Breaking News
Home / Breaking News / ಜಾರಕಿಹೊಳಿ ಸಹೋದರರ ನಾಟಕ ಇನ್ನೆಷ್ಟು ದಿನ..

ಜಾರಕಿಹೊಳಿ ಸಹೋದರರ ನಾಟಕ ಇನ್ನೆಷ್ಟು ದಿನ..

, LOCAL NEWS Leave a comment 7,302 Views

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಸಹೋದರರು ಒಬ್ಬರ ಮೇಲೆ ಇನ್ನೊಬ್ಬರು ಆರೋಪ ಪ್ರತ್ಯಾರೋಪ ಮಾಡಿ ಸಹೋದರರ ನಡುವೆ ಜಗಳ ಇದೆ ಎಂದು ಬಿಂಬಿಸಲು ಹೊರಟಿದ್ದು ಇದೆಲ್ಲ ಸಹೋದರರ ನಾಟಕ ಅನ್ನೋದು ಈಗ ಎಲ್ಲರಿಗೂ ಗೊತ್ತಾಗಿದೆ

ಮಾನ್ಯ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ಸಚಿವ ಸ್ಥಾನ ಕಳೆದುಕೊಂಡ ನಂತರ ನೀರಿನಿಂದ ಹೊರಗೆ ಬಂದ ನೀರಿನಂತೆ ಪರದಾಡುತ್ತಿದ್ದಾರೆ ಇನ್ನೊಂದು ಕಡೆ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ಟೀಕಾ ಪ್ರಹಾರ ಮಾಡುತ್ತಿದ್ದಾರೆ ಇದನ್ನೆಲ್ಲ ನೋಡಿದ್ರೆ ಸಹೋದರರ ನಡುವೆ ತಿಕ್ಕಾಟ ಇರಬಹುದು ಎಂದು ನಂಬಿದ ಅವರ ಅಭಿಮಾನಿಗಳು ಕಂಗಾಲಾಗಿದ್ದಾರೆ

ಸತೀಶ ಜಾರಕಿಹೊಳಿ ಕಟ್ಟಾ ಬೆಂಬಲಿಗರಾದ ಸುರೇಶ ತಳವಾರ ಜಯಶ್ರೀ ಮಾಳಗಿ ರವಿ ಧೋತ್ರೆ ಮತ್ತು ಬೆಳಗಾವಿ ಉಪ ಮೇಯರ್ ಮಂಡೋಳ್ಕರ್ ಅವರು ರಮೇಶ ಜಾರಕಿಹೊಳಿ ಮಂತ್ರಿ ಆಗುತ್ತಿದ್ದಂತೆಯೇ ರಮೇಶ ಜಾರಕಿಹೊಳಿ ಅವರ ತೆಕ್ಕೆಗೆ ಬಂದ್ರು ಇದು ಹೇಗೆ ಸಾಧ್ಯ ಅನ್ನೋದು ನಮಗೆ ತಿಳಿಯುತ್ತಿಲ್ಲ ಏಕೆಂದರೆ ಸಹೋದರರುರು ಆಂತರಿಕವಾಗಿ ಒಂದಾಗಿದ್ದಾರೆ ಬೆಂಬಲಿಗರನ್ನು ತಮಗೆ ಬೇಕಾದಂತೆ ಬಳಿಸಿಕೊಳ್ಳುತ್ತಿದ್ದಾರೆ ಅನ್ನೋದು ಸಾಭೀತಾಗಿದೆ

