ಬೆಳಗಾವಿ-ಹಿರೇಬಾಗೇವಾಡಿಃ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಸ್ಥಳೀಯ ಗುಡ್ಡದ ಮಲ್ಲಪ್ಪನ ಬೆಟ್ಟದ ಸರ್ಕಾರಿ ಜಮೀನನ್ನು ವಿ.ವಿಗೆ ಹಸ್ತಾಂತರಿಸುವ ಸರ್ಕಾರದ ನಿರ್ಧಾರವನ್ನು ಇಲ್ಲಿನ ನಾಗರೀಕರು ಸ್ವಾಗತಿಸಿದ್ದಾರೆ. ಈ ಸಂಬಂಧವಾಗಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿದ ನಿಯೋಗವು ಈ ಮಹಾ ಕಾರ್ಯಕ್ಕೆ ಕೈಜೊಡಿಸಿದ ಜಿಲ್ಲೆಯ ಎಲ್ಲ ಶಾಸಕರು, ಸಚಿವರು ಮತ್ತು ಕೇಂದ್ರಸಚಿವರೂ ಸೇರಿದಂತೆ ಸಹಕಾರ ನೀಡಿದ ಎಲ್ಲರನ್ನು ಸ್ಮರಿಸಿ ಕೃತ್ಞಜತೆಯನ್ನು ಸಲ್ಲಿಸಿದ್ದರು.
ಹಿರೇಬಾಗೇವಾಡಿ ವಯಲದ ಸುತ್ತಮುತ್ತಲಿನ ಗ್ರಾಮಸ್ಥರ ಪರವಾಗಿ ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಸತ್ಕರಿಸಿ, ಗೌರವ ಸೂಚಿಸಿದರು. ಇದೇ ಸಂದರ್ಭದಲ್ಲಿ ಬೆಳಗಾವಿಗೆ ಸ್ವತಂತ್ರ ವಿಶ್ವ ವಿದ್ಯಾಲಯಕ್ಕಾಗಿ ನಡೆದ ದಶಕದ ಹೋರಾಟಗಳ ಕೆಲ ದಾಖಲಾತಿಗಳ ಕಿರು ಹೊತ್ತಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಬಿಡುಗಡೆಗೂಳಿಸಿ ಸಂತಸ ವ್ಯಕ್ತಪಡಿಸಿದರು.
ಈ ಸಂಭಂಧವಾಗಿ ತಮ್ಮ ಕೃತ್ಞಜತೆಯನ್ನು ಸಲ್ಲಿಸಿ ಮಾತನಾಡಿದ ರಾ.ಚ.ವಿ.ವಿ ಹೋರಾಟ ಸಮಿತಿಯ ಸಂಚಾಲಕ ಮಂಜುನಾಥ ವಸ್ತ್ರದ ಧಾರವಾಡದ ಕರ್ನಾಟಕ ವಿವಿ ಆಧೀನದಲ್ಲಿದ್ದ ಬೆಳಗಾವಿಯ ಸ್ನಾತಕೋತ್ತರ ಕೇಂದ್ರವನ್ನು ಸ್ವತಂತ್ರ ವಿ.ವಿ ಯನ್ನಾಗಿಸಬೇಂಕೆಂಬ ಬೇಡಿಕೆಯ ಸುಧೀರ್ಘವಾದ ಹೋರಾಟವನ್ನು ವಿವರಿಸಿದರು. ದಶಕದ ಕಾಲ ನಡೆದ ವಿವಿಧ ಹಂತಗಳಲ್ಲಿನ ಹೋರಾಟಕ್ಕೆ ಕೊನೆಗೂ ಜಯ ಲಭಿಸುವ ಮೂಲಕ ಬೆಳಗಾವಿಗೆ ಸ್ವತಂತ್ರ ವಿವಿಯಾಗಿದೆ. ಈ ಇತಿಹಾಸವನ್ನು ತಿಳಿಸುವ ನಿಟ್ಟಿನಲ್ಲಿ ಆರಂಭಿಕ ಪ್ರಯೋಗವಾಗಿ “ಹೋರಾಟದ ಹಜ್ಜೆ ” ಎಂಬ ದಾಖಲಾತಿಯ ಕಿರು ಹೊತ್ತಿಗೆಯನ್ನು ಪರಿಚಯಿಸುವ ಮೊದಲ ಪ್ರಯತ್ನವು ಇದಾಗಿದೆ. ಈ ಕಿರುಪುಸ್ತಕವನ್ನು ಬಿಡಗಡೆಗೂಳಿಸಿ ಶುಭಕೋರಿದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಅವರು ಕೃತ್ಞಜತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಶಂಕರಗೌಡ ಪಾಟೀಲ, ರೈತ ಮುಖಂಡ ಬಿ.ಎಸ್. ಗಾಣಿಗಿ, ಗ್ರಾ.ಪಂ ಮಾಜಿ ಅಧ್ಯಕ್ಷ ಉಳವಪ್ಪ ನಂದಿ, ಬಾಬು ನಾವಲಗಟ್ಟಿ, ಎನ್.ಎಸ್, ಪಾಟೀಲ, ಆಶೀಫ್, ಬಸನು ನಾಯ್ಕರ, ಯಲಗೌಡ ಪಾಟೀಲ, ಗಂಗಪ್ಪ ಇಟಗಿ, ಪ್ರಭು ಬೂದ್ಯನವರಮಠ, ಯಕೂಬ ದೇವಲಾಪೂರ, ಅನ್ವರ ದೇವಡಿ, ಸಂಜಯ ದೇಸಾಯಿ, ರಾಜು ರೊಟ್ಟಿ, ಚಂದ್ರು ಕಪರಿ, ಮಹಾಂತೇಶ ಕಂಬಿ, ಪ್ರಮೀಣ ಈಳಗೇರ, ವಿಜಯ ಗಾಣಿಗಿ, ಪರವೇದ ದೇವಲಾಪೂರ, ಬಸವರಾಜ ಮಠಪತಿ, ಆನಂದ ನಂದಿ, ಯಲ್ಲಪ್ಪ ಕೊಂಡಗೂರಿ, ಸೇರಿದಂತೆ ಮುತಾಂದವರು ಉಪಸ್ಥಿತರಿದ್ದರು.
ಪೋಟೋ ಶಿರ್ಷಿಕೆ
ಹಿರೇಬಾಗೇವಾಡಿಃ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ“ಹೋರಾಟದ ಹೆಜ್ಜೆ” ಕಿರು ಪುಸ್ತಕವನ್ನು ಬಿಡುಗಡೆಗೊಳಿಸಿದರು.