ಬೆಳಗಾವಿ-ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯಕ್ಕೆ ಸ್ವಂತ ಕಟ್ಟಡಬೇಕು ಎನ್ನುವ ಬೇಡಿಕೆ ಇದೆ.ಇದಕ್ಕೆ ಸರ್ಕಾರ ಸ್ಪಂದಿಸಿದೆ,ಹನ್ನೆರಡು ಎಕರೆ ಜಾಗೆ ನೀಡಿದೆ ರೈತರು ಇನ್ನಷ್ಟು ಭೂಮಿ ಕೊಟ್ಟರೆ ಅನಕೂಲವಾಗುತ್ತದೆ,ಈ ವಿಚಾರದಲ್ಲಿ ರಾಜಕೀಯ ಮಾಡುವದು ಸರಿಯಲ್ಲ,ಕಿತ್ತೂರಿಗೆ ಏನ್ ಮಾಡಬೇಕೋ ಅದನ್ನು ಮಾಡ್ತೀವಿ,ಚನ್ನಮ್ಮ ಯುನಿವರ್ಸಿಟಿಯ ಕಟ್ಟಡ ನಿರ್ಮಾಣಕ್ಕೆ ನೂರು ಕೋಟಿ ರೂ ಅನುದಾನ ಮೀಸಲಿಡಲಾಗಿದೆ ಎಂದು ಬೆಳಗಾವಿಯಲ್ಲಿ ಡಿಸಿಎಂ ಅಶ್ವತ್ಥನಾರಾಯಣ ಹೇಳಿದ್ರು.
ಕರ್ನಾಟಕದ ಜನರಿಗೆ ಉಚಿತ ಕೊರೊನಾ ಲಸಿಕೆ ಕೊಡಿಸುವ ಧಮ್ ಇದೆಯಾ ಎಂಬ ಸಿದ್ದರಾಮಯ್ಯ ಟ್ವೀಟ್ ಮಾಡಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಅಶ್ವತ್ಥನಾರಾಯಣ,ಕೊರೊನಾ ಲಸಿಕೆ ಬಂದಾಗ ಈ ವಿಚಾರದಲ್ಲಿ ಸಿಎಂ ಬಿಎಸ್‌ವೈ ಘೋಷಣೆ ಮಾಡ್ತಾರೆ ಎಂದರು.
ಬೆಳಗಾವಿಯಲ್ಲಿ ಮಾದ್ಯಮಮಿತ್ರರ ಜೊತೆ ಮಾತನಾಡಿದ ಡಿಸಿಎಂ ಅಶ್ವತ್ಥ್ ನಾರಾಯಣ್ ಇಂದೂ ಕೊರೊನಾ ವಿಚಾರದಲ್ಲಿ ಎಲ್ಲವೂ ಫ್ರೀಯಾಗಿಯೇ ನಡೆಯುತ್ತಿದೆ, ಸರ್ಕಾರದಿಂದಲೇ ಎಲ್ಲಾ ರೀತಿಯ ಉಚಿತ ಆರೋಗ್ಯ ವ್ಯವಸ್ಥೆ ಮಾಡಲಾಗುತ್ತಿದೆ,ಮುಂದೆ ಕೊರೊನಾ ಲಸಿಕೆ ಬಂದಾಗ ಸರ್ಕಾರದಿಂದ ಲಸಿಕೆ ಕೊಡ್ತೇವಿ ಎಂದು ಅಶ್ವತ್ಥ ನಾರಾಯಣ ಸಿದ್ರಾಮಯ್ಯಗೆ ಟಾಂಗ್ ಕೊಟ್ಟರು.
