ಬೆಳಗಾವಿ- ಅಕ್ಟೋಬರ್ 14 ರಂದು ಎ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆ ನಡೆಯಲಿದೆ,ಇಷ್ಟು ದಿನ ಈ ಕಾರ್ಖಾನೆಯನ್ನು ಆಳಿದವರು ಜ್ವಾಲಿಯಾಗಿದ್ದರೆ, ಕಾರ್ಖಾನೆ ಮಾತ್ರ ಸಂಪೂರ್ಣವಾಗಿ ಖಾಲಿಯಾಗಿದೆ.
ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ರಾಣಿ ಶುಗರ್ಸ್ ಎಂದು ಕರೆಯುತ್ತಾರೆ,ಆದ್ರೆ ಈಗ ಸದ್ಯದ ಪರಿಸ್ಥಿತಿಯಲ್ಲಿ ಸಾಮ್ರಾಜ್ಯವಿಲ್ಲದ ರಾಣಿ,ಎಂಬಂತಾಗಿದೆ ಈ ಕಾರ್ಖಾನೆಯ ಪರಿಸ್ಥಿತಿ.
ಕಾರ್ಖಾನೆಯಲ್ಲಿ ಒಂದು ಚೀಲ ಸಕ್ಕರೆಯೂ ಇಲ್ಲ,ಆದ್ರೆ 25 ಕೋಟಿ ರೂ ರೈತರ ಕಬ್ಬಿನ ಬಿಲ್ ಬಾಕಿಇದೆ.ಈ ಕಾರ್ಖಾನೆ ಒಂದು ಕಾಲದಲ್ಲಿ ರಾಜ್ಯಮಟ್ಟದಲ್ಲಿ ಹೆಸರು ಮಾಡಿತ್ತು ಆರ್ಥಿಕವಾಗಿ ಸದೃಢ ವಾಗಿತ್ತು,ಈ ಕಾರ್ಖಾನೆಯನ್ನು ನಡೆಸುವ ಸಾಮರ್ಥ್ಯ ಮಾಜಿ ಮಂತ್ರಿ ಡಿ.ಬಿ ಇನಾಮದಾರ ಅವರಿಗೆ ಮಾತ್ರ ಇದೆ ಎಂದು ಈ ಭಾಗದ ಪ್ರತಿಯೊಬ್ಬ ರೈತನೂ ಹೇಳುತ್ತಿದ್ದ,ಆದ್ರೆಕಾರ್ಖಾನೆಯಲ್ಲಿ ಆರ್ಥಿಕ ಸಂಕಷ್ಟ ಎದುರಾದ ಸಂಧರ್ಭದಲ್ಲಿ ಡಿ.ಬಿ.ಇನಾಮದಾರ ಅವರು ಅದ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು,ಮಲಪ್ರಭಾ ಸಕ್ಕರೆ ಕಾರ್ಖಾನೆಯಿಂದ ದೂರುಳಿದರು
ಡಿ.ಬಿ ಇನಾಮದಾರ ರಾಜೀನಾಮೆ ನೀಡಿದ ಬಳಿಕ ಮಾಜಿ ಕೇಂದ್ರಸಚಿವ ಬಾಬಾಗೌಡ ಪಾಟೀಲ ಅವರ ಗುಂಪು ಕಾರ್ಖಾನೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದು ಈ ಕಾರ್ಖಾನೆಯ ಇತಿಹಾಸ
ಕಿತ್ತೂರು ಶಾಸಕ ಮಹಾಂತೇಶ ದೊಡಗೌಡ್ರು,ಡಿಸಿಸಿ ಬ್ಯಾಂಕ್ ನಿರ್ದೇಶಕ ಆಗಿದ್ದರೂ ಸಹ ತಮ್ಮದೇ ಕ್ಷೇತ್ರದ ಕಾರ್ಖಾನೆಗೆ ಬ್ಯಾಂಕಿನಿಂದ ಸಾಲ ಕೊಡಿಸಲಿಲ್ಲ,ಈ ಕಾರ್ಖಾನೆಯ ಉಸಾಬರಿ ಅವರಿಗೂ ಬೇಕಾಗಿಲ್ಲ,ಈಗ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಪರಿಸ್ಥಿತಿ ಲಗಾಮಿಲ್ಲದ ಕುದುರೆಯಂತಾಗಿದೆ.
