ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ ಎ.ಬಿ ಪಾಟೀಲ ಕುಟುಂಬ
ಜೊಲ್ಲೆ ಹಾಗೂ ಜಾರಕಿಹೊಳಿ ಬ್ರದರ್ಸ್ ಗೆ ಕೌಂಟರ್ ನೀಡಲು ಒಂದಾಗಿದ್ದಾರೆ.
ಮೂರು ದಶಕಗಳ ಬದ್ಧ ವೈರಿಗಳಾಗಿದ್ದ ಇಬ್ಬರೂ ಕೈ ಮೀಲಾಯಿಸಿದ್ದಾರೆ ಇಬ್ಬರ ಮಿಲನದಿಂದ,ಹುಕ್ಕೇರಿ ತಾಲೂಕಿನಲ್ಲಿ ರಾಜಕೀಯ ಧೃವೀಕರಣ ಆಗಿದೆ. ಪ್ರತಿ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಸ್ಪರ್ದಿಗಳಾಗಿದ್ದ ಒಂದೇ ತಾಲ್ಲೂಕಿನ ಎರಡು ಕುಟುಂಬಗಳು ಈಗ ಒಂದೇ ವೇದಿಕೆಗೆ ಬಂದಿದ್ದು ಮುಂಬರುವ ಡಿಸಿಸಿ ಬ್ಯಾಂಕ್ ಚುನಾವಣೆಯ ಚಿತ್ರಣ ಬದಲಾಯಿಸಿದ್ದಾರೆ.
ರಾಜಕೀಯ ಎದುರಾಳಿಗಳಾದ ಮಾಜಿ ಸಚಿವ ಎ ಬಿ ಪಾಟೀಲ ಹಾಗೂ ಕತ್ತಿ ಕುಟುಂಬದಿಂದ ಒಗ್ಗಟ್ಟಿನ ಮಂತ್ರ ಜಪಿಸಿದ್ದು,ಕೈ ಯಿಂದ ಜಾರಿ ಹೋಗಿದ್ದ ಹೀರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತೆ ಮರಳಿ ಪಡೆದಿದ್ದು ಕಾರ್ಖಾನೆ ಈಗ ಕತ್ತಿ ಕುಟುಂಬದ ತೆಕ್ಕೆಗೆ ಬಂದಿದೆ.
ಹೀರಾ ಶುಗರ್ಸ್ ಸಹಕಾರಿ ಕಾರ್ಖಾನೆಯ ನಿರ್ದೇಶಕರು ಕತ್ತಿ ಕುಟುಂಬ ಬಿಟ್ಟು ಜಾರಕಿಹೊಳಿ ಹಾಗೂ ಜೊಲ್ಲೆ ಕಡೆ ವಾಲಿದ್ದರು.ಮಾಜಿ ಸಚಿವ ಎ ಬಿ ಪಾಟೀಲ ಹಾಗೂ ರಮೇಶ ಕತ್ತಿ ಇಬ್ಬರು ಕೂಡಿಕೊಂಡು ತಮ್ಮನ್ನು ಬಿಟ್ಟು ಹೋಗಿದ್ದ ನಿರ್ದೇಶಕರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಧಾನನದ ಬಳಿಕ ಜಾರಕಿಹೊಳಿ ಹಾಗೂ ಜೊಲ್ಲೆ ಬಿಟ್ಟು ಹೋಗಿದ್ದ ಹೀರಾ ಶುಗರ್ಸ್ ನಿರ್ದೇಶಕರು ಈಗ ಮತ್ತೆ ರಮೇಶ್ ಕತ್ತಿ ಗರಡಿಗೆ ಸೇರಿದ್ದಾರೆ.ನಿರ್ದೇಶಕರ ಜೊತೆಗೂಡಿ ಮಾಜಿ ಸಚಿವ ಎ ಬಿ ಪಾಟೀಲ,ಮಾಜಿ ಸಂಸದ ರಮೇಶ ಕತ್ತಿ, ಶಾಸಕ ನಿಖೀಲ ಕತ್ತಿ ಜಂಟಿ ಸುದ್ದಿಗೋಷ್ಠಿ ನಡೆಸಿ ಒಗ್ಗಟ್ಡು ಪ್ರದರ್ಶಿಸಿದ್ದಾರೆ.
ಮಾಜಿ ಸಚಿವ ಎ ಬಿ ಪಾಟೀಲ ಮಾಧ್ಯಮಗಳ ಜೊತೆ ಮಾತನಾಡಿ,ನಮ್ಮ ಒಗ್ಗಟ್ಟು ನೋಡಿ ಎಲ್ಲರಿಗೂ ಆಶ್ಚರ್ಯವಾಗಿದೆ.ಒಂದಾಗಬೇಕು ಎನ್ನುವದು ಬಹಳ ಜನರ ಇಚ್ಚೆಯಾಗಿತ್ತು.
ಸಹಕಾರ ತತ್ವ ಮೇಲೆ ನಡೆಯಬೇಕೆಂದು ಒತ್ತಾಯ ಮಾಡಿದ್ದೇವೆ.ಅಣ್ಣಾಸಾಹೇಬ ಜೊಲ್ಲೆ ಹಾಗೂ ನಿರ್ದೇಶಕರ ನಡುವೆ ಹೊಂದಾಣಿಕೆ ಆಗಲಿಲ್ಲ.ಜೊಲ್ಲೆ ಹಣಕಾಸಿನ ನೆರವು ನೀಡಲು ಹಿಂದೇಟು ಹಾಕಿದರು.ಎಂದು ಎಬಿ ಪಾಟೀಲ ಆರೋಪಿಸಿದರು.
ಹೀರಣ್ಯಕೇಶಿ ಸಕ್ಕರೆ ಕಾರ್ಖಾನೆ ಉಪಕಾರ ನಮ್ಮ ಕುಟುಂಬದ ಮೇಲಿದೆ.ತಾಲೂಕು ಹಾಗೂ ಸಂಸ್ಥೆಯ ಹಿತದೃಷ್ಟಿಯಿಂದ ಒಂದಾಗಿದ್ದೇವೆ.30 ವರ್ಷಗಳ ಬಳಿಕ ಕಾರ್ಖಾನೆಯಲ್ಲಿ ಕಾಲಿಟ್ಟಿದ್ದೇನೆ.ಕಾರ್ಖಾನೆ ಸಹಕಾರಿ ಕ್ಷೇತ್ರದ ಮೇಲೆ ನಡೆಯಬೇಕು.ಪಕ್ಷದ ವಿಚಾರ ಬಂದರೇ ಹೊಂದಾಣಿಕೆ ಅನ್ವಯಿಸುವದಿಲ್ಲ.ರಾಜಕೀಯ ಕ್ಷೇತ್ರ ಬೇರೆ ಸಹಕಾರಿ ಕ್ಷೇತ್ರ ಬೇರೆ ಎಂದು ರಮೇಶ ಕತ್ತಿ ಎ ಬಿ ಪಾಟೀಲ ಹೇಳಿದರು.
ಇಬ್ಬರು ರಾಜಕೀಯ ಬದ್ಧವೈರಿಗಳು ಒಂದಾದ ಬಳಿಕ ಡಿಸಿಸಿ ಬ್ಯಾಂಕ್ ಚುನಾವಣೆಯ ಲೆಕ್ಕಾಚಾರವೂ ಬದಲಾಗಿದೆ.