

ಬೆಳಗಾವಿ- ಹೊಸ ವರ್ಷದ ಪ್ರಾರಂಭಿಕ ದಿನವಾದ ಇಂದು, ಅಸ್ಸಾಂ ರಾಜ್ಯದ ಗುವಾಹಟಿ ನಗರದ ಪಶ್ಚಿಮ ಭಾಗದಲ್ಲಿರುವ ನೀಲಾಚಲ ಬೆಟ್ಟದ ಮೇಲೆ ನೆಲಸಿರುವ ಶಕ್ತಿಪೀಠ ಶ್ರೀ ಕಾಮಾಕ್ಯ ದೇವಾಲಯ*ಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕಾಮಾಕ್ಯ ದೇವಾಲಯ ದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಭುವನೇಶ್ವರಿ, ಬಾಗಲಮುಖಿ, ಚಿನ್ನಮಸ್ತ, ತ್ರಿಪುರ ಸುಂದರಿ ಮತ್ತು ತಾರ ಅವರನ್ನು ಒಳಗೊಂಡಂತೆ ವಿವಿಧ ರೂಪಗಳಲ್ಲಿ ಕಂಗೊಳಿಸುವ,ಜಗನ್ಮಾತೆ ತಾಯಿ* ಗೆ ಪೂಜೆ ಸಲ್ಲಿಸಿದ ಸಚಿವ ರಮೇಶ್ ಜಾರಕಿಹೊಳಿ ಮಾರಕ ಕೊರೋನಾ ಸೋಂಕು ಬೇಗ ನಾಶವಾಗಲಿ, ಸಮಾಜ ಸೋಂಕುಮುಕ್ತವಾಗಲಿ ಎಂದು ಬೇಡಿಕೊಂಡರು.
ತಮ್ಮ ಆಪ್ತರೊಂದಿಗೆ ಆಸ್ಸಾಂ ದೇಗುಲಕ್ಕೆ ಹೋಗಿದ್ದ ಅವರು,ಎರಡು ದಿನಗಳ ಕಾಲ ಅಲ್ಲಿ ವಿವಿಧ ಧಾರ್ಮಿಕ ಕಾರ್ಯಗಳನ್ನು ನಡೆಸಿ,ವಿಶೇಷ ಪೂಜೆ ನೆರವೇರಿಸಿ ತಮ್ಮ ಇಷ್ಟಾರ್ಥಗಳನ್ನು ಪೂರ್ಣಗೊಳಿಸಲು ಪ್ರಾರ್ಥಿಸಿ ಶುಕ್ರವಾರ ರಾತ್ರಿ ಗೋಕಾಕಿಗೆ ಮರಳಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