ಬೆಳಗಾವಿ- ಮುಖ್ಯಮಂತ್ರಿ ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಹತ್ತು ಜನ ಮಂತ್ರಿಗಳಿಗೆ ಖಾತೆಗಳ ಹಂಚಿಕೆಯಾಗಿದ್ದು ಹಠವಾದಿ ರಮೇಶ್ ಜಾರಕಿಹೊಳಿ ಕೊನೆಗೂ ಜಲಸಂಪನ್ಮೂಲ ಖಾತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾಗಿದ್ದ ರಮೇಶ ಜಾರಕಿಹೊಳಿ ರಾಜೀನಾಮೆ ನೀಡಿ ಹದಿನೇಳು ಸಚಿವರನ್ನು ಕಟ್ಟಿಕೊಂಡು,ಹೊಸ ಸರ್ಕಾರ ರಚನೆಯಲ್ಲಿ ಮುಖ್ಯಪಾತ್ರ ವಹಿಸಿ,ನೀರಾವರಿ ಮಂತ್ರಿಯಾಗುವ ಹಠ ಸಾಧಿಸುವಲ್ಲಿ ರಮೇಶ್ ಜಾರಕಿಹೊಳಿ ಯಶಸ್ವಿ ಯಾಗಿದ್ದಾರೆ.
ಜಲಸಂಪನ್ಮೂಲ ಖಾತೆ ಪಡೆದಿರುವ ರಮೇಶ್ ಜಾರಕಿಹೊಳಿ ಅವರೇ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಕಾಗವಾಡ ಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲರಿಗೂ ಮಂತ್ರಿಯಾಗುವ ಭಾಗ್ಯ,ಶ್ರೀಮಂತ ಪಾಟೀಲರು ಜವಳಿ ಖಾತೆ ಪಡೆದಿದ್ದಾರೆ.
ಬೆಳಗಾವಿ ಜಿಲ್ಲೆಗೆ ಜಲಸಂಪನ್ಮೂಲ ಖಾತೆ.ಜೊತೆಗೆ ಜವಳಿ ಖಾತೆಗಳು ಸಿಕ್ಕಿವೆ ,