ಬೆಳಗಾವಿ: ಕೊಲ್ಲಾಪುರದಲ್ಲಿ ಶಿವಸೇನೆ ಉದ್ದಟತನ ಪ್ರದರ್ಶನ ಮಾಡಿದೆ ನಗರಾಭಿವೃದ್ದಿ ಸಚಿವ ರೋಷನ್ ಬೇಗ್ ವಿರುದ್ದ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆಯಿಂದ ಪ್ರತಿಭಟನೆ ವ್ಯೆಕ್ತವಾಗಿದೆ
ಕೊಲ್ಲಾಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ಶಿವಸೇನೆ ಪುಂಡರು ನಮ್ಮ ರಾಜ್ಯದ ಸಾರಿಗೆ ಬಸ್ಸುಗಳ ಮುಂದಿನ ಗಾಜಿನ ಮೇಲೆ ಜೈ ಮಹಾರಾಷ್ಟ್ರ, ಶಿವಸೇನಾ ಅಂತ ಬರೆದ ಬಿತ್ತಿಪತ್ರ ಅಂಟಿಸಿ ಹಾಗೂ ಆಯಿಲ್ ಪೆಂಟಿನಿಂದ ಬರೆದು ಉದ್ದಟತನ ಪ್ರದರ್ಶನ ಮಾಡಿದ್ದಾರೆ
ಕರ್ನಾಟಕ ಸರ್ಕಾರ ಮತ್ತು ಸಚಿವ ರೋಷನ್ ಬೇಗ್ ವಿರುದ್ದ ದಿಕ್ಕಾರದ ಘೋಷಣೆ ಕೂಗುತ್ತಿರುವ ಶಿವಸೇನೆ ಕಾರ್ಯಕರ್ತರು. ರಾಜ್ಯ ಸಾರಿಗೆ ಬಸ್ಸುಗಳನ್ನು ತಡೆದ ನಾಡದ್ರೋಹಿ ಶಿವಸೇನೆ ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪುಂಡಾಟಿಕೆ ಪ್ರದರ್ಶನ ಮಾಡಿದೆ
ನಾಡದ್ರೋಹಿ ಚಟುವಟಿಕೆಯಲ್ಲಿ ಭಾಗವಹಿಸುವ ಮತ್ತು ನಾಡದ್ರೋಹಿ ಘೋಷಣೆ ಕೂಗುವ ಪಾಲಿಕೆ ಎಂಇಎಸ್ ಸದಸ್ಯರ ಸದಸ್ಯತ್ವ ರದ್ದು ಮಾಡುವುದಾಗಿ ಹೇಳಿಕೆ ನೀಡಿದ್ದ ಸಚಿವ ರೋಷನ್ ಬೇಗ್. ವಿರುದ್ಧ ಶಿವಸೇನೆ ಆಕ್ರೋಶ ವ್ಯಕ್ತಪಡಿಸಿ ಈ ರೀತಿ ಪ್ರತಿಭಟನೆ ಮಾಡಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