Breaking News
Home / Breaking News / ಉದ್ಧವ ಠಾಕ್ರೆಗೆ ಊದ್ಭವ ಠಾಕ್ರೆ ಎಂದ ಕಾರಜೋಳ..ನಮಗೂ ಒಂದು ಹಿಂದೂ ರಾಷ್ಟ್ರ ಬೇಕು ಎಂದ ಸುರೇಶ್ ಅಂಗಡಿ

ಉದ್ಧವ ಠಾಕ್ರೆಗೆ ಊದ್ಭವ ಠಾಕ್ರೆ ಎಂದ ಕಾರಜೋಳ..ನಮಗೂ ಒಂದು ಹಿಂದೂ ರಾಷ್ಟ್ರ ಬೇಕು ಎಂದ ಸುರೇಶ್ ಅಂಗಡಿ

ಬೆಳಗಾವಿ-
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಮತ್ತು ಕೇಂದ್ರದ ರಾಜ್ಯ ರೈಲು ಸಚಿವ ಸುರೇಶ್ ಅಂಗಡಿ ಇಬ್ಬರೂ ಮಾದ್ಯಮಗಳ ಜೊತೆ ಮಾತನಾಡಿ ಮಹಾದಾಯಿ ಕುರಿತು ಶೀಘ್ರದಲ್ಲೇ ಸಿಹಿ ಸುದ್ಧಿ ಬರುತ್ತದೆ ಎಂದು ಮುನ್ಸೂಚನೆ ನೀಡಿದರು

ಆರಂಭದಲ್ಲಿ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ ಮಹದಾಯಿ ಹೋರಾಟ ಮುಂದುವರೆಸುತ್ತೇವೆ ಎಂಬ ಹೋರಾಟಗಾರರ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು
ಪ್ರತಿಭಟನಾಕಾರರ ಕುರಿತು ಬೇಜವಾಬ್ದಾರಿ ಹೇಳಿಕೆ ನೀಡಿದ್ರು ಹೋರಾಟ ಮಾಡುವವರು ಮಾಡಿಕೊಳ್ಳಲಿ ಯಾರು ಬೇಡಾ ಅಂದವರು. ಜಾವ್ಡೇಕರ್ ಸಿಹಿ ಸುದ್ದಿ ಕೊಡ್ತೇನಿ ಅಂದಿದ್ದಾರೆ ಅದರೆ ಸಂತೋಷದಿಂದ ಇರೋಣ ಎಂದರು ಗೋವಿಂದ ಕಾರಜೋಳ

ಗಡಿವಿವಾದ ಕುರಿತು ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಸಿಎಂಗೆ ಡಿಸಿಎಂ ತಿರುಗೇಟು. ಈ ಭೂಮಿ ಮೇಲೆ ಜನ ಇರುವವರೆಗೆ ಬೆಳಗಾವಿ, ಸುತ್ತಮುತ್ತಲಿನ ಪ್ರದೇಶ ಕರ್ನಾಟಕದಲ್ಲಿ ಇರುತ್ತದೆ. ಯಾವ ಉದ್ಭವ ಠಾಕ್ರೆ ಹೇಳಿದರು ಅದು ಕನ್ನಡ ನಾಡಾಗಿಯೇ ಇರುತ್ತದೆ
ಮಹಾರಾಷ್ಟ್ರ ಸಿಎಂಗೆ ಉದ್ಧವ ಠಾಕ್ರೆ ಅನ್ನುವ ಬದಲು ಉದ್ಭವ ಠಾಕ್ರೆ ಎಂದ ಡಿಸಿಎಂ ಕಾರಜೋಳ ಉದ್ಧವ ಠಾಕ್ರೆ ಹೇಳಿಕೆಗೆ ವ್ಯೆಂಗ್ಯವಾಡಿದರು

