Breaking News

ರಮೇಶ್ ಗೆ ರಮೇಶ್ ಸಾಥ್ …ಒಳಗೆ ಮೀಟೀಂಗ್ ನಲ್ಲಿ ಖಾಸ್ ಬಾತ್…!!!

ಬೆಳಗಾವಿ-ಡಿಸಿಸಿ ಬ್ಯಾಂಕ್ ಅದ್ಯಕ್ಷ ಉಪಾದ್ಯಕ್ಷರ ಚುನಾವಣೆ ನಾಳೆ ನಡೆಯಲಿದ್ದು ಈಗ ಬೆಳಗಾವಿಯ ಸರ್ಕ್ಯುಟ್ ಹೌಸ್ ನಲ್ಲಿ ಮಹತ್ವದ ಸಭೆ ನಡೆಯುತ್ತಿದೆ.

ಕೆಲವು ನಿರ್ದೇಶಕರು ರಮೇಶ್ ಕತ್ತಿ ಅವರ ಪುನರಾಯ್ಕೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲ ಹಿರಿಯ ನಾಯಕರು, ಬೆಳಗಾವಿಯಲ್ಲಿ ಸಭೆ ಸೇರಿದ್ದಾರೆ.

ಸಭೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವ ರಮೇಶ ಜಾರಕಿಹೊಳಿ‌, ಮಾಜಿ ಸಚಿವ ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ‌, ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ, ಸಂಸದ ಅಣ್ಣಾಸಾಬ್ ಜೊಲ್ಲೆ,ಮಹಾಂತೇಶ ಕವಟಗಿಮಠ ಭಾಗಿಯಾಗಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ರಮೇಶ್ ಕತ್ತಿ ಅವರ ಪರವಾಗಿ ಬ್ಯಾಟೀಂಗ್ ಮಾಡಿದ್ದು,ರಮೇಶ್ ಕತ್ತಿ ನನ್ನ ಬಾಲ್ಯದ ಸ್ನೇಹಿತ ಅವರೇ ಅದ್ಯಕ್ಷ ರಾಗಬೇಕು ಎಂದು ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.

ಸಭೆಯಲ್ಲಿ ಕೆಲವೇ ನಿಮಿಷ ತಮ್ಮ ಅಭಿಪ್ರಾಯ ಮಂಡಿಸಿ,ಸಭೆಯಿಂದ ಹೊರಗೆ ಬಂದ, ಸಚಿವ ರಮೇಶ ಜಾರಕಿಹೊಳಿ‌ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವಿಚಾರ. ಅವಿರೋಧ ಆಯ್ಕೆಗೆ ಪ್ರಯತ್ನ ನಡೆದಿದೆ. ನಾನು ಕೆಲಸದ ನಿಮಿತ್ತ ಹೊರಟಿದ್ದೇನೆ.
ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿದ್ದೇನೆ.
ಚುನಾವಣೆ ಆಗಲ್ಲ ಅವಿರೋಧ ಆಯ್ಕೆ ನಡೆಯುತ್ತದೆ
ರಮೇಶ‌ ಕತ್ತಿ ‌ಆಯ್ಕೆಯಾಗಬೇಕು ಎನ್ನುವುದು ನನ್ನ ನಿಲುವು.ಯಾವುದೇ ಗೊಂದಲ ಇಲ್ಲ ಎಲ್ಲಾ ಸರಿಯಾಗಲಿದೆ. ಸಾಮೂಹಿಕ ನಾಯಕ್ವತದಲ್ಲಿ ತೀರ್ಮಾನ ಆಗಲಿದೆ. ನಾಳೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯಲಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ರು…

ಸಚಿವ ರಮೇಶ್ ಜಾರಕಿಹೊಳಿ ಅವರು ನಿರ್ಗಮಿಸಿದ ಬಳಿಕ ಸಭೆ ಮುಂದುವರೆದಿದ್ದು ಹೊರಗೆ ರಮೇಶ್ ಗೆ ರಮೇಶ್ ಸಾಥ್ ಕೊಟ್ಟರೆ ,ಸಭೆಯ ಒಳಗೆ ಖಾಸ್ ಬಾತ್ ನಡೆಯುತ್ತಿದೆ…

Check Also

ಕರ್ನಾಟಕದ ಜೊತೆ ಮಹಾರಾಷ್ಟ್ರದ ಮಹಾ ಪುಂಡಾಟಿಕೆ

ಬೆಳಗಾವಿ -ಆರೋಗ್ಯದ ವಿಚಾರದಲ್ಲಿ ಮಹಾರಾಷ್ಟ್ರ ಬೌಂಡರಿ ಕ್ರಾಸ್ ಮಾಡಿ ಬೆಳಗಾವಿ ಗಡಿಗೆ ನುಗ್ಗಿ ಆಯ್ತು, ಈಗ ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *