ಬೆಳಗಾವಿ- ಬೆಳಗಾವಿಯಲ್ಲಿ ಕ್ರಿಪ್ಟೋಕರೆನ್ಸಿ ವ್ಯವಹಾರ ನಡೆಸುತ್ತಿದ್ದ ಉದ್ಯಮಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ,ಬೆಳಗಾವಿ ಪೋಲೀಸರು, ಮೂವರು ಪ್ರಮುಖ ಆರೋಪಿಗಳ ಬಂಧಿಸಿದ್ದಾರೆ.
ಮತ್ತೋರ್ವ ಪ್ರಮುಖ ಆರೋಪಿ ಯೂನೂಸ್ ಖಾಜಿ ಎಂಬಾತ ತಲೆ ಮರಿಸಿಕೊಂಡಿದ್ದು ಆತನ ಪತ್ತೆಗೆ ಪೋಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ತಲೆಮರಿಸಿಕೊಂಡಿದ್ದ ಮೂವರು ಆರೋಪಿಗಳು ಪೋಲೀಸರ ಬಲೆಗೆ ಬಿದ್ದಿದ್ದಾರೆ. ಈಪ್ರಕರಣದಲ್ಲಿ ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಸಾಂಗಲಿಯ ಶಹನವಾಜ್ ಚಮನಶೇಖ್, ಅಜ್ಜು ಚಮನಶೇಖ್, ಅಭಿಷೇಕ ಶೆಟ್ಟಿ ಎಂಬಾತರನ್ನು ಮಹಾರಾಷ್ಟ್ರದ ಪೂನಾದಲ್ಲಿ ಬಂಧಿಸಲಾಗಿದೆ.ಬಿಟ್‌ಕಾಯಿನ್ ವ್ಯವಹಾರದಲ್ಲಿ ವಂಚನೆ ಹಿನ್ನೆಲೆಯಲ್ಲಿ ಅಪಹರಣ ನಡೆದಿತ್ತು
ಕಿಡ್ನಾಪ್ ಆಗಿದ್ದ ಉದ್ಯಮಿ ರವಿಕಿರಣ್ ಭಟ್ ವಂಚನೆ ನಡೆಸಿರುವ ಬಗ್ಗೆ ಖಾಸಗಿ ಬ್ಯಾಂಕ್ ಮಾಜಿ ಉದ್ಯೋಗಿ ಆರೋಪಿಸಿದ ಹಿನ್ನಲೆಯಲ್ಲಿ ಈ ಕೇಸ್ ಟ್ವಿಸ್ಟ್ ಪಡೆದಿತ್ತು.
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ ಕರಮಾಳಾದ ಖಾಸಗಿ ಬ್ಯಾಂಕ್‌ನ ಮಾಜಿ ಮ್ಯಾನೇಜರ್ ರಾಹುಲ್ ಮುಂಡೆ ಎಂಬಾತ ಕಿಡ್ನ್ಯಾಪ್ ಆಗಿದ್ದ ರವಿಕಿರಣ ಭಟ್ ವಿರುದ್ಧ ಆರೋಪ ಮಾಡಿದ್ದರು.
ಎರಡು ಕೋಟಿ ರೂ. ಪಡೆದು ವಂಚನೆ ಮಾಡಿದ ಆರೋಪದ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಲಾಗಿತ್ತು.
ಬಿಟ್‌ಕಾಯಿನ್ ನಲ್ಲಿ ಹೂಡಿಕೆ ಮಾಡಿ ಹಣ ಡಬಲ್ ಮಾಡಿಕೊಡ್ತೀನಿ ಅಂತಾ ರವಿಕಿರಣ್ ಭಟ್ ವಂಚಿಸಿದ್ದಾನೆಂದು ಆರೋಪ ಮಾಡಲಾಗಿತ್ತು. ರವಿಕಿರಣ್ ಭಟ್ ವಿರುದ್ಧ ಆರೋಪ ಮಾಡಿದ್ದ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಕರಮಾಳಾ ಬಂಧನ್ ಬ್ಯಾಂಕ್ ಮಾಜಿ ಉದ್ಯೋಗಿ ರಾಹುಲ್ ಮುಂಡೆ.
ಕಿಡ್ನಾಪ್ ಪ್ರಕರಣದ ಪ್ರಮುಖ ಆರೋಪಿ ಶಹನವಾಜ್ ಹಾಗೂ ಉದ್ಯಮಿ ರವಿಕಿರಣ್ ಇಬ್ಬರೂ ಪರಿಚಯಸ್ಥರು, ಮತ್ತೋರ್ವ ಆರೋಪಿ ಅಜ್ಜು ಹಾಗೂ ರವಿಕಿರಣ್ ವಿರುದ್ಧ ಆರೋಪ ಮಾಡಿದ್ದ ಬಂಧನ್ ಬ್ಯಾಂಕ್‌ನ ಮಾಜಿ ಉದ್ಯೋಗಿ ರಾಹುಲ್ ಮುಂಡೆ ಸಹ ಪರಿಚಯಸ್ಥರು,ಹೀಗಾಗಿ ಬಿಟ್‌ಕಾಯಿನ್ ನಲ್ಲಿ ಹಣ ಹೂಡಿಕೆ ಮಾಡಿ ಲಾಭ ಮಾಡಿ ಕೊಡುವುದಾಗಿ ವಂಚನೆ ಮಾಡಿದ ಹಿನ್ನೆಲೆ ಅಪಹರಣ ಮಾಡಿರುವ ಶಂಕೆ ವ್ಯೆಕ್ತವಾಗಿತ್ತು. ಈ
ಪ್ರಕರಣದ ತನಿಖೆ ಮುಂದುವರಿಸಿರುವ ಪೊಲೀಸರು ಅಪಹರಣ ಪ್ರಕರಣದ ಪ್ರಮುಖ ಆರೋಪಿ ಯುನೂಸ್ ಖಾಜಿ ಪತ್ತೆಗೆ ಶೋಧ ಕಾರ್ಯಾಚರಣೆ ನಡೆದಿದೆ.