ಸಚಿವ ಸಂಪುಟ ವಿಸ್ತರಣೆ ಆಗುತ್ತದೆ, ಸ್ವಲ್ಪ ಕಾಯಬೇಕು. ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು, ದೇಶದಲ್ಲಿ ಆಡಳಿತ ನಡೆಸುತ್ತಿದೆ. ಪಕ್ಷದ ಯಾವುದೇ ಚಟುವಟಿಕೆ, ತೀರ್ಮಾನ ರಾಷ್ಟ್ರಮಟ್ಟದಲ್ಲಿ ಆಗುತ್ತವೆ.
ಪ್ರಧಾನಿ‌ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷರು, ಸಿಎಂ ಯಡಿಯೂರಪ್ಪ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ.
ಡಿಸಿಎಂ ಹುದ್ದೆಯ ಬಗ್ಗೆ ನಮ್ಮ ನಾಯಕರು ಹೇಳಿದ್ರೆ ನಾನು ಪ್ರತಿಕ್ರಿಯೆ ನೀಡುತ್ತೇನೆ.
ಹಾದಿ-ಬಿದಿಯಲ್ಲಿ ಡಿಸಿಎಂ ಹುದ್ದೆ ಬಗ್ಗೆ ಹೇಳಿಕೆ ನೀಡುವವರಿಗೆ ನಾನೇಕೆ ಪ್ರತಿಕ್ರಿಯೆ ನೀಡಲಿ.
ಡಿಸಿಎಂ ಹುದ್ದೆ ವಿಚಾರವಾಗಿ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ರೇಣಾಕಾಚಾರ್ಯಗೆ ತಿರುಗೇಟು ಕೊಟ್ಟ ಡಿಸಿಎಂ ಕಾರಜೋಳ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 70 ವರ್ಷ ಆಯ್ತು, 70 ವರ್ಷ ಕಾಂಗ್ರೆಸ್ ‌ಮಾಡಿದ್ದು ಹೀನಾಯ ರಾಜಕಾರಣ ಕಾಂಗ್ರೆಸಿನವರು ಇಷ್ಟು ‌ದಿನ
ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತ ಬಂದಿದ್ದಾರೆ.
ಬಿಜೆಪಿ ಹಾಗೂ ನಮ್ಮ ರಾಷ್ಟ್ರೀಯ ನಾಯಕರು ದೇಶದ ಐಕ್ಯತೆ, ಭದ್ರತೆ ಕುರಿತು ಚಿಂತನೆ ಮಾಡುತ್ತಾರೆ.
ಮಂಗಳೂರು ಗೋಲಿಬಾರ್ ವಿಚಾರದಲ್ಲಿ ಕಾಂಗ್ರೆಸ್ ‌ತನ್ನ ನೀತಿ ಮುಂದುವರೆಸಿದೆ. ಅಮಾಯಕರನ್ನು ಗೋಲಿಬಾರ್ ಮಾಡಿ ನಾವು ಸಾಯಿಸಿಲ್ಲ.
ದೇಶ ದ್ರೋಹ, ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿದ್ದವರನ್ನ ಹತ್ತಿಕ್ಕಲಾಗಿದೆ ಎಂದು
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದರು

ಸಂಸದ ಸುರೇಶ್ ಅಂಗಡಿ ಮಾತು..

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇಂದು ಕೇಂದ್ರ ಸಚಿವ ಸುರೇಶ್ ಅಂಗಡಿ ಮಾದ್ಯಮಗಳ ಜೊತೆ ಮಾತನಾಡಿದರು.
ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದವರಿಗೆ ಗುಂಡಿಕ್ಕಿ ಎಂಬ ಸುರೇಶ್ ಅಂಗಡಿ ಹೇಳಿಕೆ ಪ್ರಚೋದನಕಾರಿ ಅಲ್ವಾ ಎಂಬ ಯು.ಟಿ.ಖಾದರ್ ಪ್ರಶ್ನೆ ವಿಚಾರ ಪ್ರತಿಕ್ರಿಯೆ ನೀಡಿದ ಅವರು ಸಮಾಜದ ಆಸ್ತಿಪಾಸ್ತಿ ಹಾನಿ ಮಾಡುವವರ ಬಗ್ಗೆ ನಾನು ಹೇಳಿದ್ದೇನೆ*
ರೈಲ್ವೆ ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ ಅಂತಾ ರಾಜ್ಯಸರ್ಕಾರಗಳಿಗೆ ಹೇಳಿದ್ದೇನೆ. ನಾನು ಯಾರನ್ನೂ‌ ಪ್ರವೋಕ್ ಮಾಡಿಲ್ಲ, ಪ್ರವೋಕ್ ಮಾಡಿದ್ರೆ ಹೇಳಲಿ ಎಂದು ಸುರೇಶ್ ಅಂಗಡಿ ಸವಾಲು ಹಾಕಿದ್ರು