ಬಿಹಾರ ಚುನಾವಣೆಯ ಬಿಜೆಪಿ ಪ್ರಣಾಳಿಕೆಯಲ್ಲಿ ಕೊರೊನಾ ಲಸಿಕೆ ಫ್ರೀ ನೀಡುವ ಭರವಸೆ ವಿಚಾರದ ಪ್ರಶ್ನೆಗೆ ಉತ್ತರಿಸಿದ ಅವರು, ಅದರಲ್ಲಿ ತಪ್ಪೇನಿಲ್ಲ, ನಾವು ಮಾಡೋಕೆ ತಯಾರಿದ್ದೀವಿ ಅಂತಾ ಜನರಿಗೆ ವಿಶ್ವಾಸ ಮೂಡಿಸಿದ್ದಾರೆ, ನಮ್ಮ ಸರ್ಕಾರದಲ್ಲಿ ಉಚಿತ ಲಸಿಕೆ ಕೊಡ್ತೀವಿ ಅಂತಾ ಹೇಳಿದ್ದಾರೆ ಜನರಿಗೆ ವಿಶ್ವಾಸ ಬೇಕಲ್ಲ, ಫ್ರೀ ಲಸಿಕೆ ಕೊಡ್ತಾರೋ ಬಿಡ್ತಾರೋ ಅಂತಾ ಜನರಿಗೆ ಗೊತ್ತಿರಲ್ಲಲ್ಲ, ಅದನ್ನ ಕೊಡಲು ನಾವು ಸಿದ್ಧರಾಗಿದ್ದೀವಿ ಅಂತಾ ಹೇಳಿದ್ದೇವೆ. ಪ್ರತಿ ಪಕ್ಷದವರು ಕರ್ನಾಟಕದಲ್ಲಿ ಕೊಡಲು ಧಮ್ ಇಲ್ವಾ ಅಂತಾ ಕೇಳ್ತಿದಾರಲ್ಲ, ಈ ರೀತಿ ಹೇಳಿಕೆ ಕೊಟ್ಟಾಗ ಜನರಲ್ಲಿ ಅನುಮಾನ ನಿರ್ಮಾಣ ಮಾಡಲ್ವೆ ? ಎಂದು ಪ್ರಶ್ನೆ ಮಾಡಿದ ಡಿಸಿಎಂ ಸ್ಪಷ್ಟತೆ ಕೊಡುವ ಸಲುವಾಗಿ ನಮ್ಮ ಪ್ರಣಾಳಿಕೆಯಲ್ಲಿ ಜನರಿಗೆ ವಿಶ್ವಾಸ ಕೊಡುವ ಕೆಲಸ ಮಾಡಿದ್ದೇವೆ. ರಾಜ್ಯದ ಜನರಿಗೂ ಖಂಡಿತ ಕೊರೊನಾ ಲಸಿಕೆ ಉಚಿತವಾಗಿ ಸಿಗುತ್ತೆ ಎಂದು ಭರವಸೆ ನೀಡಿದರು.
ಕಾಲೇಜು ಆರಂಭಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ಮಾಡಿದ್ದಾರಲ್ಲ ಎಂದು ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಇನ್‌ಸೆನ್ಸಿಟಿವ್ ಆಗಿ, ಸರಿಯಾಗಿ ಯೋಚನೆ ಮಾಡದೇ ಹೇಳಿಕೆ ಕೊಟ್ಟಿದ್ದಾರೆ, ಈ ವಿಚಾರದಲ್ಲಿ ಸಿದ್ದರಾಮಯ್ಯ ಹೇಳಿಕೆ ಕೊಡೋದು ಅವರ ಸ್ಥಾನಕ್ಕೆ ಸೂಕ್ತವಲ್ಲ, ಕಾಲೇಜುಗಳ ಆರಂಭ ಬಗ್ಗೆ ಸಿದ್ದರಾಮಯ್ಯ ಸ್ವಾಗತ ಮಾಡಬೇಕಿತ್ತು ಸ್ವಾಗತ ಮಾಡೋದು ಬಿಟ್ಟು ಈ ರೀತಿ ಹೇಳಿಕೆ ಕೊಡ್ತಿರೋದು ಪರಿಸ್ಥಿತಿ ಅರ್ಥವಾಗಿ ಪರಿಹಾರ ಏನೂ ಅರ್ಥವಾಗಿಲ್ಲ ಅನಿಸುತ್ತೆ, ಎಲ್ಲದಕ್ಕೂ ವಿರೋಧಿಸೋದು ಕಾಂಗ್ರೆಸ್ ಗೆ ಅಭ್ಯಾಸವಾಗಿದೆ ವಿರೋಧಿಸಬೇಕು ಅಂತಾ ವಿರೋಧಿಸುತ್ತಾರೆ ಹೊರತು ಸಮಸ್ಯೆಗೆ ಪರಿಹಾರ ಏನು ಅಂತಾ ನೋಡಲ್ಲ ಎಂದು ಡಿಸಿಎಂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು.
