ಬೆಳಗಾವಿ: ರೈತರ ತೀವ್ರ ವಿರೋಧದಿಂದ ನನೆಗುದಿಗೆ ಬಿದ್ದಿದ್ದ ರಿಂಗ್ ರಸ್ತೆಗೆ ಭೂಸ್ವಾಧೀನಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗೆಜೆಟ್‌ನಲ್ಲಿ ಪ್ರಕಟಿಸಿದ್ದು, ಯೋಜನೆಯ ೦.೦೦ ಕಿಮೀಯಿಂದ ೬೯.೦೦೦ ಕಿಮೀವರೆಗೆ ಜಮೀನು, ಕಟ್ಟಡ ಹಾಗೂ ಇತರ ಸ್ವತ್ತುಗಳನ್ನು ಪ್ರಕಟಿಸಿದ್ದು, ಜಮೀನು ಮಾಲೀಕರು ಮತ್ತು ಇತರ ಸ್ವತ್ತುಗಳ ಮಾಲೀಕರು ಈ ಪ್ರಕಟಣೆಯ ದಿನಾಂಕದಿಂದ ೨೧ ದಿನಗಳೊಳಗೆ ಖುದ್ದಾಗಿ ಅಥವಾ ಕಾನೂನು ತಜ್ಞರ ಮೂಲಕ ವಿಶೇಷ ಭೂಸ್ವಾಧೀನ ಅಧಿಕಾರಿ ಕಚೇರಿಗೆ ಭೇಟಿ ನೀಡಲು ಸೂಚಿಸಲಾಗಿದೆ.
ಅಧಿಸೂಚನೆಯನ್ನು ೨೮-೦೬-೨೦೨೩ ದಿನಾಂಕದ S.ಔ ೨೮೦೭ (ಇ) ಅಡಿಯಲ್ಲಿ ಭಾರತದ ಎಕ್ಸ್ಟ್ರಾ ಆರ್ಡಿನರಿ (ಭಾಗ-Iಟ ಸೆಕ್ಷನ್-೩ ಉಪ-ವಿಭಾಗ (i) ಗೆಜೆಟ್‌ನಲ್ಲಿ ಪ್ರಕಟಿಸಲಾಗಿದ್ದು, ರಾಷ್ಟ್ರೀಯ ಹೆದ್ದಾರಿಗಳ ರಿಂಗ್ ರಸ್ತೆ, ಬೆಳಗಾವಿ, ಎಸ್‌ಬಿಐ ಬ್ಯಾಂಕ್ ಹಿಂದೆ, ಶಿವಂ ರೆಸಿಡೆನ್ಸಿ ಎದುರು, ಶಾರದಾ ಎನ್‌ಕ್ಲೇವ್ , Iಟ ಮಹಡಿ, ಪ್ಲಾಟ್ ಸಂಖ್ಯೆ. ೨೫೫, ಅಖಿS ಸಂಖ್ಯೆ ೯೨೧೬, ಶಿವಬಸವ ನಗರ, ಬೆಳಗಾವಿ ಇಲ್ಲಿಗೆ ಸಂಪರ್ಕಿಸಲು ಸೂಚಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಕಾಯಿದೆ ಅಡಿಯಲ್ಲಿ ಜಮೀನು ಮಾಲೀಕರು ಮತ್ತು ಇತರ ಆಸ್ತಿಗಳ ಮಾಲೀಕರಿಗೆ ಸಾರ್ವಜನಿಕ ಜಾಹೀರ ಪ್ರಕಟಣೆ ನೀಡಲಾಗುತ್ತದೆ. ಯೋಜನೆ ಯಡಿ ಜಮೀನು, ಸ್ವತ್ತು ಕಳೆದುಕೊಳ್ಳುವ ಮಾಲೀಕರು ಅಗತ್ಯ ದಾಖಲೆಗಳೊಂದಿಗೆ ಹಾಗೂ ನಿರೀಕ್ಷಿತ ಪರಿಹಾರ ಕುರಿತಂತೆ ಅರ್ಜಿ ಸಲ್ಲಿಸಬೇಕಿದೆ. ಒಂದು ವೇಳೆ ನಿಗದಿಪಡಿಸಿದ ದಿನಾಂಕದೊಳಗೆ ಕಚೇರಿಗೆ ಸಂಪರ್ಕಿಸದಿದ್ದರೆ ಸರ್ಕಾರ ನಿಗದಿಪಡಿಸಿದ ಪರಿಹಾರ ನೀಡಲಾಗುತ್ತದೆ. ಎಂದು ತಿಳಿಸಲಾಗಿದೆ.
ಯೋಜನೆ ವ್ಯಾಪ್ತಿಯಲ್ಲಿ ಬರುವ ಜಮೀನುಗಳಲ್ಲಿ ಯಾವುದೇ ಬೆಳೆ ಬೆಳೆಯಬಾರದು ಒಂದು ವೇಳೆ ಬೆಳೆ ಬೆಳೆದರೂ ಪರಿಹಾರ ಸಿಗುವುದಿಲ್ಲ ಎಂದು ತಿಳಿಸಲಾಗಿದೆ.
ಈ ಹಿಂದೆಯೇ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗಿತ್ತು. ಆದರೆ, ಈ ಭಾಗಗಳ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಆಗಿನ ಕೇಂದ್ರ ಸಚಿವ ಸುರೇಶ ಅಂಗಡಿ ಅವರು ರೈತರೊಂದಿಗೆ ಮಾತುಕತೆ ನಡೆಸಿದ್ದರು ಚುನಾವಣೆಯ ಮೇಲೆ ಪರಿಣಾಮ ಬೀರುವ ದೃಷ್ಟಿಯಿಂದ ಕೇಂದ್ರ ಸರ್ಕಾರದಲ್ಲಿನ ತಮ್ಮ ಪ್ರಭಾವ ಬಳಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ನಿಲ್ಲಿಸಿದ್ದರು.
ವರ್ತುಳ ರಸ್ತೆಯಿಂದ ಬಾಧಿತವಾಗುವ ಗ್ರಾಮಗಳು: ಅಗಸಗೆ, ಕಡೋಲಿ, ಗೊಜಗೆ, ಮಣ್ಣೂರು ಅಂಬೇವಾಡಿ, ಕಲ್ಲೇಹೋಳ್, ಉಚಗಾಂವ, ತುರಮರಿ, ಬಾಚಿ, ಬೀಗುಂಡಿ, ಬಿಜಗಾಮಿ, ನಾವಗೆ, ಸಂತಿಬಸ್ತವಾಡ, ಬಹದರವಾಡಿ ವಾಘವಾಡೆ, ಝಾಡ್-ಶಹಾಪುರ.ಭಾಗದ ರೈತರು ರಿಂಗ್ ರಸ್ತೆ ನಿರ್ಮಾಣಕ್ಕಾಗಿ ತಮ್ಮ ಜಮೀನು ಕಳೆದುಕೊಳ್ಳಲಿದ್ದಾರೆ.