್ಯದಲ್ಲಿ 3 ದಿನ ಶೋಕಾಚರಣೆ; ನಾಳೆ ಸರ್ಕಾರಿ ರಜೆ ಘೋಷಣೆ, ಮದ್ದೂರಿನ ಸೋಮನಹಳ್ಳಿಯಲ್ಲಿ ನಾಳೆ ಅಂತ್ಯಕ್ರಿಯೆ …

Leave a Reply

Your email address will not be published. Required fields are marked *