*ಇದು ಲಕ್ಷ್ಮೀ ಹೆಬ್ಬಾಳಕರ್ ಟೈಲೆಂಟ್….!!*
*ಲಕ್ಷ್ಮೀ-ರಮೇಶ್ ಜಾರಕಿಹೊಳಿ ನಡುವಿನ ಟಾಕ್ ವಾರ್ ಸೈಲೆಂಟ್…!!*
*ಆದ್ರೆ ಇಬ್ವರ ನಡುವಿನ ರಾಜಕೀಯ ಜಗಳ ಪರ್ಮನೆಂಟ್..!!*
ಬೆಳಗಾವಿ-ಲಕ್ಷ್ಮೀ ಹೆಬ್ಬಾಳಕರ ಮತ್ತು ರಮೇಶ್ ಜಾರಕಿಹೊಳಿ ನಡುವೆ ಜೋರಾಗಿ ನಡೆಯುತ್ತಿದ್ದ ಟಾಕ್ ವಾರ್ ಕಳೆದ ಎರಡು ವಾರಗಳಿಂದ ಸೈಲೆಂಟ್ ಆಗಿದೆ.ಈ ವಿಚಾರದಲ್ಲಿ ಲಕ್ಷ್ಮೀ ಹೆಬ್ಬಾಳಕರ ಟೈಲೆಂಟ್ ಜಾಣ ನಡೆ ಅನುಸರಿಸಿ ಮೌನಕ್ಕೆ ಶರಣಾಗಿದ್ದಾರೆ.
ಈ ವಿಚಾರದಲ್ಲಿ ರಮೇಶ್ ಜಾರಕಿಹೊಳಿ ಅವರೂ ಸಹ ಕಳೆದ ಎರಡು ವಾರಗಳಿಂದ ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸುವಲ್ಲಿ ಫುಲ್ ಬ್ಯುಸಿಯಾದ ಕಾರಣ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಚಟುವಟಿಕೆ ನಡೆಸಿರಲಿಲ್ಲ.ಆದ್ರೆ ಇವತ್ರು ರಮೇಶ್ ಜಾರಕಿಹೊಳಿ ಏಕಾ ಏಕಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೂತ್ ಮಟ್ಟದ ಸಭೆಯನ್ನು ಪಕ್ಕದ ಮಹಾರಾಷ್ಟ್ರದ ಶಿನ್ನೋಳಿ ಗ್ರಾಮದಲ್ಲಿ ಕರೆದು ಗ್ರಾಮೀಣ ಕ್ಷೇತ್ರದಲ್ಲಿ ಮತ್ತೆ ಆ್ಯಕ್ಟೀವ್ ಆಗಿದ್ದಾರೆ.
ಇವತ್ತು ಸಂಡೇ ಬೆಳಗಾವಿ ಗ್ರಾಮೀಣ ಕ್ಷೇತ್ರದ ಒನ್ ಡೇ ಮ್ಯಾಚ್ ಪಕ್ಕದ ಮಹಾರಾಷ್ಟ್ರಕ್ಕೆ ಶಿಪ್ಟ್ ಆಗಿದೆ. ಬೆಳಗಾವಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ.ಹೀಗಾಗಿ ಪಕ್ಕದ ಮಹಾರಾಷ್ಟ್ರದ ಗಡಿಯಲ್ಲಿರುವ ಶಿನ್ನೋಳಿಯಲ್ಲಿ ಬೂತ್ ಮಟ್ಟದ ಪ್ರಮುಖರ ಸಭೆ ಅಲ್ಲಿ ನಡೆಯುತ್ತಿದೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ರಮೇಶ್ ಜಾರಕಿಹೊಳಿ ಬೆಂಬಲಿಗರು ಶಿನ್ನೋಳಿಯ ಸಭೆಯಲ್ಲಿ ಭಾಗವಹಿಸಲು ತೆರಳಿದ್ದು ಇವತ್ತಿನಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಇಲೆಕ್ಷನ್ ವಾರ್ ಬಹಿರಂಗವಾಗಿಯೇ ಶುರುವಾಗಿದೆ.
ಇನ್ನುವರೆಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಘೋಷಣೆ ಆಗಿಲ್ಲ. ಆದ್ರೆ ಲಕ್ಷ್ಮೀ ಹೆಬ್ಬಾಳಕರ ಮತ್ತು ರಮೇಶ್ ಜಾರಕಿಹೊಳಿ ನಡುವಿನ ಯುದ್ಧ ಇವತ್ತು ಘೋಷಣೆ ಆಗಿದ್ದು ನಿಜ.ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಪ್ರಚಾರ ನಡೆಸಿದ್ದಾರೆ.ತಾವು ಐದು ವರ್ಷದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಕ್ಷೇತ್ರದ ಹಳ್ಳಿ ಹಳ್ಳಿ,ಗಲ್ಲಿ ಗಲ್ಲಿ ಗಳಲ್ಲಿ ಸುತ್ತಾಡಿ ಮತದಾರರನ್ನು ಓಲೈಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಲಕ್ಷ್ಮೀ ಹೆಬ್ಬಾಳಕರ ಕಳೆದ ಎರಡು ವಾರಗಳಿಂದ ಟೀಕೆ ಟಿಪ್ಪಣಿಗಳಿಂದ ದೂರವಾಗಿದ್ದು, ರಮೇಶ್ ಜಾರಕಿಹೊಳಿ ವಿರುದ್ಧದ ಟಾಕ್ ವಾರ್ ಗೆ ಬ್ರೇಕ್ ಹಾಕಿ ಗ್ರಾಮೀಣ ಕ್ಷೇತ್ರದ ನಾಯಕರನ್ನು ಮನವೊಲಿಸುವ ಕಾರ್ಯದಲ್ಲಿ ಬ್ಯುಸಿ ಆಗಿದ್ದು,ಸಹೋದರ ಚನ್ನರಾಜ್, ಪುತ್ರ ಮೃನಾಲ ಸೇರಿದಂತೆ ಲಕ್ಷ್ಮೀ ಹೆಬ್ಬಾಳಕರ ಅವರ ಇಡೀ ಕುಟುಂಬವೇ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದೆ.
ಒಟ್ಟಾರೆ ಇವತ್ತಿನಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಇಲೆಕ್ಷನ್ ರಂಗೇರಿದ್ದು ಪಕ್ಕದ ಮಹಾರಾಷ್ಟ್ರದ ಶಿನ್ನೋಳಿಯಲ್ಲಿ ತಂತ್ರ ಮಂತ್ರ ಎರಡನ್ನೂ ಜಪಿಸುತ್ತಿರುವ ರಮೇಶ್ ಜಾರಕಿಹೊಳಿ ಮುಂದಿನ ದಿನಗಳಲ್ಲಿ ಯಾವ ರೀತಿಯ ಪ್ರಚಾರ ನಡೆಸುತ್ತಾರೆ.ಈ ಕ್ಷೇತ್ರದಲ್ಲಿ ಏನೆಲ್ಲಾ ನಡೆಯಬಹುದು ಅನ್ನೋದನ್ನು ಐಪಿಎಲ್ ಮ್ಯಾಚ್ ನೋಡಿದಂತೆ ನೋಡುತ್ತಾ ಹೋಗಬೇಕಾಗಿದೆ.