ಬೆಳಗಾವಿ- ಲೋಕಸಭೆ ಚುನಾವಣೆ ಘೋಷಣೆಯಾಗುವ ಹೊಸ್ತಿಲಲ್ಲಿ ಆಕಾಂಕ್ಷಿಗಳ ಲಾಭಿ ಜೋರಾಗಿಯೇ ನಡೆದಿದೆ ಬೆಳಗಾವಿಯಿಂದ ಎರಡು ಬಾರಿ ಶಾಸಕರಾಗಿದ್ದ ರಮೇಶ್ ಕುಡಚಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ದಿಸಲು ನಿರ್ಧರಿಸಿದ್ದಾರೆ
ಬೆಳಗಾವಿ ಉತ್ತರ ದಕ್ಷಿಣ ಎಂದು ಕ್ಷೇತ್ರ ವಿಂಗಡನೆಯ ಬಳಿಕ ಕಾಂಗ್ರೆಸ್ ಟಿಕೆಟ್ ನಿಂದ ವಂಚಿತರಾಗಿದ್ದ ರಮೇಶ್ ಕುಡಚಿ ದಶಕದ ಅಜ್ಞಾತವಾಸದ ಬಳಿಕ ಈಗ ಮತ್ತೆ ರಂಗಪ್ರವೇಶ ಮಾಡಿದ್ದಾರೆ
ಈ ಬಾರಿ ಲೋಕಸಭೆಗೆ ಸ್ಪರ್ದಿಸಲು ತಮಗೆ ಕಾಂಗ್ರೆಸ್ ಟಿಕೆಟ್ ದೊರಕಿಸಿ ಕೊಡುವಂತೆ ರಮೇಶ್ ಕುಡಚಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ದುಂಬಾಲು ಬಿದ್ದಿರುವುದು ಈಗ ಗುಟ್ಟಾಗಿ ಉಳಿದಿಲ್ಲ
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಸ್ಥಾನಮಾನ ಹೊಂದಿರದ ಶಿವಕಾಂತ ಸಿಧ್ನಾಳ ಈಗ ಕೆಪಿಸಿಸಿ ಸದಸ್ಯರಾಗಿ ನೇಮಕಗೊಂಡಿದ್ದಾರೆ ಶಿವಕಾಂತ ಸಿದ್ನಾಳ ಅವರಿಗೆ ತಯಾರಿ ಮಾಡಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ
ಲಕ್ಷ್ಮೀ ಹೆಬ್ಬಾಳಕರ ಸಹೋದರ ಚನ್ನರಾಜ ಹಟ್ಟಿಹೊಳಿ ಅವರು ಕಾಂಗ್ರೆಸ್ ಟಿಕೆಟ್ ಗಾಗಿ ನೇರವಾಗಿ ಲಾಭಿ ಮಾಡದೇ ಇದ್ದರೂ ಇವರ ಸಂಘಟನಾ ಶಕ್ತಿ ನೋಡಿ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಮನಿಕ್ಕಂ ಟ್ಯಗೋರ ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರ ಎದುರು ಚನ್ನರಾಜ ಹಟ್ಟಿಹೊಳಿ ಅವರ ಹೆಸರು ಶಿಫಾರಸ್ಸು ಮಾಡಿದ್ದಾರೆ ಎಂದು ತಿಳಿದು ಬಂದಿದೆ
ಬೈಲಹೊಂಗದ ಸಾದುಣವರ ಅವರು ಕಾಂಗ್ರೆಸ್ ಟಿಕೆಟ್ ಗಾಗಿ ಜೋರ್ ದಾರ್ ಲಾಭಿ ನಡೆಸಿದ್ದಾರೆ ಒಟ್ಟಾರೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಹಲವಾರು ಜನ ಕಾಂಗ್ರೆಸ್ ಆಕಾಂಕ್ಷಿಗಳ ಮದ್ಯ ಮಾಜಿ ಶಾಸಕ ರಮೇಶ್ ಕುಡಚಿ ನುಸಳಿರುವದು ಉಳಿದ ಆಕಾಂಕ್ಷಿಗಳಿಗೆ ಅಚ್ಚರಿ ಮೂಡಿಸಿದೆ