ಬೆಳಗಾವಿ- ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಬೆಳವಣಿಗೆಗಳ ಬೆನ್ನಲ್ಲೇ ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಧಿಡೀರ್ ದೆಹಲಿಗೆ ಹಾರಿದ್ದು ,ಸಾಹುಕಾರ್ ನಡೆ ತೀವ್ರ ಕುತೂಹಲ ಮೂಡಿಸಿದೆ.
ಇಂದು ಬೆಳಿಗ್ಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಿಂದ ದೆಹಲಿಗೆ ತೆರಳಿದ ಅವರು ಇಂದು ಸಂಜೆ ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಸಚಿವ ಸಂಪುಟ ಪುನಾರಚನೆ,ಅಥವಾ ವಿಸ್ತರಣೆ ಯುಗಾದಿ ಹಬ್ಬ ಮುಗಿದ ಬಳಿಕ ಎಪ್ರಿಲ್ ಮೊದಲ ವಾರದಲ್ಲೇ ನಡೆಯಲಿದ್ದು, ಈ ಕುರಿತು ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಕೆಎಂಎಫ್ ಅದ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಶನಿವಾರ ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿ ರಮೇಶ್ ಜಾರಕಿಹೊಳಿ ಅವರ ಕೇಸ್ ಕ್ಲಿಯರ್ ಆಗಿದೆ ಅವರು ಮಂತ್ರಿ ಆಗಲು ಯಾವುದೇ ಅಡೆತಡೆ ಇಲ್ಲ ಎಂದು ಹೇಳುವ ಮೂಲಕ ರಮೇಶ್ ಜಾರಕಿಹೊಳಿ ಅವರು ಮತ್ತೆ ಮಂತ್ರಿಯಾಗುವ ಮುನ್ಸೂಚನೆ ನೀಡಿದ್ದರು.
ಬೆಳಗಾವಿ ಜಿಲ್ಲೆಯಲ್ಲಿ ಈಗ ಹೈ ವೋಲ್ಟೇಜ್ ಪಾಲಿಟೀಕ್ಸ್ ನಡೆಯುತ್ತಿದೆ.ಜಾರಕಿಹೊಳಿ,ಮತ್ತು ಕತ್ತಿ ಸಹೋದರರ ನಡುವೆ ಗುಪ್ತವಾಗಿ ರಾಜಕೀಯ ತಿಕ್ಕಾಟ ಜೋರಾಗಿ ನಡೆಯುತ್ತಿದೆ.ಏತನ್ಮಧ್ಯೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಈ ವಿಚಾರದಲ್ಲಿ ಜಾಣ ನಡೆ ಅನುಸರಿಸುತ್ತಿದ್ದು,ಅವರ ನಡೆ, ಡಿಸಿಸಿ ಬ್ಯಾಂಕಿನ ತಿಕ್ಕಾಟ ಸ್ಪೋಟಗೊಂಡ ಬಳಿಕವೇ ಬಹಿರಂಗವಾಗಲಿದೆ.
ಇಂದು ದೆಹಲಿಗೆ ತೆರಳಿದ ರಮೇಶ್ ಜಾರಕಿಹೊಳಿ ಅವರು ಯಾವ,ಯಾವ ನಾಯಕರನ್ನು ಭೇಟಿ ಆಗ್ತಾರೆ,ಯಾವ ರೀತಿಯ ಗೇಮ್ ಆಡ್ತಾರೆ ಅನ್ನೋದು ನಿಗೂಢ ವಾಗಿದೆ.