ಬೆಳಗಾವಿ: ಸಣ್ಣ ಕೈಗಾರಿಕಾ ಸಚಿವ ರಮೇಶ ಜಾರಕಿಹೊಳಿ ಅವರು ಸತೀಶ ಜಾರಕಿಹೊಳಿ ಅವರ ಹೇಳಿಕೆಗೆ ತಿರಗೇಟು ನೀಡಿದ್ದಾರೆ ನಾನು ಸತೀಶ್ ಜಾರಕಿಹೊಳಿ ಬಗ್ಗೆ ಹೇಳಿಕೆ ನೀಡಿದ್ದು ಒಳ್ಳೆಯ ಉದ್ದೇಶದಿಂದ . ಅವರ ಮನಸ್ಸು ನೊಯಿಸಿದ್ದರೆ ನೇರವಾಗಿ ಅವರನ್ನು ಭೇಟಿಯಾಗಿ ಮಾತನಾಡುವೆ. ಆದರೆ ಲಖನ್ ಯಮಕನಮರ್ಡಿ ಕ್ಷೇತ್ರದಿಂದ ನಿಲ್ಲುವಂತೆ ಪಕ್ಷದ ವರಿಷ್ಠರೇ ಸೂಚನೆ ನೀಡಿದ್ದು ನಿಜ ಎಂದು ರಮೇಶ ಜಾರಕಿಹೊಳಿ ಸ್ಪಷ್ಠ ಪಡಿಸಿದ್ದಾರೆ
೨೦೦೮ ರ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿಗೆ ಯಮಕನಮರ್ಡಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೇಳಿದ್ದೆ. ಆದ್ರೆ ಅಂದಿನ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮತ್ತು ರಾಜ್ಯ ಉಸ್ತುವಾರಿ ಪೃಥ್ವಿರಾಜ್ ಚೌಹಾಣ್ ನನಗೆ ಮಾತು ಕೊಟ್ಟಿದ್ರು. ಮುಂದಿನ ಬಾರಿ ಲಖನ್ ಗೆ ಟಿಕೆಟ್ ಕೊಡೊದಾಗಿ ಹೇಳಿದ್ರು.ಹಾಗಾಗಿ ನಾನು ಹೇಳಿದ್ದೆ.ಎಂದು ರಮೇಶ ಜಾರಕಿಹೊಳಿ ಸ್ಪಷ್ಠಪಡಿಸಿದ್ದಾರೆ
ಸತೀಶ್ ಜಾರಕಿಹೊಳಿ ನಾಯಕ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಿದ್ದಾರೆ. ರಾಯಚೂರಿನಲ್ಲಿ ನಮ್ಮ ಸಮಾಜ ಜಾಸ್ತಿ ಇರುವುದರಿಂದ, ಮತ್ತು ನಮ್ಮ ಸಮಾಜಕ್ಕೆ ಅಲ್ಲಿ ಲೀಡರಶಿಪ್ ಇಲ್ಲ. ಸತೀಶ್ ಜಾರಕಿಹೊಳಿ ರಾಯಚೂರು ಗ್ರಾಮೀಣಕ್ಕೆ ನಿಂತ್ರೆ ಇಡಿ ರಾಯಚೂರು, ಬಳ್ಳಾರಿ, ಕೊಪ್ಪಳ ಭಾಗಕ್ಕೆ ದೊಡ್ಡ ಶಕ್ತಿ ಬರುತ್ತೆ ಅನ್ನೊ ಸದುದ್ದೇಶದಿಂದ ಹೇಳಿದ್ದೇನೆ. ಅವರು ಯಮಕನಮರ್ಡಿಯಲ್ಲೇ ನಿಲ್ತಿನಿ ಅಂದ್ರೆ ನಮ್ಮ ಅಭ್ಯಂತರವಿಲ್ಲ.
ಸತೀಶ್ ಜಾರಕಿಹೊಳಿ ಶಾಂತ ರೀತಿಯಿಂದ ವಿಚಾರ ಮಾಡಿ ರಾಯಚೂರು ನಿಂತ್ರೆ ಒಳ್ಳೆಯದಾಗುತ್ತೆ. ಇನ್ನು ತೀರ್ಮಾನ ಅವರಿಗೆ ಬಿಟ್ಟಿದ್ದು. ಯಮಕನಮರ್ಡಿ ಕ್ಷೇತ್ರದಿಂದ ಲಖನ್ ಜಾರಕಿಹೊಳಿಗೆ ಕಾಂಗ್ರೆಸ್ ಟಿಕೆಟಿಗಾಗಿ ಪ್ರಯತ್ನ ಮಾಡ್ತಿನಿ. ಎಂದು ರಮೇಶ್ ಜಾರಕಿಹೊಳಿ ತಮ್ಮ ಗೃಹ ಕಚೇರಿಯಲ್ಲಿ ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