ಬೆಳಗಾವಿ- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಲ್ಲಿಗೆ ಹೋಗ್ತಾರೆ, ಏನ್ಮಾಡ್ತಾರೆ, ಅನ್ನೋದು ಗೊತ್ತಾಗೋದೇ ಇಲ್ಲ.ಅವರ ನಡೆ ಯಾವ ಕಡೆ,ಅನ್ನೋದೇ ನಿಗೂಢ.
ಬಲ್ಲ ಮೂಲಗಳ ಪ್ರಕಾರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಸೂರತ್ ಮತ್ತು ಅಹಮದಾಬಾದ್ ಪ್ರವಾಸಲ್ಲಿದ್ದಾರೆ ಎಂದು ಗೊತ್ತಾಗಿದ್ದು,ರಾಜಕೀಯ ಪ್ರವಾಸದಲ್ಲಿದ್ದರೂ ಸಹ ಅವರು ಅಲ್ಲಿಯ ಧಾರ್ಮಿಕ ಕ್ಷೇತ್ರಗಳ ದರ್ಶನ ಪಡೆಯುವುದು ಅವರ ಸ್ಪೆಶ್ಯಾಲಿಟಿ.
ರಮೇಶ್ ಜಾರಕಿಹೊಳಿ ಅವರು ಈಗಾಗಲೇ ಉತ್ತರ ಭಾರತದ ಎಲ್ಲ ಪುಣ್ಯ ಕ್ಷೇತ್ರಗಳ ದರ್ಶನ ಮಾಡಿದ್ದಾರೆ. ಸೂರತ್ ಮತ್ತು ಅಹಮದಾಬಾದ್ ಗೆ ಹೋಗಿದ್ದು ಯಾತಕ್ಕೆ ಅನ್ನೋದು ಗೊತ್ತಾಗಿಲ್ಲ.ಆದ್ರೆ ಅವರು ಅಲ್ಲಿಯ ಧಾರ್ಮಿಕ ಕ್ಷೇತ್ರಗಳ ದರ್ಶನ ಪಡೆದಿರುವ ಪೋಟೋಗಳು ಮಾತ್ರ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದ್ದು ನಿಜ.
ಉತ್ತರ ಭಾರತದ ಪುಣ್ಯ ಕ್ಷೇತ್ರಗಳಾದ,ಬದರಿನಾಥ,ಅಮರನಾಥ, ಕೇದಾರನಾಥ,ಹೃಷಿಕೇಶ,ವಾರಣಾಸಿ,ಕಾಶಿ,ಅಯೋಧ್ಯಾ, ಮಹಾ ಕಾಳೇಶ್ವರ,ಮಥುರಾ ನೇಪಾಳದ ಪಶುಪತಿನಾಥ,ಸೇರಿದಂತೆ ಬಹುತೇಕ ಎಲ್ಲ ಪುಣ್ಯ ಕ್ಷೇತ್ರಗಳ ದರ್ಶನ ಪಡೆದಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಪರಮ ದೈವಭಕ್ತ.