ಬೆಳಗಾವಿ – ಹಲವಾರು ವರ್ಷಗಳ ನಂತರ ಅವಧಿಗೂ ಮುನ್ನ ಬೆಳಗಾವಿ ಜಿಲ್ಲೆಯ
ಹಿಡಕಲ್ ಜಲಾಶಯ ಭರ್ತಿಯಾಗಿದ್ದು ಜಿಲ್ಲಾ ಉಸ್ತೂವಾರಿ ಮತ್ತು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರು ಇಂದು ಜಲಾಶಯಕ್ಕೆ ಬಾಗಿನ ಅರ್ಪಿಸಿದರು
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ, ಭರ್ತಿಯಾಗಿ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲು ಜಲಾಶಯದ ಎಲ್ಲ ಗೇಟ್ ಗಳನ್ನು ತೆರವು ಮಾಡಲಾಗಿದೆ 51 ಟಿಎಂಸಿ ಸಾಮರ್ಥ್ಯದ ಡ್ಯಾಂ ಪೂರ್ಣ ಭರ್ತಿಯಾದ ಹಿನ್ನೆಲೆ ಬಾಗಿನ ಅರ್ಪಣೆ ಮಾಡಲಾಯಿತು
ಬಾಗಿನ ಅರ್ಪಣೆ ಬಳಿಕ ಮಾಧ್ಯಮಗಳ ಜೊತೆ ಸಚಿವ ಜಾರಕಿಹೊಳಿ ಮಾತನಾಡಿ ವಾಲ್ಮೀಕಿ ಸಮುದಾಯಕ್ಕೆ ಇನ್ನೂ ಎರಡು ಸಚಿವ ಸ್ಥಾನ ಕೇಳಿದ್ದೇವೆ, ಆದ್ರೆ ಅದು ತಮ್ಮ ಸಹೋದರನಿಗೆ ಬೇಕು ಅಂತಾ ಕೇಳಿಲ್ಲ, ಸಹೋದರ ಸತೀಶ ಜಾರಕಿಹೊಳಿಗೆ ಸಚಿವ ಸ್ಥಾನ ಕೇಳಿಲ್ಲ ಎಂದು ರಮೇಶ ಜಾರಕಿಹೊಳಿ ಹೇಳಿದರು
ಸಮುದಾಯದ ಇನ್ನಿಬ್ಬರಿಗೆ ಸಚಿವ ಸ್ಥಾನ ಬೇಕೆ ವಿನಹ ಸಹೋದರರಿಗಲ್ಲ,ಬಳ್ಳಾರಿ ರೆಡ್ಡಿ ಸಹೋದರರಂತೆ ಜಾರಕಿಹೊಳಿ ಸಹೋದರರಲ್ಲ,ಸತೀಶ ಸಚಿವನಾದರೂ ಆದರೂ ಅಷ್ಟೇ, ನಾನಾದರೂ ಅಷ್ಟೇ ಎಂದು ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ನಡೆಯುವಾಗ ಅತೀ ಮಾಡಿದರೆ ದೇವರು ಏನೆಂಬುದನ್ನು ತೋರಿಸುತ್ತಾನೆ ಅಧಿಕಾರ ಇದ್ದಾಗ ಸಮಾಜ ಮತ್ತು ಜನಸಾಮಾನ್ಯರ ಒಳತಿಗಾಗಿ ದುಡಿಯಬೇಕು ಅಷ್ಟೇ ಎಂದು ರಮೇಶ್ ಜಾರಕಿಹೊಳಿ ಹೇಳಿದರು
ಸಚಿವ ಜಾರಕಿಹೊಳಿಗೆ ಶಾಸಕ ಉಮೇಶ ಕತ್ತಿ, ದುರ್ಯೋಧನ ಐಹೊಳೆ,
ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಸಾಥ್, ನೀಡಿದ್ರು