ಹಾಹುಲ್ ಮಂದಿರಗಳಿಗೆ ಹೋದ್ರೆ ಬಿಜೆಪಿ ಯವರಿಗೆ ಹೊಟ್ಟೆಹುರಿ ಏಕೆ ?
ಬೆಳಗಾವಿ- ಹಿಂದುತ್ವ ವನ್ನು ಬಿಜೆಪಿ ಯವರು ಗುತ್ತಿಗೆ ಪಡೆದಿಲ್ಲ ರಾಹುಲ್ ಗಾಂಧಿಯವರು ಮಂದಿರಗಳಿಗೆ ತೆರಳಿ ದೇವಿ,ದೇವತೆಗಳಿಗೆ ಪೂಜೆ ಸಲ್ಲಿಸಿದರೆ ಬಿಜೆಪಿಗೆ ಹೊಟ್ಟೆಹುರಿ ಏಕೆ ? ಎಂದು ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿ ಪ್ರಶ್ನಿಸಿದ್ದಾರೆ
ಬೆಳಗಾವಿಯ ಸಾಂಬ್ರಾ ವಿಮಾಣ ನಿಲ್ಧಾಣದಲ್ಲಿ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಹಿಂದುತ್ವ ಸನಾತನ ಧರ್ಮ ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಮಾಡುವದು ಸರಿಯಲ್ಲ ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಮಾಡೋದನ್ನು ಬಿಟ್ಟು ಒಳ್ಳೆಯ ಕಾರ್ಯಗಳನ್ನು ಮಾಡಲಿ ಎಂದು ರಾಮಲಿಂಗಾರೆಡ್ಡಿ ಬಿಜೆಪಿ ನಾಯಕರಿಗೆ ಕಿವಿಮಾತು ಹೇಳಿದರು
ಬೆಳಗಾವಿಯಲ್ಲಿ ಪೋಲೀಸ್ ಆಯುಕ್ತರ ನೂತನ ಕಚೇರಿ ಕಟ್ಟಡ ನಿರ್ಮಾಣಕ್ಕೆ ತೀರ್ಮಾಣ ಮಾಡಲಾಗಿದೆ ನಗರ ಪೊಲೀಸ್ ಆಯುಕ್ತರ ಸ್ವಂತ ಕಚೇರಿ ನಿರ್ಮಾಣಕ್ಕೆ ಸರಕಾರ ಅನುದಾನ ಬಿಡುಗಡೆ ಮಾಡಿದೆ. ಆದಷ್ಟು ಬೇಗ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಸಚಿವರು ತಿಳಿಸಿದರು
ಈ ಹಿಂದೆ ಚಳಿಗಾಲ ಅಧಿವೇಶನದಲ್ಲಿ ನೀರಾವರಿ ಇಲಾಖೆಯಲ್ಲಿ ಕಚೇರಿ ಪ್ರಾರಂಭಿಸುವ ಯೋಚನೆ ಇತ್ತು. ಆದರೆ ನೀರಾವರಿ ಇಲಾಖೆಯವರು ಬಿಟ್ಟು ಕೊಡಲಿಲ್ಲ ಅದಕ್ಕಾಗಿ ವಿಳಂಬವಾಯಿತು ಎಂದರು.
ನಗರ ಪೊಲೀಸ್ ಆಯುಕ್ತ ಡಾ.ಡಿ.ಸಿ.ರಾಜಪ್ಪ,ಸೇರಿದಂತೆ ಇಲಾಖೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