ರಮೇಶ ಜಾರಕಿಹೊಳಿ ಅವರು ಮೊದಲು ನಾವು ಲಖನ್ ಜಾರಕಿಹೊಳಿ ಅವರನ್ನು ಬೆಳಗಾವಿ ಉತ್ತರದಿಂದ ಅಥವಾ ಯಮಕನಮರ್ಡಿಯಿಂದ ಸ್ಪರ್ದೆ ಮಾಡಿ ಸತೀಶ್ ಜಾರಕಿಹೊಳಿ ಅವರನ್ನು ಸೋಲಿಸುವದು ಖಚಿತ ಎನ್ನುವ ಸಂದೇಶ ನೀಡಿದ್ರು ಇದಾದ ಬಳಿಕ ಸತೀಶ್ ಜಾರಕುಹೊಳಿ ಅವರು ರಮೇಶ್ ಮೊದಲು ತಮ್ಮ ಟಿಕೆಟ್ ಕನ್ ಫರ್ಮ ಮಾಡಿಕೊಳ್ಳಲಿ ಎಂದು ಹೇಳಿಕೆ ನೀಡಿ ಸಹೋದರರ ನಡುವೆ ತಿಕ್ಕಾಟ ಈಗಲೂ ಇದೆ ಎನ್ನುವ ಸಂದೇಶ ನೀಡಿದ್ರು

ಆದರೆ ಸಹೋದರರ ನಡುವೆ ಎಂದಿಗೂ ತಿಕ್ಕಾಟ ನಡೆದಿಲ್ಲ ನಡೆಯುವದೂ ಇಲ್ಲ ಇಬ್ಬರು ಸಹೋದರರು ನಬ್ಬಿಬ್ಬರ ನಡುವೆ ತಿಕ್ಕಾಟ ಇದೆ ಎಂದು ಅವರನ್ನು ನಂಬಿದ ಅಭಿಮಾನಿಗಳಿಗೆ ಮೋಸ ಮಾಡುತ್ತಿದ್ದಾರೆ ಇದರ ಬಗ್ಗೆ ಇವರ ಅಭಿಮಾನಿಗಳು ತಿಳಿದುಕೊಂಡು ರಾಜಕಾರಣ ಮಾಡಿದ್ರೆ ಒಳ್ಳೆಯದು

ಜಾರಕಿಹೊಳಿ ಸಹೋದರರು ಎಂದಿಗೂ ತಿಕ್ಕಾಟ ಮಾಡಿದವರಲ್ಲ ನಮ್ಮಿಬ್ಬರು ಸಹೋದರರ ನಡುವೆ ಜಗಳ ಇದೆ ಎಂದು ಅಭಿಮಾನಿಗಳನ್ನು ಡಿವೈಡ್ ಮಾಡಿ ಅಭಿಮಾನಿಗಳನ್ನು ಹಂಚಿಕೊಳ್ಳುವದು ಇವರ ಪಾಲಿಟಿಕ್ಸ ಇವರ ರಾಜಕಾರಣಕ್ಕೆ ಅಭಿಮಾನಿಗಳು ಮೋಸ ಹೋಗದೇ ಜಾರಕಿಹಿಳಿ ಜಂಜಾಟ ಬಿಟ್ಟು ರಾಜಕಾರಣ ಮಾಡಬೇಕು ಅನ್ನೋದು ಅಭಿಮಾನಿಗಳಿಗೆ ನನ್ನದೊಂದು ಸಲಹೆ ಅಷ್ಟೆ ಈ ಸಲಹೆ ನನಗೆ ತುಟ್ಟಿ ಬೀಳಬಹುದು ಅದಕ್ಕೆ ನಾನೆಂದಿಗೂ ಹೆದರಿಲ್ಲ

About BGAdmin

Check Also

ಸತೀಶ ಜೊತೆ ಹೆಬ್ಬಾಳಕರ ಮಾತುಕತೆ ಎಂಪಿಎಂಸಿ ಹಾದಿ ಸುಗಮ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ ಮತ್ತು ಜಾರಕಿಹೊಳಿ ಸಹೋದರರ ನಡುವಿನ ಕಿತ್ತಾಟಕ್ಕೆ ಬ್ರೇಕ್ ಬಿದ್ದಿದೆ ಮಾಜಿ ಸಚಿವ ಸತೀಶ …

Leave a Reply

Your email address will not be published. Required fields are marked *