ಕಾಂಗ್ರೆಸ್ ಪಕ್ಷದವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ದೇಶದ 130 ಕೋಟಿ ಜನರು ಸುರಕ್ಷಿತವಾಗಿದ್ದಾರೆ. ಅಫ್ಘಾನಿಸ್ತಾನ, ಬಾಂಗ್ಲಾ, ಪಾಕ್‌ದಲ್ಲಿರುವ ಅಲ್ಪಸಂಖ್ಯಾತ ಸಿಖ್, ಹಿಂದೂ, ಪಾರ್ಸಿ, ಜೈನರು ಅವರ ಸಲುವಾಗಿ ಕಾನೂನು ಮಾಡಿದ್ದೇವೆ. ಅವರು ಗೌರವದಿಂದ ಇರಬೇಕೋ ಬೇಡವೋ? ಆ ಮೂರು ರಾಷ್ಟ್ರಗಳು ಇಸ್ಲಾಂ ರಾಷ್ಟ್ರ ಅಂತಾ ಘೋಷಿಸಿಕೊಂಡಿದ್ದಾರೆ.
ಅಲ್ಲಿರುವರ ಮೇಲೆ ನಿರಂತರ ಅತ್ಯಾಚಾರ ‌‌ನಡೆಯುತ್ತಿದೆ.
ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದಾರಾ ಎಂಬ ಹೆಚ್‌ಡಿಕೆ‌ ಹೇಳಿಕೆ ವಿಚಾರ.
*ಹಿಂದೂ ರಾಷ್ಟ್ರ ಮಾಡಬಾರದು ಏಕೆ? ಬೇರೆಯವರಿಗೂ ಒಂದೊಂದು ರಾಷ್ಟ್ರ ಇದಾವಲ್ಲ*
*ನಮಗೂ ಒಂದು ರಾಷ್ಟ್ರ ಬೇಕೋ ಬೇಡವೋ ಅಂತಾ ಸುರೇಶ್ ಅಂಗಡಿ ಪ್ರಶ್ನೆ ಮಾಡಿದರು

ನಾವು ಹಿಂದೂ ರಾಷ್ಟ್ರ ಮಾಡ್ತಿಲ್ಲ, ಇಲ್ಲಿ ಎಲ್ಲರೂ ಬದುಕಬೇಕು. ಹಿಂದೂ ಅಂತಾ ಅಂದ್ರೆ ಅದು ಯಾವ ಜಾತಿಗೆ ಸೀಮಿತ ಆಗಿಲ್ಲ. ಹಳೇ ಸರ್ಟಿಫಿಕೇಟ್ ತಗೆದು ನೋಡಿ ಹಿಂದೂ ಮುಸ್ಲಿಂ, ಹಿಂದೂ ಕ್ರಿಶ್ಚಿಯನ್ ಅಂತಾ ಇದೆ. ಪೌರತ್ವ ಕಾಯ್ದೆ ತಿದ್ದುಪಡಿ ವಿಚಾರದಲ್ಲಿ
ಸಿ.ಎಂ.ಇಬ್ರಾಹಿಂ ಅವರಿಗೆ ಪೌರತ್ವ ವಿಚಾರದ ಕುರಿತು ಮನವರಿಕೆಯಾಗಿದೆ. ಆದರೆ ಇಬ್ರಾಹಿಂ ರಾಜಕಾರಣ ಮಾಡ್ತಿದಾರೆ. ಮಹದಾಯಿ ವಿಚಾರವಾಗಿ ಇಷ್ಟರಲ್ಲೇ ಸಿಹಿ ಸುದ್ದಿ ಕೊಡುತ್ತೇವೆ.ಎಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ರೇಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದರು

Check Also

ಜಗದೀಶ್ ಶೆಟ್ಟರ್ ಕುವೆಂಪು ನಗರಕ್ಕೆ ಹೋಗಿದ್ದು ಯಾಕೆ ಗೊತ್ತಾ.??

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ನಗರದಲ್ಲಿ ಜಗದೀಶ್ ಶೆಟ್ಟರ್ ಅವರ ಅವಾಜ್ ಕೇಳುತ್ತಿದೆ.ತಪ್ಪದೇ ದಿನನಿತ್ಯ ಚಹಾ …

Leave a Reply

Your email address will not be published. Required fields are marked *