ಸಿದ್ದರಾಮಯ್ಯ ಬಹಳ ದೊಡ್ಡ ಸ್ಥಾನದಲ್ಲಿ ತಮ್ಮ ಕಾರ್ಯ ನಿರ್ವಹಿಸಿದವರು, ವಿದ್ಯಾರ್ಥಿಗಳ ಭವಿಷ್ಯ, ಅವರ ಕಷ್ಟ ಸುಖಗಳನ್ನು ಅರಿತುಕೊಳ್ಳಬೇಕು ವಿದ್ಯಾರ್ಥಿಗಳು ಉತ್ತಮ ಭವಿಷ್ಯ ನಿರ್ಮಾಣ ಮಾಡಿಕೊಳ್ಳಬೇಕು,ಯಾವುದು ನಿಲ್ಲಬಾರದು ಈಗ ಎಲ್ಲಾ ವ್ಯವಸ್ಥೆಗಳು ನಡೀತಿವೆ. ಎಲ್ಲಾ ಆರ್ಥಿಕ ಚಟುವಟಿಕೆ, ವೃತ್ತಿಗಳು ನಡೆಯುತ್ತಿವೆ. ಈಗ ಯೂನಿವರ್ಸಿಟಿ, ಕಾಲೇಜುಗಳು ಆನ್‌ಲೈನ್‌ನಲ್ಲಿ ನಡೀತಿವೆ. ತುಂಬಾ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಅರ್ಥವಾಗುತ್ತಿಲ್ಲ, ಕೆಲವರಿಗೆ ಕಲಿಕೆಯಲ್ಲಿ ಸವಾಲು ಇರುತ್ತೆ, ಯಾರು ಸ್ವಇಚ್ಛೆಯಿಂದ ಬರುತ್ತಿದ್ದಾರೋ ಅವರಿಗೆ ಅವಕಾಶ ಕೊಡ್ತೀದಿವಿ, ಎಸ್‌ಓಪಿ ಪ್ರಕಾರ ಎಲ್ಲಾ ಮುಂಜಾಗ್ರತೆ ವಹಿಸಿ ಕಾಲೇಜುಗಳ ಆರಂಭ ಮಾಡ್ತಿವಿ ಎಂದು ಡಿಸಿಎಂ ಹೇಳಿದ್ರು
ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು
ಸ್ಥಿರ ಸರ್ಕಾರದ ಅವಶ್ಯಕತೆ ಬಗ್ಗೆ ಜನರ ಮನದಲ್ಲಿದೆ, ಹೀಗಾಗಿ ಜನ ಬೆಂಬಲ ನಮ್ಮ ಪರವಾಗಿದೆ.
ಹಿಂದಿನ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಯಾವ ಪರಿಸ್ಥಿತಿ ಇತ್ತು ಜನರಿಗೆ ಗೊತ್ತು, ಅಂದಿನ ಮುಖ್ಯಮಂತ್ರಿಗಳೇ ಹತಾಶರಾಗಿ ಇರುವಂತಿತ್ತು, ಅವರಿಗೆ ಸಹಕಾರ ಇರ್ತಿರಲಿಲ್ಲ, ಜನರಿಗೆ ತುಂಬಾ ಕಷ್ಟ ಆಗುತ್ತಿತ್ತು, ಜನರ ಪರ ಕೆಲಸ ಮಾಡಲಾಗ್ತಿರಲಿಲ್ಲ, ಸ್ಥಿರವಾದ ಸರ್ಕಾರ ನಮ್ಮ ರಾಜ್ಯದಲ್ಲಿದೆ, ಸ್ಥಿರ ಸರ್ಕಾರದ ಅವಶ್ಯಕತೆ ಬಗ್ಗೆ ಜನರ ಮನದಲ್ಲಿದೆ. ಉತ್ತಮ ಆಡಳಿತ ಕೊಡುತ್ತಿದ್ದು ಜನರ ಬೆಂಬಲ ನಮ್ಮ ಪರವಾಗಿದೆ. ಎರಡು ಉಪಚುನಾವಣೆ, ನಾಲ್ಕು ಪರಿಷತ್ ಸ್ಥಾನಗಳನ್ನು ಗೆಲ್ತೇವೆ. ಆರ್.ಆರ್.ನಗರದಲ್ಲಿ ಶಾಂತಿಯುತ ಎಲೆಕ್ಷನ್ ನಡೆಸಲು ಚುನಾವಣಾ ಆಯೋಗ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ.ಎಂದರು
