ಬ ಉಪಚುಣಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬೆಳಗಾವಿ ಜಿಲ್ಲೆಯ ಮೂವರು ನೂತನ ಶಾಸಕರ ಪ್ರಮಾಣವಚನ ಕಾರ್ಯಕ್ರಮ ಇಂದು ಭಾನುವಾರ ನಡೆಯಲಿದೆ.
ಬೆಳಗಾವಿ ಜಿಲ್ಲೆಯ ರಮೇಶ್ ಜಾರಕಿಹೊಳಿ ಮಹೇಶ್ ಕುಮಟೊಳ್ಳಿ ,ಶ್ರೀಮಂತ ಪಾಟೀಲ ಸೇರಿದಂತೆ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಲ್ಲ ಶಾಸಕರು
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬೆಳಗ್ಗೆ 10 ಗಂಟೆಗೆ ಶಾಸಕರ ಪ್ರಮಾಣವಚನ ಸಮಾರಂಭ ನಡೆಯಲಿದೆ ಎಂದು ವಿಧಾನಸಭೆಯ ಸಚಿವಾಲಯ ತಿಳಿಸಿವೆ.
ಯಲ್ಲಾಪುರದ ಕ್ಷೇತ್ರದ ಶಿವರಾಂ ಹೆಬ್ಬಾರ್, ಗೋಕಾಕ್‌ನ ರಮೇಶ್ ಜಾರಕಿಹೊಳಿ, ಕಾಗವಾಡದ ಶ್ರೀಮಂತ ಪಾಟೀಲ್, ಅಥಣಿಯ ಮಹೇಶ್ ಕುಮಟಳ್ಳಿ, ಹಿರೇಕೆರೂರಿನ ಬಿ.ಸಿ.ಪಾಟೀಲ್, ರಾಣೆಬೆನ್ನೂರಿನ ಅರುಣಕುಮಾರ್, ಚಿಕ್ಕಬಳ್ಳಾಪುರದ ಡಾ.ಸುಧಾಕರ್, ಯಶವಂತಪುರದ ಎಸ್.ಟಿ.ಸೋಮಶೇಖರ್, ಕೆ.ಆರ್.ಪುರದ ಭೈರತಿ ಬಸವರಾಜ, ಮಹಾಲಕ್ಷ್ಮೀ ಲೇಔಟ್‌ನ ಗೋಪಾಲಯ್ಯ, ವಿಜಯನಗರದ ಆನಂದ್ ಸಿಂಗ್, ಹುಣಸೂರಿನ ಎಚ್.ಪಿ.ಮಂಜುನಾಥ್, ಶಿವಾಜಿನಗರದ ರಿಜ್ವಾನ್ ಅರ್ಷದ್, ಹೊಸಕೋಟೆಯ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರು ನೂತನ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಬಹುತೇಕ ಸಂಕ್ರಮಣ ದ ಬಳಿಕ ಸಚಿವ ಸಂಪುಟದ ವಿಸ್ತರಣೆ ಆಗಲಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಉಮೇಶ್ ಕತ್ತಿ ಮಂತ್ರಿಯಾಗಲಿದ್ದು ಶ್ರೀಮಂತ ಪಾಟೀಲ ಮತ್ತು ಮಹೇಶ್ ಕುಮಟೊಳ್ಳಿ ಅವರಿಗೆ ನಿಗಮ ಮಂಡಳಿಯ ಸ್ಥಾನ ಸಿಗುವ ಸಾಧ್ಯತೆ ಗಳಿವೆ ಕೊನೆಯ ಘಳಿಗೆಯಲ್ಲಿ ಶ್ರೀಮಂತ ಪಾಟೀಲ,ಮತ್ತು ಮಹೇಶ್ ಕುಮಟೊಳ್ಳಿ ಇಬ್ಬರೂ ಸಚಿವರಾದ್ರೂ ಅಚ್ಚರಿ ಪಡಬೇಕಾಗಿಲ್ಲ