ಕಬ್ಬಿನ ಬಿಲ್ ಸಿಗದೇ ಈ ಭಾಗದ ರೈತರು ಕಂಗಾಲಾಗಿದ್ದಾರೆ,ಪ್ರಭಾವಿಗಳಿಗೆ ಈಗ ಈ ಕಾರ್ಖಾನೆ ಬೇಡವಾಗಿದೆ ,ಅಕ್ಟೋಬರ್ 14 ರಂದು ಕಾರ್ಖಾನೆಯ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದೆ,50 ಕ್ಕೂ ಹೆಚ್ಚು ಜನ ನಾಮಪತ್ರ ಸಲ್ಲಿಸಿದ್ದಾರೆ,10 ಕ್ಕೂ ಹೆಚ್ವು ಜನ ನಾಮಪತ್ರ ವಾಪಸ್ ಪಡೆದಿದ್ದಾರೆ, ಬಾಬಾಗೌಡರ ಪುತ್ರ ಪ್ರಕಾಶಗೌಡ ಪಾಟೀಲ,ಮತ್ತು ನಾಸೀರ ಬಾಗವಾನ ಅವರ ಪ್ಯಾನೆಲ್ ಗಳ ನಡುವೆ ಸ್ಪರ್ದೆ ನಡೆಯಲಿದೆ ಎಂದು ಗೊತ್ತಾಗಿದೆ.
ಎಂ.ಕೆ ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಆರ್ಥಿಕವಾಗಿ ದಿವಾಳಿಯಾಗಿದೆ,ಹಾಳೂರಿಗೆ ಉಳಿದವನೇ ಗೌಡ ಎಂಬಂತೆ ಇಷ್ಟು ದಿನ ಈ ಕಾರ್ಖಾನೆಯಲ್ಲಿ ದರ್ಬಾರ್ ಮಾಡಿದವರು,ಈ ಚುನಾವಣೆಯಲ್ಲಿ ಭಾಗವಹಿಸುತ್ತಿಲ್ಲ.
ಕುನಿ ತೋಡಿ,ಬಿಲ್ ಕೊಡದಿದ್ದರೆ,ಮಣ್ಣು ಕೊಡಿ ಎಂದ ರೈತ……
ಬೆಳಗಾವಿ
ಮೃತದೇಹ ಹೂಳಲು ನಿರ್ಮಿಸಿದ್ದ ಸಮಾಧಿಯೊಳಗೆ ಕೂತು ರೈತನೊರ್ವ ನಾನು ಕಷ್ಟಪಟ್ಟು ದುಡಿಮೆಯ ಹಣ ಕೈಗೆ ಬರಲಿಲ್ಲ, ನನ್ನ ಇಡೀ ಕುಟುಂಬದ ಜೀವನ ನಡೆಸಲು ದುಸ್ತರವಾಗಿದೆ. ನನ್ನ ಬಳಿ ನಯಾಪೈಸೆ ಹಣವಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಿದೆ. ಅಲ್ಲದೆ ನಿತ್ಯ ಮನೆಯ ಖರ್ಚು ವೆಚ್ಚ ಸರಿದೂಗಿಸಲು ಆಗುತ್ತಿಲ್ಲ ಎಂದು ಗೋಳಾಡುತ್ತಿದ್ದ ದೃಶ್ಯ ವೈರಲ್ ಆಗಿದೆ.
