ಶ್ರೀರಾಮಲು ಡಿಸಿಎಂ ಆದ್ರೆ ಸಂತಸ- ರಮೇಶ್ ಜಾರಕಿಹೊಳಿ
ಬೆಳಗಾವಿ- .ನಾನು ಡಿಸಿಎಂ ಸ್ಥಾನವಾಗಲಿ,ಅಥವಾ ಜಲಸಂನ್ಮೂಲ ಖಾತೆಯನ್ನು ಕೇಳಿರಲಿಲ್ಲ ಶ್ರೀರಾಮಲು ಡಿಸಿಎಂ ಸ್ಥಾನ ಕೊಟ್ಟರೆ ಸಂತಸ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ದೆಹಲಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಗೋವಾದಲ್ಲಿ ಕೋರ್ಟ್ ಡೇಟ್ ಇತ್ತು ಅದನ್ನು ಮುಗಿಸಿ ನೇರವಾಗಿ ದೆಹಲಿಗೆ ಬಂದಿದ್ದೇನೆ,ಸಾದ್ಯವಾದರೆ ಇವತ್ತು ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತೇನೆ ಇಲ್ಲಾ ಅಂದ್ರೆ ನಾಳೆ ಭೇಟಿಯಾಗ್ತೇನಿ,ಮಹೇಶ್ ಕುಮಟೊಳ್ಳಿ ಅವರಿಗೆ ಒಳ್ಳೆಯ ಭವಿಷ್ಯವಿದೆ ಈ ಕುರಿತು ಮುಖ್ಯಮಂತ್ರಿಗಳ ಕೊತೆ ಮಾತನಾಡುತ್ತೇನೆ. ಜಲಸಂಪನ್ಮೂಲ ಸಚಿವನಾಗಿ ಈಗ ಚಾರ್ಜ ತೆಗೆದುಕೊಂಡಿದ್ದೇನೆ.ರಾಜ್ಯದಲ್ಲಿ ಹಲವಾರು ಅಂತರರಾಜ್ಯ ನೀರಾವರಿ ಸಮಸ್ಯೆಗಳಿವೆ ಅವುಗಳ ಬಗ್ಗೆ ತಿಳಿದುಕೊಳ್ಳುತ್ತೇನೆ. ಯಾವುದೇ ನೀರಾವರಿ ಯೋಜನೆ ಇರಲಿ ಅದರ ಬಗ್ಗೆ ನಿಗಾ ವಹಿಸಿ ರಾಜ್ಯದ ಹಿತಾಸಕ್ತಿ ಕಾಯುತ್ತೇನೆ ಎಂದು ರಮೇಶ್ ಜಾರಕಿಹೊಳಿ ಮಾದ್ಯಮಗಳ ಎದುರು ಪ್ರತಿಕ್ರಿಯೆ ನೀಡಿದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