Breaking News

ಮಲಪ್ರಭಾ ಸಕ್ಕರೆ ಕಾರ್ಖಾನೆ ಚುನಾವಣೆ 37 ಅಭ್ಯರ್ಥಿಗಳು ಕಣದಲ್ಲಿ

ಬೆಳಗಾವಿ : ಕೋವೀಡ್ ನಿಯಮಾವಳಿಗಳು ಜಾರಿಯಲ್ಲಿರುವಾಗ ನಿಯಮಾವಳಿಗಳ ಪ್ರಕಾರ ಮಲ್ಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಗದ್ದುಗೆ ಇಂದು ಬಿರುಸಿನಿಂದ ಮತದಾನ ನಡೆಯುತ್ತಿದೆ.

ಕಿತ್ತೂರು ಕ್ಷೇತ್ರದ ಜೀವನಾಡಿಯಾಗಿದ್ದ ಈ ಕಾರ್ಖಾನೆ ಆರ್ಥಿಕವಾಗಿ ದಿವಾಳಿಯಾಗಿದೆ,ಇಷ್ಟು ದಿನ ಈ ಕಾರ್ಖಾನೆಯಲ್ಲಿ ದರ್ಬಾರ್ ಮಾಡಿದ ಘಟಾನುಘಟಿ ನಾಯಕರು ಚುನಾವಣೆಯಿಂದ ದೂರ ಉಳಿದಿದ್ದು,ಖಾನಾಪೂರ ಕ್ಷೇತ್ರದ ಜೆಡಿಎಸ್ ಧುರೀಣ ನಾಸೀರ ಬಾಗವಾನ್,ಮತ್ತು ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲರ ಪುತ್ರ ಪ್ರಕಾಶ್ ಗೌಡ ಪಾಟೀಲ ನೇತ್ರತ್ವದ ಪೆನೆಲ್ ಗಳು ಸೆಣಸಾಟ ನಡೆಸಿದ್ದು 37ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಜಿಲ್ಲೆಯ ಕಿತ್ತೂರು ತಾಲೂಕಿನ ವ್ತಾಪ್ತಿಗೆ ಒಳಪಟ್ಟಿರುವ ಎಂ.ಕೆ.ಹುಬ್ಬಳ್ಳಿಯಲ್ಲಿರುವ ಮಲ್ಲಪ್ರಭಾ ಸಹಕಾರಿ‌ ಸಕ್ಕರೆ ಕಾರ್ಖಾನೆಗೆ ಐದು ವರ್ಷಗಳ ಅವಧಿಗೆ ನಡೆಯುತ್ತಿರುವ ಪ್ರಸ್ತಕ ಸಾಲಿನ ಚುನಾವಣೆಯಲ್ಲಿ ಎರಡು ಬಣಗಳ ನಡುವೆ ತೀವ್ರ ಹಣಾಹಣಿ ನಡೆಯುತ್ತಿದೆ. ಮಲ್ಲಪ್ರಭಾ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಕಣದಲ್ಲಿ ಉದ್ಯಮಿ ನಾಸೀರ ಬಾಗವಾನ್ ಹಾಗೂ ಮಾಜಿ ಕೇಂದ್ರ ಸಚಿವ ಬಾಬಾಗೌಡರ ಪುತ್ರ ಪ್ರಕಾಶಗೌಡ ಪಾಟೀಲ ನೇತೃತ್ವದಲ್ಲಿ ನಡೆಯುತ್ತಿರುವ ಎರಡು ಪೆನಲ್ ಗಳಲ್ಲಿ ರೈತರು ಮತ್ತು ಯುವ ಅಭ್ಯರ್ಥಿಗಳ ಕಣದಲ್ಲಿದ್ದು,ಸಂಜೆ 4ರವರೆಗೆ ಮತದಾನ ನಡೆಯಲಿದೆ.

ಮತದಾನ ಮುಗಿದ ತಕ್ಷಣ ಎರಡು ಘಂಟೆಗಳ ಕಾಲ‌ ಮತ ಏಣಿಕೆ ನಡೆಯಲಿದ್ದು ವಿಜೇತ ಅಭ್ಯರ್ಥಿಗಳನ್ನು ಚುನಾವಣಾ ಅಧಿಕಾರಿಗಳು ಘೋಷಣೆ ಮಾಡಲಿದ್ದಾರೆ. ಆದ್ರೆ, ರೈತರ ಕಬ್ಬಿನ ಬಾಕಿ ಬಿಲ್ ನೀಡದೇ ಚುನಾವಣೆ ಎದುರಿಸುತ್ತಿರೊದ್ರಿಂದ ರೈತರ ಆಕ್ರೋಶಕ್ಕೂ ಈ ಚುನಾವಣೆ ಕಾರಣವಾಗಿದೆ.

ಕಾರ್ಖಾನೆಯಲ್ಲಿ ಹದಿನಾರು ಸಾವಿರಕ್ಕೂ ಹೆಚ್ಚು ಜನ ಸದಸ್ಯರಿದ್ದಾರೆ,ಸಹಕಾರಿ ಕ್ಷೇತ್ರದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 16 ಸಾವಿರ ಮತಗಳಲ್ಲಿ ಕೇವಲ 16 ನೂರು ಮತಗಳು ಮಾನ್ಯವಾಗಿದ್ದು 14 ಸಾವಿರಕ್ಕೂ ಹೆಚ್ಚು ಸದಸ್ಯರ ಮತದಾನದ ಹಕ್ಕುನ್ನು ಕಳೆದುಕೊಂಡಿದ್ದಾರೆ.

ಮಾಜಿ ಸಚಿವ ಡಿ.ಬಿ ಇನಾಮದಾರ,ಬಾಬಾಗೌಡ ಪಾಟೀಲ ಅವರು ಕಾರ್ಖಾನೆಯ ಸದಸ್ಯರಾಗಿದ್ದರು ಸಹಕಾರಿ ಕ್ಷೇತ್ರದ ನಿಯಮಾವಳಿಗಳನ್ನು ಪಾಲಿಸಿಲ್ಲ ಅಂತಾ ಅವರ ಮತದಾನದ ಹಕ್ಕು ಅಮಾನ್ಯಗೊಂಡಿದೆ.

ಸಂಜೆ ಫಲಿತಾಂಶ ಹೊರಬೀಳಲಿದೆ ಫಲಿತಾಂಶದ ಬಳಿಕ,ಮತದಾನದ ಹಕ್ಕನ್ನು ಕಳೆದುಕೊಂಡಿರುವ ಸದಸ್ಯರು ಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ತರುವ ಸಾಧ್ಯತೆ ಇದೆ.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *