ಬೆಳಗಾವಿ-ಬೆಳಗಾವಿ ಲೋಕಸಭಾ ಚುನಾವಣೆಯ ದಿನಾಂಕ ನಿಗದಿಯಾಗಿಲ್ಲ,ಆದ್ರೆ ಈ ಚುನಾವಣೆ ಮಿನಿ ಸಮರ ಆಗುವದು ಖಚಿತವಾಗಿದೆ,ಯಾಕಂದ್ರೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ,ಸಾಹುಕಾರ್ ಸಹೋದರರ ಮೇಲಿದೆ.ಈ ಚುನಾವಣೆ ಇಬ್ಬರೂ ಸಹೋದರರಿಗೆ ಸವಾಲ್ ಆಗಿದೆ.
ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ಅವರ ನೇತ್ರತ್ವದಲ್ಲೇ ಚುನಾವಣೆ ಮಾಡ್ತೀವಿ,ಅಭ್ಯರ್ಥಿ ಆಯ್ಕೆ ಸಮೀತಿಯ ಅದ್ಯಕ್ಷ ಮಾಜಿ ಸಚಿವ ಎಂಬಿ ಪಾಟೀಲ್ ಬೆಳಗಾವಿಯಲ್ಲಿ ಘೋಷಣೆ ಮಾಡಿದ್ದಾರೆ,ಅದಲ್ಲದೇ ಅಚ್ಚರಿಯ ಅಭ್ಯರ್ಥಿಯನ್ನು ಅವರೇ ಆಯ್ಕೆ ಮಾಡ್ತಾರೆ ಎಂದು ಎಂಬಿ ಪಾಟೀಲ್ ಬೆಳಗಾವಿಯಲ್ಲಿ ಸುಳಿವು ನೀಡಿದ್ದು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಸತೀಶ್ ಅವರಿಗೆ ಕೊಟ್ಟಿದ್ದು ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆ ಸತೀಶ್ ಜಾರಕಿಹೊಳಿ ಅವರಿಗೆ ದೊಡ್ಡ ಸವಾಲ್ ಆಗಿದೆ.
ಇತ್ತ ಬಿಜೆಪಿಯಲ್ಲಿ ರಮೇಶ್ ಜಾರಕಿಹೊಳಿ ಪ್ರಬಲ,ಅವರೇ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು,ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ,ರಮೇಶ್ ಜಾರಕಿಹೊಳಿ ಅವರಿಗೆ ಸಿಗಲಿದೆ.ಹೀಗಾಗಿ ಇಬ್ಬರೂ ಸಹೋದರರು ಈ ಚುನಾವಣೆಯಲ್ಲಿ ಪಕ್ಷ ನಿಷ್ಠೆ ತೋರಿಸುವದೇ ಇಬ್ಬರಿಗೂ ದೊಡ್ಡ ಸವಾಲ್ ಆಗಿದೆ.
ಗೋಕಾಕ್ ಉಪ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ,ಮತ್ತು ರಮೇಶ್ ಜಾರಕಿಹೊಳಿ ಅವರ ನಡುವೆ ದೊಡ್ಡ ಗುದ್ದಾಟ ನಡೆದಿತ್ತು ಸತೀಶ್ ಜಾರಕಿಹೊಳಿ ಅವರು ತಮ್ಮ ಕಿರಿಯ ಸಹೋದರ ಲಖನ್ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಿ ರಮೇಶ್ ಜಾರಕಿಹೊಳಿ ಅವರಿಗೆ ಪೈಪೋಟಿ ನೀಡಿದ್ದರು,ಗೋಕಾಕ್ ಉಪ ಚುನಾವಣೆಯಲ್ಲಿ ಇಬ್ಬರು ಸಾಹುಕಾರ್ ಗಳ ನಡುವೆ ವಾಕ್ ಸಮರವೇ ನಡೆದಿತ್ತು
ಈಗ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆಯಲ್ಲಿ ಅದೇ ಪರಿಸ್ಥಿತಿ ಮುಂದುವರೆಯಲಿದೆ ಈ ಚುನಾವಣೆಯಲ್ಲೂ ಇಬ್ಬರು ಸಹೋದರರ ನಡುವೆ ಮತ್ತೆ ಗುದ್ದಾಟ ನಡೆಯೋದು ಖಚಿತ.
ಬಿಜೆಪಿ,ಮತ್ತು ಕಾಂಗ್ರೆಸ್ ಪಕ್ಷದಲ್ಲಿ,ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕಸರತ್ತು ನಡೆದಿದೆ.ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.