ಬೆಂಗಳೂರು-ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಇಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ರು.ಒಂದು ಗಂಟೆಗೂ ಹೆಚ್ವು ಸಮಯ ಇಬ್ಬರ ನಡುವೆ ಚರ್ಚೆ ನಡೆಯಿತು.
ಭೇಟಿಯ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಇದೊಂದು ಸೌಜನ್ಯದ ಭೇಟಿ, ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ,ನಾನು ಪ್ರವಾಸದಲ್ಲಿ ಇರುವ ಕಾರಣ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಇಂದು ಭೇಟಿಯಾಗಿ ಆರೋಗ್ಯ ವಿಚಾರಿಸಿ ಬಂದಿದ್ದೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ರು.
ಬಿಜೆಪಿ ಹೈಕಮಾಂಡ್ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದು ಒಳ್ಳೆಯದಾಗುತ್ತದೆ.ರಾಜ್ಯದಲ್ಲಿರುವ ಕೆಟ್ಟ ಸರ್ಕಾರ ಹೋಗಬೇಕಿದೆ.ಜೆಡಿಎಸ್ ಜೊತೆ ಒಪ್ಪಂದ ಆಗಿದ್ದು ಒಳ್ಳೆಯ ನಿರ್ಧಾರ ನಾನು ವ್ಯಯಕ್ತಿಕವಾಗಿ ಸ್ವಾಗತ ಮಾಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ರು.
ಈ ಹಿಂದೆ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿದಂತೆ ಈ ಸರ್ಕಾರದ ಪತನಕ್ಕೆ ಪ್ರಯತ್ನ ಮಾಡ್ತೀರಾ ? ಎಂದು ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ಅದನ್ನು ಹೇಳಿ ಮಾಡೋಕೆ ಆಗೋಲ್ಲ ಅಂದ್ರು
ಸಾಹುಕಾರ್ ಗೆ ಹೈಕಮಾಂಡ್ ಬುಲಾವ್…?
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಜೊತೆ ದೆಹಲಿಗೆ ಬರುವಂತೆ ರಮೇಶ್ ಜಾರಕಿಹೊಳಿ ಅವರಿಗೂ ಬಿಜೆಪಿ ಹೈಕಮಾಂಡ್ ನಿಂದ ಬುಲಾವ್ ಬಂದಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.ಗುರುವಾರ ರಮೇಶ್ ಜಾರಕಿಹೊಳಿ ಮತ್ತು ಕುಮಾರಸ್ವಾಮಿ ಇಬ್ಬರು ಜೊತೆಗೂಡಿ ದೆಹಲಿಗೆ ಹೋಗ್ತಾರೆ ಬಿಜೆಪಿ ವರಿಷ್ಠರ ಜೊತೆ ಕರ್ನಾಟಕ ರಾಜ್ಯದಲ್ಲಿ ಇರುವ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ಮಾಡ್ತಾರೆ ಎನ್ನುವ ಮಾಹಿತಿ ಇದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಉತ್ತರ ಭಾರತದಲ್ಲಿ ಟೆಂಪಲ್ ರನ್ ಮಾಡಿದ ಬಳಿಕ ಈಗ ನೇರವಾಗಿ ಪಾಲಿಟಕ್ಸ್ ಫೀಲ್ಡ್ ಗೆ ಇಳಿದಿದ್ದಾರೆ.