ಬೆಳಗಾವಿ – ಕಬ್ಬಿನ ಬಿಲ್ ಪಾವತಿ ಮತ್ತು ಶಿಸ್ತಿನ ಆಡಳಿತಕ್ಕೆ ಪ್ರಸಿದ್ದಿ ಪಡೆದಿದ್ದ ಎಂ ಕೆ ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಈಗ ಹಳ್ಳ ಹಿಡಿದಿದೆ
ಕಳೆದ ವರ್ಷ ಕಾರ್ಖಾನೆಗೆ ಪೂರೈಸಿದ ಕಬ್ಬಿನ ಬಿಲ್ ಸಂಪೂರ್ಣವಾಗಿ ಪಾವತಿ ಆಗಿಲ್ಲ ಕಳೆದ ಎಂಟು ತಿಂಗಳಿನಿಂದ ಕಾರ್ಮಿಕರಿಗೆ ವೇತನ ಸಿಕ್ಕಿಲ್ಲ ,ಹೀಗಾಗಿ ರೈತರು ಕಾರ್ಖಾನೆಗೆ ಮುತ್ತಿಗೆ ಹಾಕಿ ಕಬ್ಬಿನ ಬಿಲ್ ಪಾವತಿ ಮಾಡುವಂತೆ ಒತ್ತಾಯಿಸಿದ್ದಾರೆ
ಮಾಜಿ ಸಚಿವ ಡಿಬಿ ಇನಾಮದಾರ ಕಳೆದ ವರ್ಷ ಕಬ್ಬು ನುರಿಸುವ ಹಂಗಾಮು ಆರಂಭವಾಗುವ ಮೊದಲೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ. ಕಾರ್ಖಾನೆಯ ನಿರ್ದೇಶಕರು ಸೇರಿಕೊಂಡು ಕಾರ್ಖಾನೆಯನ್ನು ಮುನ್ನಡೆಸಿದ್ದರು
ಕಳೆದ ವರ್ಷ ಪೂರೈಕೆಯಾದ ಕಬ್ಬಿನ ಬಿಲ್ ಕೆಲವು ರೈತರಿಗೆ ಪಾವತಿ ಮಾಡಿರುವ ಆಡಳಿತ ಮಂಡಳಿ ಇನ್ನು ಕೆಲವು ರೈತರ ಬಿಲ್ ಬಾಕಿ ಉಳಿಸಿಕೊಂಡಿದೆ ಇದನ್ನು ಖಂಡಿಸಿ ಇಂದು ರೈತರು ಆಡಳಿತ ಮಂಡಳಿಯ ವಿರುದ್ಧ ಪ್ರತಿಭಟಿಸಿದರು
ರಾಣಿ ಶುಗರ್ಸ ಕಿತ್ತೂರ ಕ್ಷೇತ್ರದ ಹೆಮ್ಮೆ ಈ ಕಾರ್ಖಾನೆ ಇಂದು ಸುಧಾರಣೆ ಆಗಬಹುದು ನಾಳೆ ಸುಧಾರಿಸಬಹುದು ಎಂದು ನಂಬಿದ್ದೇವು ಆದ್ರೆ ರೈತರು ಎಷ್ಡು ದಿನ ಕಾಯೋದು ಕಬ್ಬಿನ ಬಿಲ್ ಕೂಡಾ ಇಲ್ಲ ಕಾರ್ಮಿಕರ ವೇತನವೂ ಇಲ್ಲ ಅಂದ್ರೆ ಹೇಗೆ ಎಂದು ರೈತ ನಾಯಕರು ಆಡಳಿತ ಮಂಡಳಿಯ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು
ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ಆರಂಭಗೊಳ್ಳುವ ಮುನ್ನ ರೈತರ ಬಾಕಿ ಬಿಲ್ ಪಾವತಿ ಆದ್ರೆ ಮಾತ್ರ ರೈತರಿಗೆ ಕಾರ್ಖಾನೆಯ ಆಡಳಿತ ಮಂಡಳಿಯ ಮೇಲೆ ವಿಶ್ವಾಸ ಬರಲು ಸಾಧ್ಯ ಎಂದು ರೈತ ನಾಯಕರು ಎಚ್ಚರಿಕೆ ನೀಡಿದರು