ಬೆಳಗಾವಿ: ವಿಜಯಪುರ ಶಾಸಕಬಸನಗೌಡ ಪಾಟೀಲ್ ಯತ್ನಾಳ್ ನೇತೃತದಲ್ಲಿ ವಕ್ಫ್ ಭೂಕಬಳಿಕೆ ವಿರುದ್ಧ ರೈತರ ಪರವಾಗಿ ಮೊದಲ ಹಂತದ ಹೋರಾಟ ನಡೆಸಿದ ತಂಡವು ದೆಹಲಿಗೆ ತೆರಳಿ ವರದಿಯನ್ನು ಜಗದಂಬಿಕಾ ಪಾಲ್ ನಾಯಕತ್ವದ ಜಂಟಿ ಸಂಸದೀಯ ಸಮಿತಿಗೆ ಸಲ್ಲಿಸಿ ಬೆಳಗಾವಿಗೆ ವಾಪಸ್ಸಾಗಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ತಂಡದ ಹೋರಾಟವನ್ನು ಜೆಪಿಸಿ ಮುಕ್ತವಾಗಿ ಕೊಂಡಾಡಿದೆ. ಅದು ದೇಶದ ಎಲ್ಲ ರಾಜ್ಯಗಳಿಗೆ ಮಾದರಿಯಾಗಲಿದೆ ಎಂದು ಜೆಪಿಸಿ ಸದಸ್ಯರು ಹೇಳಿದ್ದಾರೆ. ತಾವು ನೀಡಿದ ವರದಿ ಜೆಪಿಸಿಯ ಕೆಲಸಕ್ಕೆ ಬಹಳಷ್ಟು ನೆರವಾಗಲಿದೆ ಎಂದಿದ್ದಾರೆ ಎಂದು ಹೇಳಿದರು.
ಜೆಪಿಸಿಯ ಸದಸ್ಯರಾಗಲೀ ಅಥವಾ ಪಕ್ಷದ ವರಿಷ್ಠರಾಗಲೀ ವಕ್ಫ್ ವಿರುದ್ಧ ಹೋರಾಟ ಕೈಬಿಡುವಂತೆ ನಮಗೆ ಹೇಳಿಲ್ಲ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಇನ್ ಫ್ಯಾಕ್ಟ್ ತಾವು ಹೋರಾಟ ಮಾಡಿ ನೀಡಿದ ವರದಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಬಹಳಷ್ಟು ನೆರವಾಗಲಿದೆ ಎಂದು ಜೆಪಿಸಿ ಚೇರ್ಮನ್ ಜಗದಂಬಿಕಾ ಪಾಲ್ ಹೇಳಿದ್ದಾರೆ . ತಮ್ಮ ಹೋರಾಟ ಕೊನೆಗೊಳ್ಳುವವರೆಗೆ ಮತ್ತು ವಕ್ಫ್ ಕಾಯ್ದೆಯಲ್ಲಿ ತಿದ್ದುಪಡಿಗಳನ್ನು ತರುವವರೆಗೆ ವಕ್ಫ್ ತಟಸ್ಥವಾಗಿರಲು ಕೇಂದ್ರದಿಂದ ಸೂಚನೆ ಹೊರಡಿಸಬೇಕೆಂದು ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.