ಹೌದು. ಶುಕ್ರವಾರ ನಿಧನರಾಗಿದ್ದ ವೃದ್ದೆಯೊಬ್ಬರ ಶವ ಹೂಳಲು ತೆಗೆದಿದ್ದ ಸಮಾಧಿಯಲ್ಲಿ ಕುಳಿತ ಶಿವಪ್ಪ ಬೋಗಾರ ಎಂಬ ರೈತ ಜೀವನ ಸಾಗಿಸುವುದೇ ಕಷ್ಟಕರವಾಗಿದೆ. ನಾನು ಸಾಯುವುದೊಂದೇ ಬಾಕಿ ಇದೆ. ಕಾರ್ಖಾನೆಯ ಅಧ್ಯಕ್ಷರು, ಎಲ್ಲ ನಿರ್ದೇಶಕರು ಬಂದು ಮಣ್ಣು ಕೊಡಿ ಎಂದು ಕಣ್ಣೀರು ಹಾಕಿದ್ದಾನೆ. ಇದಕ್ಕೆಲ್ಲ ಕಾರಣ ಎಂ.ಕೆ. ಹುಬ್ಬಳ್ಳಿಯ ಮಲಪ್ರಭಾ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ದಿವ್ಯ ನಿರ್ಲಕ್ಷö್ಯ ಎಂದು ರೈತ ಆರೋಪಿಸಿದ್ದಾನೆ.
ರೈತ ಶಿವಪ್ಪ ಬೆಳೆದಿದ್ದ ಸುಮಾರು ೧೧೪ ಟನ್ ಕಬ್ಬನ್ನು ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಮಾರಾಟ ಮಾಡಿದ್ದರು. ಸುಮಾರು ೮೫ ಸಾವಿರ ರು. ಕಬ್ಬಿನ ಬಿಲ್ ಬಾಕಿ ಇದ್ದು, ಕಾರ್ಖಾನೆಯವರು ಪಾವತಿ ಮಾಡದೆ ವಿಳಂಬ ಮಾಡುತ್ತಿದ್ದಾರೆ. ಸಾಕಷ್ಟು ಬಾರಿ ಕಾರ್ಖಾನೆಗೆ ಅಲೆದಾಡಿದರೂ ಬಾಕಿ ಬಿಲ್ ಪಾವತಿ ಮಾಡಿಲ್ಲ. ಇತ್ತ ಹಣ ಇಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ರೈತರ ಸಮಾಧಿಯಲ್ಲಿ ಕೂತು ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಕಾರ್ಖಾನೆಯ ನಿರ್ದೇಶಕರಾಗಿದ್ದ ಹಾಗೂ ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಅವರ ಹೆಸರನ್ನು ಪ್ರಸ್ತಾಪಿಸಿರುವ ರೈತ ನಿಮ್ಮ ಸಹವಾಸವೇ ಸಾಕಾಗಿದೆ. ಮೈ ಮೇಲಿನ ಅರಿಬೆಗಳು ಹರಿದವೆ. ಸಾಲವಾಗಿದೆ ಎಂದು ಅಳಲನ್ನು ತೋಡಿಕೊಂಡಿದ್ದಾರೆ. ಮತ್ತೊಮ್ಮೆ ಚುನಾವಣೆಯಲ್ಲಿ ಗೆದ್ದು ಬಂದು ಇದ್ದ ಕಾರ್ಖಾಣೆಯ ಜಾಗವನ್ನೂ ಮಾರಿ ಬಿಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
————————
ಕಾರ್ಖಾನೆಯಿಂದ ರೈತರಿಗೆ ಪಾವತಿಯಾಗಬೇಕಿರುವ ಬಾಕಿ ಬಿಲ್ ನೀಡಲು ಈಗಾಗಲೇ ಹಣಕಾಸು ಸಂಸ್ಥೆಗಳಿಗೆ ಮನವಿ ಸಲ್ಲಿಸಿದ್ದೇವೆ. ನಾನು ಕೂಡ ಕೆಲ ದಿನಗಳ ಹಿಂದೆ ವ್ಯವಸ್ಥಾಪಕ ನಿರ್ದೇಶಕನಾಗಿ ಬಂದಿದ್ದೇನೆ. ರೈತರ ಕಷ್ಟ ನನಗೆ ತಿಳಿಯುತ್ತದೆ. ಆದಷ್ಟು ಬೇಗ ಬಿಲ್ ಪಾವತಿಸಲಾಗುವುದು.
-ಶಿವಾ ಕುಲಕರ್ಣಿ, ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪ ನಿರ್ದೇಶಕ