ಬೆಳಗಾವಿ- ನದಿಗಳು ಉಕ್ಕಿ ಹರಿಯುತ್ತಿವೆ.ನದಿ ತೀರದ ಗದ್ದೆಗಳು ಸಮುದ್ರದ ಸ್ವರೂಪ ಪಡೆದುಕೊಂಡಿವೆ.ಇಂತಹ ಪರಿಸ್ಥಿತಿಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು, ನೀರಿನಲ್ಲಿ ಧುಮುಕಿ ಜಲಾವ್ರತಗೊಂಡಿದ್ದ ಟಿಸಿ ಏರಿ ಕರೆಂಟ್ ಕಟ್ ಮಾಡಿ ದೊಡ್ಡ ಅನಾಹುತ ತಪ್ಪಿಸಿ,ಕರ್ತವ್ಯದಲ್ಲೂ ಜನಪರ ಕಾಳಜಿ ತೋರಿಸಿದ ಆ ಪಾವರ್ ಮ್ಯಾನ್ ನಿಜವಾಗಲೂ ರಿಯಲ್ ಹಿರೋ….
ಮಹಾರಾಷ್ಟ್ರದಲ್ಲಿ ಮಳೆ ಅಬ್ಬರ ಹೆಚ್ಚಾಗಿದೆ.ಸಮುದ್ರಗಳಂತಾದ ಚಿಕ್ಕೋಡಿ ಉಪವಿಭಾಗದ ನದಿಗಳು ಅಪಾಯದ ಮಟ್ಟ ಮೀರಿ ಪಕ್ಕದ ಹೊಲಗದ್ದೆಗಳನ್ನು ಆಕ್ರಮಿಸಿಕೊಂಡಿವೆ.ಪ್ರವಾಹ ಸಮಯದಲ್ಲಿ ಕರ್ತವ್ಯ ನಿಷ್ಠೆ ಮೆರೆದ ಹೆಸ್ಕಾಂ ಸಿಬ್ಬಂದಿಯ ಕಾರ್ಯ ನಿಜವಾಗಿಯೂ ಪ್ರಶಂಸೆಗೆ,ಅರ್ಹವಾಗಿದೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜೂಗುಳ ಗ್ರಾಮದ ನದಿ ತೀರದ ಹೊಲದಲ್ಲಿ,ನೀರಿನಲ್ಲಿ ಧುಮುಕಿ ವಿದ್ಯುತ್ ಸಂಪರ್ಕ ಕಡಿತ ಮಾಡಿ ಹೆಸ್ಕಾಂ ಸಿಬ್ಬಂಧಿ ಅನಾಹುತ ತಪ್ಪಿಸಿದ್ದಾನೆ. ಜೂಗುಳ ಗ್ರಾಮದಲ್ಲಿ ವಿದ್ಯುತ್ ಟಿಸಿ ಕೆಳಗಡೆ ನೀರು ಇತ್ತು,ನೀರಿನಿಂದ ವಿದ್ಯುತ್ ಟಿಸಿ ಹಾಳಾಗಿ ಶಾರ್ಟ್ ಆಗುವ ಭೀತಿ ಎದುರಾಗಿತ್ತು.ಗದ್ದೆಗಳ ಪಂಪಸೆಟ್ ಗಳಿಗೆ ಅಳವಡಿಸಿದ್ದ ವಿದ್ಯುತ್ ಟಿಸಿ ನೀರಿನಲ್ಲಿ ಮುಳುಗಿ,ವಿದ್ಯುತ್ ಟ. ಸಿ ಶಾರ್ಟ್ ಆದರೆ ಗ್ರಾಮಕ್ಕೆ ವಿದ್ಯುತ್ ಸಮಸ್ಯೆ ಎದುರಾಗುತ್ತಿತ್ತು,ಸಮಸ್ಯೆಯನ್ನ ಅರಿತು ಸಿಬ್ಬಂದಿಯಿಂದ ತಾತ್ಕಾಲಿಕ ವಿದ್ಯುತ್ ಕಟ್ ಆದ ಪರಿಣಾಮ ಅನಾಹುತ ತಪ್ಪಿದೆ, ಈ ಟಿಸಿ ಶಾರ್ಟ್ ಸರ್ಕ್ಯುಟ್ ಆದ್ರೆ ಕರೆಂಟ್ ನೀರಿನಲ್ಲಿ ಹರಡುವ ಆತಂಕವೂ ಇತ್ತು,ನೀರಿನಲ್ಲಿ ಈಜಿ ತಾತ್ಕಾಲಿಕ ವಿದ್ಯುತ್ ಕಟ್ ಮಾಡಿ ಅನಾಹುತ ಸರಿಪಡಿಸಿದ ಸರಿಪಡಿಸಿದ ಸಿಬ್ಬಂದಿಯ ಸಹಾಸಕ್ಕೆ ಸಲಾಂ
ಹೆಸ್ಕಾಂ ಸಿಬ್ಬಂದಿಯ ಕಾಳಜಿ ತೋರಿಸಿದ,ನೀರಿನಲ್ಲಿ ಧುಮುಕಿ ಟಿಸಿ ಏರಿ ಕರೆಂಟ್ ಕಟ್ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಆನಂದ ಹೆರವಾಡಿ ಹೆಸ್ಕಾಂ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.