ಪಣಜಿ-ಗೋವಾದಲ್ಲಿ ಇವತ್ತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಕೇಂದ್ರದ ಗೃಹ ಸಚಿವ ಅಮೀತ್ ಶಾ ಅವರನ್ನು ನಮಸ್ಕರಿಸಿದಾಗ ನಗುಮುಖದಿಂದಲೇ ಆತ್ಮೀಯವಾಗಿ ಮಾತನಾಡಿದ ಅಮೀತ್ ಶಾ ಸಾಹುಕಾರ್ ಗೆ ಮಂತ್ರಿಯಾಗುವ ಸಿಗ್ನಲ್ ಸ್ಮಾಯಿಲ್ ನಲ್ಲೇ ಕೊಟ್ಟಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಇಂದು ಗೋವಾದಲ್ಲಿ ರಮೇಶ ಜಾರಕಿಹೊಳಿ ಸ್ವಾಗತಿಸಿದ್ದಾರೆ. ಗೋವಾ ರಾಜ್ಯದ ಚುನಾವಣೆ ಪ್ರಚಾರಕ್ಕಾಗಿ ದೆಹಲಿಯಿಂದ ಆಗಮಿಸಿದರು. ಈ ವೇಳೆ ನಗುಮುಖದಿಂದಲೇ ಶಾ ರಮೇಶ ಜಾರಕಿಹೊಳಿ ಜತೆಗೆ ಶಾ ಮಾತನಾಡಿದ್ರು. ಕೆಲ ದಿನಗಳ ಹಿಂದೆ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಭೇಟಿಯಾಗಿದ್ದ ಜಾರಕಿಹೊಳಿ ಈಗ ಶಾ ಜತೆಗೆ ಚರ್ಚೆ ನಡೆಸಿದ್ದಾರೆ. ಈ ಮೂಲಕ ಸಂಪುಟ ಪುನಾರಚನೆ ವೇಳೆಯಲ್ಲಿ ಮಂತ್ರಿಯಾಗೋದು ಫಿಕ್ಸ್ ಆಗಿದೆ.ಎಂದು ಹೇಳಲಾಗುತ್ತಿದೆ.
ಸಿಡಿ ಪ್ರಕರಣ ಸಂಬಂಧ ಇತ್ತೀಚಿನ ಕೋರ್ಟ್ ನಲ್ಲಿ ರಮೇಶ ಜಾರಕಿಹೊಳಿಗೆ ಸ್ವಲ್ಪ ರೀಲಿಫ್ ಸಿಕಿತ್ತು. ಈ ಬೆನ್ನಲ್ಲೆ ಮತ್ತೆ ಆ್ಯಕ್ಟಿವ್ ಆಗಿರೋ ಜಾರಕಿಹೊಳಿ ಸಚಿವ ಸ್ಥಾನದ ಮೇಲೆ ಕಣ್ಣು ಇಟ್ಟಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ದೇವೇಂದ್ರ ಫಡ್ನವಿಸ್ ಹಾಗೂ ಈಗ ಅಮಿತ್ ಭೇಟಿ ಮಾಡಿದ್ದಾರೆ.
ರಮೇಶ ಜಾರಕಿಹೊಳಿ ಹಾಗೂ ಶಾ ಭೇಟಿ ಸಂದರ್ಭದಲ್ಲಿ ಗೋಕಾಕ್ ಗ್ಲಾಸ್ ಬ್ರಿಡ್ಜ್ ಶಂಕುಸ್ಥಾಪನೆ ಆಹ್ವಾನ ನೀಡಿದ್ದಾರೆ.ಗೋವಾದಲ್ಲೇ ವಾಸ್ತವ್ಯ ಮಾಡಿರುವ ರಮೇಶ್ ಜಾರಕಿಹೊಳಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜೊತೆ ಅಮೀತ ಶಾ ಅವರೊಂದಿಗೂ ಚರ್ಚೆ ಮಾಡಿದ್ದಾರೆ ಎಂದು ತಿಳಿದು ಬಂದಿದ್ದು.ಈ ವೇಳೆಯಲ್ಲಿ ಗೋವಾ ಸಿಎಂ ಪ್ರಮೋದ ಸಾವಂತ, ಮತ್ತು ಬೆಳಗಾವಿಯ ಬಿಜೆಪಿ ಮುಖಂಡ ಕಿರಣ್ ಜಾಧವ್ ಸೇರಿ ಅನೇಕ ನಾಯಕರು ಉಪಸ್ಥಿತರಿದ್ದರು.