ಬೆಳಗಾವಿ-ಬೆಳಗಾವಿ ನಗರದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆದಿದ್ದು ಬೆಳಗಾವಿಯ ಭ್ರಷ್ಟ ಅಧಿಕಾರಿಗಳು ಇವತ್ತು ಬೆಳ್ಳಂ ಬೆಳಗ್ಗೆ ಬೆಚ್ಚಿಬಿದ್ದಿದ್ದಾರೆ.
ಬೆಳಗಾವಿ ನಗರದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಳಗಾವಿಯ ರಾಮತೀರ್ಥ ನಗರದಲ್ಲಿರುವ ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಶೇಖರ್ ಬಹುರೂಪಿ ಮನೆ ಮೇಲೆ ದಾಳಿ ಮಾಡಲಾಗಿದೆ. ಸದ್ಯ ಶೇಖರ್ ಬಹುರೂಪಿ ವಿಜಯನಗರ ಜಿಲ್ಲೆ ಹರಪನಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ
ಹೆಸರಿಗೆ ತಕ್ಕಂತೆ ದಾಳಿಗೆ ತುತ್ತಾದ ಇಂಜಿನಿಯರ್
ಶೇಖರ್ ಬಹುರೂಪಿಯಾಗಿದ್ದಾರೆ, ಅವರು 2019ರಲ್ಲಿ ಅಥಣಿಯಲ್ಲಿ ಕಾರ್ಯನಿರ್ವಹಿಸುವಾಗ ಪ್ರವಾಹದ ಸಂದರ್ಭದಲ್ಲಿ ನಡೆದ ಅವ್ಯವಹಾರ ಸಂಬಂಧ ಅಮಾನತುಗೊಂಡಿದ್ದರು.ಅಧಿಕಾರಿಗಳು ದಾಳಿ ನಡೆಸಿ ಪರಶೀಲನೆ ಮುಂದುವರೆಸಿದ್ದು ಆಕ್ರಮ ಆಸ್ತಿ,ಹಣವನ್ನು ಪತ್ತೆ ಮಾಡುವ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಅಥಣಿಯ ಸಂಕೋನಟ್ಟಿಯ ಮನೆಯ ಮೇಲೂ ದಾಳಿ.
ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ಇರುವ KEB ಇಂಜಿನಿಯರ್ ಶೇಖರ ಬಹುರೂಪಿ ರವರ ಮನೆಯ ಮೇಲೂ ಲೋಕಾಯುಕ್ತ ದಾಳಿ ನಡೆದು ಅಲ್ಲಿಯೂ ಪರಶೀಲನೆ ಮಾಡಲಾಗುತ್ತಿದೆ.
ಲೋಕಾಯುಕ್ತ CPI ರವಿಕುಮಾರ್ ಧರ್ಮಟ್ಟಿ ಹಾಗೂ ಬಸವರಾಜ ಮತ್ತಿಕೋಪ್ಪ CPI ರವರ ನೇತೃತ್ವದ ತಂಡವು ಸದರಿ ಇಂಜಿನಿಯರ್ ಮನೆಯನ್ನು ಪರಿಶೀಲನೆ ಮಾಡುತ್ತಿದ್ದಾರೆ .