ನಳೀನ ಕುಮಾರ್ ಕಟೀಲ ಅವರನ್ನು ಭೇಟಿಯಾದ ವಿವೇಕರಾವ್ ಪಾಟೀಲ..
ಬೆಳಗಾವಿ-ಮಾಜಿ ವಿಧಾನ ಪರಿಷತ್ತಿನ ಸದಸ್ಯ ವಿವೇಕರಾವ್ ಪಾಟೀಲ ಅವರು ಇಂದು ನವದೆಹಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ ಅವರನ್ನು ಭೇಟಿಯಾದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ,ವಿವೇಕರಾವ್ ಪಾಟೀಲ,ಹಾಗೂ ಅಶೋಕ ಅಸೂದೆ ಅವರು ಇಂದು ಸಂಜೆ ನಳೀನ್ ಕುಮಾರ್ ಕಟೀಲ ಅವರನ್ನು ಭೇಟಿಯಾಗಿ,ವಿವೇಕರಾವ್ ಪಾಟೀಲ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕುರಿತು ಚರ್ಚೆ ನಡೆಸಿದರು.
ವಿವೇಕರಾವ್ ಪಾಟೀಲ ಅವರು ಪಕ್ಷೇತರ ಅಭ್ಯರ್ಥಿಯಾಗಿ ವಿಧಾನ ಪರಿಷತ್ತಿನ ಚುನಾವಣೆಗೆ ಸ್ಪರ್ದಿಸಿ ಗೆಲುವು ಸಾಧಿಸಿ,ಅಧಿಕಾರದ ಅವಧಿಯನ್ನು ಪೂರ್ಣಗೊಳಿಸಿದ್ದು,ವಿವೇಕರಾವ್ ಪಾಟೀಲ ಅವರ ವರ್ಚಸ್ಸು ಜಿಲ್ಲೆಯಾದ್ಯಂತ ಇದೆ.ಅವರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವದರಿಂದ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ಇನ್ನಷ್ಟು ಬಲಿಷ್ಢವಾಗಲಿದೆ ಎಂದು ಅಶೋಕ ಅಸೂದೆ ಅವರು ವಿವೇಕರಾವ್ ಪಾಟೀಲ ಅವರ ಬಗ್ಗೆ ನಳೀನ್ ಕುಮಾರ್ ಕಟೀಲ ಅವರಿಗೆ ಮಾಹಿತಿ ನೀಡಿದ್ರು.
ನಾಯಕರ ಅಭಿಪ್ರಾಯ ಆಲಿಸಿದ ಬಿಜೆಪಿ ರಾಜ್ಯಅಧ್ಯಕ್ಷ ನಳೀನ ಕುಮಾರ ಕಟೀಲ, ಈ ಕುರಿತು ವರಿಷ್ಠರ ಜೊತೆ ಸಮಾಲೋಚನೆ ಮಾಡಿ ಅಂತಿಮ ತೀರ್ಮಾಣ ಕೈಗೊಳ್ಳುವದಾಗಿ ಭರವಸೆ ನೀಡಿದ್ರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