ಬೆಳಗಾವಿ-ನವದೆಹಲಿಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಭೇಟಿಯಾದ ರಮೇಶ್ ಜಾರಕಿಹೊಳಿ ದೆಹಲಿಯಲ್ಲೇ ಬಿಡುಬಿಟ್ಟಿದ್ದಾರೆ.ಏಕಾಂಗಿಯಾಗಿ ತೆರಳಿ ಅಮಿತ್ ಶಾ ಭೇಟಿಯಾಗಿ ಮಾತುಕತೆ ನಡೆಸಿದ ರಮೇಶ್ ಜಾರಕಿಹೊಳಿ,ರಾತ್ರಿ 11 ಗಂಟೆ ಸುಮಾರಿಗೆ ಸುಮಾರು 20 ನಿಮಿಷಗಳ ಕಾಲ ಮಾತುಕತೆ ಮಾಡಿದ್ದಾರೆ.
ಸುಮಾರು 20 ನಿಮಿಷಗಳ ಕಾಲ ಅಮಿತ್ ಶಾ ಜೊತೆ ಮಾತುಕತೆ ಮಾಡಿರುವ ರಮೇಶ್ ಜಾರಕಿಹೊಳಿ,ಸಿಡಿ ಬಿಡುಗಡೆ ಷಡ್ಯಂತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕೈವಾಡ ಇರುವ ಬಗ್ಗೆ ಆರೋಪ ಮಾಡಿದ್ದು,ತಮ್ಮ ಬಳಿ ಇದ್ದ ಸಾಕ್ಷ್ಯಗಳ ಬಗ್ಗೆ ಅಮಿತ್ ಶಾಗೆ ವಿವರಣೆ ನೀಡಿದ್ದಾರೆ.
ಸಿಡಿ ಪ್ರಕರಣದ ಆರೋಪಿ ಮನೆ ಮೇಲೆ ದಾಳಿ ಮಾಡಿದಾಗ ಹಲವು ಸಿಡಿಗಳು ಸಿಕ್ಕಿವೆ,ತಮ್ಮದಷ್ಟೇ ಅಲ್ಲ ಹಲವು ರಾಜಕೀಯ ನಾಯಕರ ಸಿಡಿಗಳನ್ನು ಸಹ ಮಾಡಲಾಗಿದೆ,ಈ ಆರೋಪಿಗಳ ಹಿಂದೆ ಬೆಂಬಲವಾಗಿ ಡಿ.ಕೆ.ಶಿವಕುಮಾರ್ ನಿಂತಿದ್ದಾರೆ.ಪ್ರಕರಣದ ತನಿಖೆ ಸರಿಯಾಗಿ ಆದ್ರೆ ಡಿ.ಕೆ.ಶಿವಕುಮಾರ್ ಮುಖವಾಡ ಬಯಲಾಗುತ್ತೆ ಎಂದಿರುವ ರಮೇಶ್ ಜಾರಕಿಹೊಳಿ ಅಮೀತ್ ಶಾ ಅವರಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಎರಡು ದಿನಗಳ ಬಳಿಕ ತಮ್ಮ ಜೊತೆ ಮಾತನಾಡುವೆ ಎಂದು ಹೇಳಿರುವ ಅಮೀತ್ ಶಾ ರಮೇಶ್ ಜಾರಕಿಹೊಳಿ ಅವರಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದು ಬಂದಿದೆ.ಇವತ್ತೂ ರಮೇಶ್ ಜಾರಕಿಹೊಳಿ ಅವರು ದೆಹಲಿಯಲ್ಲೇ ಬಿಡುಬಿಟ್ಟಿದ್ದು ಸಂಜೆ ಬೆಂಗಳೂರಿಗೆ ವಾಪಸ್ ಬರ್ತಾರೆ ಎನ್ನುವ ಮಾಹಿತಿ ಇದೆ.