ಡಿಕೆಶಿ ಸಿಎಂ ಆಗ್ತಾರೆ ಎಂಬ ಶಾಸಕಿ ಸೌಮ್ಯ ರೆಡ್ಡಿ ಹೇಳಿಕೆ ಕುರಿತು ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್‌ರನ್ನು ಅವರ ಪಕ್ಷದವರು ಒಪ್ಪಿಕೊಳ್ಳಲಿ.ಅವರ ಪಕ್ಷದಲ್ಲೇ ಬೇರು ಬಿಟ್ಟಿಲ್ಲ ಇನ್ನೂ ಜನರಲ್ಲಿ ಏನು ಬೇರು ಬಿಡೋದು, ಅವರ ಪಕ್ಷದಲ್ಲಿ ಡಿಕೆಶಿ ಯನ್ನು ಸ್ವೀಕರಿಸೋದು ಆಗಲಿ, ಯಾರು ಸಿಎಂ ಆಗ್ತಾರೆ ಅಂತಾ ಅವರ ಪಕ್ಷದಿಂದ ಘೋಷಿಸಲಿ ನೋಡೋಣ ಎಂದು ಕಾಂಗ್ರೆಸ್ ಗೆ ಸವಾಲ್ ಮಾಡಿದ್ರು
ಅಶ್ವತ್ಥ್ ನಾರಾಯಣ್ ಪ್ರಾಪರ್ಟಿ ಸೇಲರ್ ಎಂಬ ಡಿಕೆಶಿ ಹೇಳಿದ್ದಾರೆ. ಯಾರೂ ಯಾವ ಸೇಲರ್ ಅಂತಾ ನಾಡಿಗೆ ಗೊತ್ತಿದೆ ಅವರವರ ಮಾಡಿದ ಕರ್ಮಗಳು ಜನರಿಗೆ ತಿಳಿಯುವಂತೆ ಆಗುತ್ತಿದೆ. ಅವರು ಏನಿದ್ದಾರೆ ಜನರಿಗೆ ಬಹಳ ಚೆನ್ನಾಗಿ ಗೊತ್ತಿದೆ, ರಾಜಕೀಯಕ್ಕೆ ಬರೋದು ಸ್ವಾರ್ಥಕ್ಕಾಗಿ ಅಲ್ಲ, ನಮ್ಮ ಉದ್ಧಾರಕ್ಕಲ್ಲ,ಜನರ ನಾಯಕ ಎಂಬ ಅರ್ಥಕ್ಕೆ ಸಮನಾಗಿ ನಡೆಸುವ ಕೆಲಸ ಮಾಡಬೇಕು, ಸಾರ್ವಜನಿಕ ಜೀವನದಲ್ಲಿ ನಾವು ಸ್ಪಷ್ಟತೆಯಿಂದ ಬರಬೇಕು, ನಾನು ನನ್ನ ಮಕ್ಕಳು ದುಡ್ಡು ಮಾಡೋಣ ಎಂಬ ರಾಜಕೀಯ ವಾತಾವರಣದಲ್ಲಿ ಅವರೆಲ್ಲಾ ಬಂದಿರ್ತಾರೆ, ನಮ್ಮ ಸಮಾಜ ಇಂತವರನ್ನೆಲ್ಲಾ ಸಹಿಸಿಕೊಂಡು ಮುಂದೆ ಸಾಗುತ್ತಿದೆ, ಇದನ್ನು ಕೊನೆಗೊಳಿಸುವಂತಾಗಬೇಕು, ಈಗ ಕೊನೆಗೊಳಿಸುವ ಹಂತ ಬಂದಿದೆ ಎಂದು ಡಿಸಿಎಂ ಡಿಕೆಶಿಗೆ ಪ್ರತ್ಯುತ್ತರ ನೀಡಿದ್ರು