ಬೆಳಗಾವಿ- ಚಿಕ್ಕೋಡಿ ಸದಲಗಾ ಕ್ಷೇತ್ರದಲ್ಲಿ ಪ್ರಕಾಶ್ ಹುಕ್ಕೇರಿ,ಗಣೇಶ್ ಹುಕ್ಕೇರಿ ಸೋಲಿಲ್ಲದ ಸರ್ದಾರರು,ಜೊತೆಗೆ ಕೆಲಸಗಾರರು,ಕ್ಷೇತ್ರದ ಜನರ ಕ್ರೀಯಾಶೀಲ ಸೇವಕರು, ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆ ಹರಿಸಿ ಅಪಾರ ಜನಮೆಚ್ಚುಗೆ ಗಳಿಸಿರುವ ಇವರ ವಿರುದ್ಧ ಅಭ್ಯರ್ಥಿ ನಿಲ್ಲಿಸಲು ಬಿಜೆಪಿ ನಾಯಕರು ಎಲ್ಲಿಲ್ಲದ ಕಸರತ್ತು ನಡೆಸಿದ್ದು,ಈ ಕ್ಷೇತ್ರದಿಂದ ರಮೇಶ್ ಕತ್ತಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಾಯಕರು ಒತ್ತಡ ಹೇರುತ್ತಿದ್ದಾರೆ ಎನ್ನುವ ಸುದ್ದಿ ಬೆಳಗಾವಿ ಜಿಲ್ಲೆಯಾದ್ಯಂತ ಸಾಕಷ್ಟು ಪ್ರಚಾರ ಪಡೆದಿದೆ.
ಚಿಕ್ಕೋಡಿ ಸದಲಗಾ ಕ್ಷೇತ್ರದಿಂದ ರಮೇಶ್ ಕತ್ತಿ ಬಿಜೆಪಿ ಅಭ್ಯರ್ಥಿ ಆಗೋದು ಫೈನಲ್ ಆಗಿದೆ ಎನ್ನುವ ಮಾಹಿತಿ ದೆಹಲಿಯ ನಂಬಲರ್ಹ ಮೂಲಗಳಿಂದ ತಿಳಿದು ಬಂದಿದ್ದು ನಾಳೆ ಅಥವಾ ನಾಡಿದ್ದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬಳಿಕವೇ ಈ ಮಾಹಿತಿ ದೃಡವಾಗಲಿದೆ.
ಚಿಕ್ಕೋಡಿ ಸದಲಗಾ ಕ್ಷೇತ್ರದಿಂದ ಸ್ಪರ್ದಿಸಲು ರಮೇಶ್ ಕತ್ತಿ ಅವರು ಒಪ್ಪುತ್ತಿಲ್ಲ,ಆದ್ರೆ ಬಿಜೆಪಿ ನಾಯಕರು ಇದೇ ಕ್ಷೇತ್ರದಿಂದ ನಿಲ್ಲುವಂತೆ ರಮೇಶ್ ಕತ್ತಿ ಅವರನ್ನು ಮನವೊಲಿಸುತ್ತಿದ್ದು ರಮೇಶ್ ಕತ್ತಿ ದೆಹಲಿಯಲ್ಲೇ ಇದ್ದು,ಬಿಜೆಪಿ ವರಿಷ್ಠರ ಸಲಹೆಯನ್ನು ಒಪ್ಪಬೇಕೋ ಅಥವಾ ತಿರಸ್ಕರಿಸಬೇಕೋ ಎನ್ನುವ ಗೊಂದಲದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬೆಳಗಾವಿ ಉತ್ತರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಸೇರಿದಂತೆ ಕಾಂಗ್ರೆಸ್ ಮತ್ತು ಬಿಜೆಪಿಯ ಎರಡೂ ಪಕ್ಷಗಳ ಆಕಾಂಕ್ಷಿಗಳು ದೆಹಲಿಯಲ್ಲಿ ಠಿಖಾನಿ ಹೂಡಿ ಟಿಕೆಟ್ ಗಾಗಿ ಲಾಭಿ ನಡೆಸಿದ್ದು ನಾಳೆ ಅಥವಾ ನಾಡಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.