ಬೆಳಗಾವಿ- ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು ತಮ್ಮ ತಮ್ಮ ಇಲಾಖೆಗಳ ಮಾಹಿತಿಗಳನ್ನು ತಮ್ಮ ಇಲಾಖೆಗಳ ವೆಬ್ ಸೈಟ್ ನಲ್ಲಿ ಅಪಡೇಟ್ ಮಾಡಿದರೆ ಸಾರ್ವಜನಿಕರು ಮಾಹಿತಿ ಪಡೆಯಲು ಅನಕೂಲವಾಗುತ್ತದೆ ಅದಕ್ಕಾಗಿ ಈ ಕುರಿತು ಕ್ರಮ ಕೈಗೊಳ್ಳುವಂತೆ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಸೂಚಿಸಲಾಗುವದು ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತರು ತಿಳಿಸಿದ್ದಾರೆ
ಬೆಳಗಾವಿಯಲ್ಲಿ ಎಲ್ಲ ಇಲಾಖೆ ಗಳ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಹಕ್ಕು ಯೋಜನೆಯ ಸಾಧಕ ಭಾದಕಗಳನ್ನು ಆಲಿಸಿದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು ರಾಜ್ಯದಲ್ಲಿ ೩೦ ಸಾವಿರ ಅರ್ಜಿಗಳು ಬಾಕಿ ಇವೆ ಅದಕ್ಕಾಗಿ ಅವುಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆಯುಕ್ತ ಶಂಕರ ಪಾಟೀಲ ತಿಳಿಸಿದರು
ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗಿದೆ ಕೆಲವು ಅಧಿಕಾರಿಗಳು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ ಅದಕ್ಕೆ ರಾಜ್ಯಮಟ್ಟದ ಉನ್ನತ ಸಮೀತಿಯಲ್ಲಿ ಚರ್ಚಿಸಲಾಗುವದು ಎಂದು ಆಯುಕ್ತರು ತಿಳಿಸಿದರು
ಕೆಲವು ಆರ್ ಟಿ ಐ ಕಾರ್ಯಕರ್ತರು ಎಂದು ಹೇಳಿಕೊಂಡು ಅಧಿಕಾರಿಗಳಿಗಳಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಅವರು ಆರ್ ಟಿ ಐ ಕಾರ್ಯಕರ್ತರು ಆಗುವ ಮೊದಲು ಅವರ ಆರ್ಥಿಕ ಪರಿಸ್ಥಿತಿ ಹೇಗಿತ್ತು ಈಗ ಅವರು ಎಷ್ಟು ಹಣ ಸಂಪಾದನೆ ಮಾಡಿದ್ದಾರೆ ಅನ್ನೋದರ ಬಗ್ಗೆ ಪರಶೀಲಿಸುವ ಮತ್ತು ತನಿಖೆ ಮಾಡುವ ಅಧಿಕಾರ ಮಾಹಿತಿ ಹಕ್ಕು ಆಯೋಗಕ್ಕೆ ಇದೇಯಾ ಎಂದು ಮಾದ್ಯಮಗಳು ಕೇಳಿದ ಪ್ರಶ್ನೆಗೆ ಆಯುಕ್ತರು ನೋ ಕಾಮೇಂಟ್ಸ ಎಂದು ಆಯುಕ್ತರು ಹೇಳಿ ಈ ಬಗ್ಗೆ ಚಿಂತನೆ ಮಾಡುತ್ತೇವೆ ಎಂದರು
ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಹೆಚ್ಚುವರಿ ಎಸ್ಪಿ ಗಡಾದ ಅವರು ಉಪಸ್ಥಿತರಿದ್ದರು
ಬೆಟ್ಟ ಎಷ್ಟು ಗುಡ್ಡ ಎಷ್ಡು…?
ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷರು ಅಧಿಕಾರಿಗಳ ಸಭೆ ನಡೆಸಿ ಅಧಿಕಾರಿಗಳ ಸಮಸ್ಯೆ ಆಲಿಸುವ ಸಂಧರ್ಭದಲ್ಲಿ ಸರ್ವೆ ಇಲಾಖೆಯ ಶ್ರೀಮತಿ ಪೀರಜಾದೆ ಮಾತನಾಡಿ ಸರ್ ಒಬ್ಬ ವ್ಯೆಕ್ತಿ ರಾಜ್ಯದಲ್ಲಿರುವ ಗುಡ್ಡ ,ಎಷ್ಟು ಬೆಟ್ಟ ಎಷ್ಟು ರಾಜ್ಯದಲ್ಲಿ ಎಷ್ಡು ಕೆರೆಗಳಿವೆ ಅವುಗಳ ವಿಸ್ತೀರ್ಣ ಎಷ್ಡು ಎಂದು ಮಾಹಿತಿ ಕೇಳಿದ್ದಾರೆ ಈ ಮಾಹಿತಿ ನನ್ನ ಹತ್ತಿರ ಇಲ್ಲ ಈ ಅರ್ಜಿಯನ್ನು ಎಲ್ಲಿ ಗೆ ಕಳುಹಿಸಲಿ ಎಂದು ಸಭೆಯಲ್ಲಿ ಕೇಳಿದಾಗ ಸಭೆಯಲ್ಲಿ ಕೆಲ ಕಾಲ ಸಭೆ ನೆಗೆಗಡಲಲ್ಲಿ ತೇಲಿತು