ಬೆಳಗಾವಿ-ಬೆಳಗಾವಿಯ ಚನ್ನಮ್ಮ ವಿಶ್ವ ವಿದ್ಯಾಲಯ ವಿರುದ್ಧ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳು ಧಿಡೀರ್ ಪ್ರತಿಭಟನೆ ನಡೆಸುತ್ತಿದ್ದಾರೆ.ಆಡಳಿತ ಮಂಡಳಿ ಕಚೇರಿಗೆ ಬೀಗ ಹಾಕಿ ಆಕ್ರೋಶ ಹೊರ ಹಾಕಿದ ವಿದ್ಯಾರ್ಥಿಗಳು ಚನ್ನಮ್ಮ ವಿಶ್ವವಿದ್ಯಾಲಯದ ವಿರುದ್ಧ ಯುದ್ಧ ಸಾರಿದ್ದಾರೆ.
ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಬಳಿ ಇರುವ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ವಿಧ್ಯಾರ್ಥಿಗಳ ಆಂದೋಲನದ ಶುರುವಾಗಿದೆ.ವಿಶ್ವವಿದ್ಯಾಲಯ ಮುಂಭಾಗದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸುತ್ತಿದ್ದಾರೆ.
ಪರಿಶಿಷ್ಟ ಜಾತಿ, ಪಂಗಡ ವಿದ್ಯಾರ್ಥಿಗಳಿಗೆ ಕಡಿಮೆ ಶಿಷ್ಯವೇತನ ಮಂಜೂರಾಗಿದೆ.ಮಂಜೂರಾದ ಮೊತ್ತದಲ್ಲಿ ನೀಡಿದ ಮೊತ್ತಕ್ಕಿಂತ ಕಡಿಮೆ ಶಿಷ್ಯವೇತನ ಜಮೆ ಮಾಡಲಾಗುತ್ತಿದೆ.ಹೀಗಾಗಿ ಉಳಿದ ಮೊತ್ತವನ್ನು ಡಿ.ಸಿ.ಬಿ. ಪ್ರಕಾರ ವಿದ್ಯಾರ್ಥಿಗಳು ಮರುಭರಣಾ ಮಾಡಬೇಕೆಂದು ಸೂಚನೆ ನೀಡಲಾಗಿದೆ.ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಘಟಕದವರಿಂದ ಸೂಚನೆ ನೀಡಿದ ಹಿನ್ನೆಲೆ ವಿದ್ಯಾರ್ಥಿಗಳು ಶುಲ್ಕದ ಬಾಕಿ ಮೊತ್ತ ಪಾವತಿಸುವಂತೆ ಸುತ್ತೋಲೆ ಹೊರಡಿಸಿದ ರಾಣಿ ಚನ್ನಮ್ಮ ವಿವಿ ಹೊರಡಿಸಿದ ಸುತ್ತೋಲೆ ವಿರೋಧಿಸಿ ವಿದ್ಯಾರ್ಥಿಗಳ ಧರಣಿ ನಡೆಸುತ್ತಿದ್ದಾರೆ.
ಕಳೆದ ಎರಡು ದಿನಗಳಿಂದ ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.ಆಡಳಿತ ಕಚೇರಿ ಮುಂಭಾಗದ ಎದುರು ಧರಣಿ ಮುಂದುವರೆಸಿದ ವಿದ್ಯಾರ್ಥಿಗಳು ವಿವಿ ಆಡಳಿತದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.
ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ರೂ ಸ್ಥಳಕ್ಕೆ ಬಾರದ ವಿಸಿ ರಾಮಚಂದ್ರಗೌಡ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪರೀಕ್ಷೆಗಳು ಸಮೀಪಿಸುವಾಗಲೇ ರಾಣಿ ಚನ್ನಮ್ಮ ವಿವಿ ಸುತ್ತೋಲೆಗೆ ವಿದ್ಯಾರ್ಥಿಗಳು ಕೆಂಡಾಮಂಡಲವಾಗಿದ್ದಾರೆ.