ಬೆಳಗಾವಿ- ಬೆಳಗಾವಿ ಕಾಂಗ್ರೆಸ್ ಕಮೀಟಿಯ ಆಂತರಿಕ ಜಗಳ ಈಗ ವಿಕೋಪಕ್ಕೆ ಹೋಗಿದೆ. ಇತ್ತೀಚಿಗೆ ಸತೀಶ್ ಜಾರಕಿಹೊಳಿ ಅವರು ಹೆಸರು ಪ್ರಸ್ತಾಪಿಸದೇ ಪರೋಕ್ಷವಾಗಿ ಮಾಜಿ ಶಾಸಕ ಫಿರೋಜ್ ಸೇಠ್ ವಿರುದ್ಧ ವಾಗ್ದಾಳಿ ನಡೆಸಿದ ಬೆನ್ನಲ್ಲಿಯೇ ಇವತ್ತು ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಶಾಸಕ ರಮೇಶ್ ಕುಡಚಿ ಅವರು ಪ್ರತ್ಯಕ್ಷರಾಗಿದ್ದಾರೆ.
ಮಾಜಿ ಶಾಸಕ ರಮೇಶ್ ಕುಡಚಿ ಅವರು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಪಕ್ಷ ಸೇರಿ ನಂತರ ವಿವಿಧ ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಂಡಿದ್ದರು. ರಮೇಶ್ ಕುಡಚಿ ಅವರು ಇವತ್ತು ಧಿಡೀರ್ ಬೆಳಗಾವಿಯ ಕಾಂಗ್ರೆಸ್ ಕಚೇರಿಗೆ ಆಗಮಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಆಗಿರುವ ವಿಷಯ ಬೆಳಗಾವಿ ಕಾಂಗ್ರೆಸ್ ಪಕ್ಷದ ವಲಯದಲ್ಲಿ ಅಚ್ವರಿ ಮೂಡಿಸಿದೆ.
ದಾವಣಗೇರಿಯ ಜಬ್ಬಾರ್ ಖಾನ್ ಎಂಬ ಕಾಂಗ್ರೆಸ್ ನಾಯಕ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡುವ ಕಾರ್ಯಕ್ರಮ ಇದೇ ತಿಂಗಳು 17 ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿದೆ..ಇದೇ ಕಾರ್ಯಕ್ರಮದಲ್ಲಿ ಬೆಳಗಾವಿಯ ಮಾಜಿ ಶಾಸಕ ರಮೇಶ್ ಕುಡಚಿ ಅವರು ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆ ಆಗಲಿದ್ದಾರೆ ಎಂಬ ಸುದ್ಧಿ ಈಗ ಗುಟ್ಟಾಗಿ ಉಳಿದಿಲ್ಲ.
ರಮೇಶ್ ಕುಡಚಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆ ಮಾಡಿಕೊಳ್ಳುತ್ತಿರುವ ವಿಷಯ ಈ ಹಿಂದೆ ಚರ್ಚೆಗೆ ಬಂದಾಗ ಮಾಜಿ ಶಾಸಕ ಫಿರೋಜ್ ಸೇಠ ಅವರು ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು.
ದಿನಾಂಕ 17 ರಂದು ಮಾಜಿ ಶಾಸಕ ರಮೇಶ ಕುಡಚಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿರುವ ಸುದ್ದಿ ಬೆಳಗಾವಿಯಲ್ಲಿ ಪ್ರಚಾರ ಪಡೆಯುತ್ತಿದ್ದಂತೆಯೇ ಮಾಜಿ ಶಾಸಕ ಫಿರೋಜ್ ಸೇಠ್ 17 ರಂದು ಬೆಂಗಳೂರಲ್ಲಿ ನಡೆಯುವ ಜಬ್ಬಾರ್ ಖಾನ್ ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ ಸಾವಿರಾರು ಬೆಂಬಲಿಗರೊಂದಿಗೆ ಬೆಂಗಳೂರಿಗೆ ತೆರಳಲು ತಯಾರಿ ನಡೆಸಿದ್ದಾರೆ.
ಮಾಜಿ ಶಾಸಕ ರಮೇಶ್ ಕುಡಚಿ ಬೆಂಬಲಿಗರು,ಹಾಗು ಮಾಜಿ ಶಾಸಕ ಫಿರೋಜ್ ಸೇಠ ಬೆಂಬಲಿಗರು 17 ರಂದು ಬೆಂಗಳೂರಲ್ಲಿ ನಡೆಯುವ ಜಬ್ಬಾರ್ ಖಾನ್ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಮುಖಾಮುಖಿ ಆಗಲಿದ್ದು ಈ ಕಾರ್ಯಕ್ರಮ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಜಗಳಕ್ಕೆ ಪ್ರತ್ಯಕ್ಷ್ಯ ಸಾಕ್ಷಿಯಾಗಲಿದೆ.
ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಆಂತರಿಕ ಕಲಹ ಈಗ ಸದ್ಯಕ್ಕೆ ಬೂಧಿ ಮುಚ್ವಿದ ಕೆಂಡದಂತಾಗಿದ್ದು 17 ರಂದು ಈ ಜಗಳ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸ್ಪೋಟಗೊಳ್ಳುವದು ಗ್ಯಾರಂಟಿ….!!!
ರಮೇಶ್ ಕುಡಚಿ ಅವರು ಬೆಳಗಾವಿ ಮಹಾನಗರ ಪಾಲಿಕೆಯ ನಗರಸೇವಕರಾಗಿ ಪಾಲಿಕೆಯ ಮೇಯರ್ ಆಗಿ ನಂತರ 1999 ರಲ್ಲಿ ನಾಡ ವಿರೋಧಿ ಎಂಈಎಸ್ ಸೋಲಿಸಿ ಪ್ರಥಮ ಕನ್ನಡದ ಶಾಸಕರಾಗಿ ಆಯ್ಕೆಯಾಗಿದ್ದರು ನಂತರ 2004 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲೂ ರಮೇಶ್ ಕುಡಚಿ ಅವರು ಬೆಳಗಾವಿ ಮಹಾನಗರದ ಶಾಸಕರಾಗಿ ಮರು ಆಯ್ಕೆ ಆಗಿದ್ದು ಬೆಳಗಾವಿಯ ಕನ್ನಡಪರ ಹೋರಾಟದ ಇತಿಹಾಸ.
ನಂತರ ವಿಧಾನಸಭಾ ಕ್ಷೇತ್ರಗಳ ಮರು ವಿಂಗಡನೆಯ ನಂತರ ಬೆಳಗಾವಿ ಮಹಾನಗರ ಕ್ಷೇತ್ರ ಬೆಳಗಾವಿ ಉತ್ತರ- ದಕ್ಷಿಣ ಗ್ರಾಮೀಣ ಎಂದು ವಿಂಗಡನೆ ಆದ ಬಳಿಕ ಬೆಳಗಾವಿ ಉತ್ತರ ಕ್ಷೇತ್ರದಿಂದ ಫಿರೋಜ್ ಸೇಠ ಅವರಿಗೆ ಕಾಂಗ್ರೆಸ್ ಟಿಕೆಟ್ ಲಭಿಸಿತು ಈ ಸಂಧರ್ಭದಲ್ಲಿ ರಮೇಶ್ ಕುಡಚಿ ಕಾಂಗ್ರೆಸ್ ಪಕ್ಷ ಬಿಟ್ಟು ಜೆಡಿಎಸ್ ಪಕ್ಷದಿಂದ ಸ್ಪರ್ದೆ ಮಾಡಿದ್ರು ಆದ್ರೆ ಈ ಚುನಾವಣೆಯಲ್ಲಿ ಫಿರೋಜ್ ಸೇಠ ಜಯಭೇರಿ ಸಾಧಿಸಿದ್ದರು.
ಶಾಸಕ ಫಿರೋಜ್ ಸೇಠ ಮತ್ತು ರಮೇಶ್ ಕುಡಚಿ ಈ ಇಬ್ಬರು ನಾಯಕರು ಅಲ್ಪ ಸಂಖ್ಯಾತ ಸಮುದಾಯದ ಜೊತೆ ವಿಶೇಷ ನಂಟು ಹೊಂದಿದ್ದಾರೆ,ಈ ಸಮುದಾಯದ ಜನ ಇಬ್ಬರನ್ನೂ ಪ್ರಿತಿಸುತ್ತಾರೆ ಆದ್ರೆ ಈ ಇಬ್ನರು ಘಟಾನುಘಟಿಗಳ ನಾಯಕರ ಸಾವಿರಾರು ಬೆಂಬಲಿಗರು 17 ರಂದು ಬೆಂಗಳೂರಲ್ಲಿ ಮುಖಾಮುಖಿ ಆಗಲಿದ್ದು ಕೆಪಿಸಿಸಿ ಅದ್ಯಕ್ಷ ಡಿಕೆ ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ರಾಮಯ್ಯ ಅವರಿಗೆ ಮುಜುಗರ ಮಾಡಲಿದೆ ಯಾಕಂದ್ರೆ ರಮೇಶ್ ಕುಡಚಿ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದಾರೆ.